SA ಸರಣಿಗೆ ಭಾರತ ತಂಡ ಆಯ್ಕೆ ! ಮೊದಲ ಬಾರಿಗೆ ಕನ್ನಡಿಗ ಸುನಿಲ್ ಜೋಶಿ ರವರ ನೇತೃತ್ವದಲ್ಲಿ ಆಯ್ಕೆಮಾಡಿದ ಆಟಗಾರರು ಯಾರ್ಯಾರು ಗೊತ್ತಾ??

SA ಸರಣಿಗೆ ಭಾರತ ತಂಡ ಆಯ್ಕೆ ! ಮೊದಲ ಬಾರಿಗೆ ಕನ್ನಡಿಗ ಸುನಿಲ್ ಜೋಶಿ ರವರ ನೇತೃತ್ವದಲ್ಲಿ ಆಯ್ಕೆಮಾಡಿದ ಆಟಗಾರರು ಯಾರ್ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ಕ್ರಿಕೆಟ್ ತಂಡದ ಹೊಸ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಕನ್ನಡಿಗ ಸುನಿಲ್ ಜೋಶಿ ರವರ ಆಯ್ಕೆಯ ಬೆನ್ನಲ್ಲೇ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಸುನಿಲ್ ಜೋಶಿ ರವರು ತಂಡದ ಆಯ್ಕೆಯಲ್ಲಿ ಭಾಗಿಯಾಗಿದ್ದು, ಎಲ್ಲರೂ ಊಹೆ ಮಾಡಿದಂತೆ ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ತೆಗೆದುಕೊಂಡಿಲ್ಲ. ವಿರಾಟ್ ಕೊಹ್ಲಿ ರವರು ವಿಶ್ರಾಂತಿ ತೆಗೆದುಕೊಂಡು ಕೆ ಎಲ್ ರಾಹುಲ್ ರವರು ನಾಯಕರಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ವಿರಾಟ್ ಕೊಹ್ಲಿ
ಅವರು ತಂಡದಲ್ಲಿ ಮುಂದುವರೆದಿದ್ದು ಘಟಾನುಘಟಿಗಳಾದ ಭುವನೇಶ್ವರ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸಾಗಿದ್ದಾರೆ. ಇನ್ನು ಯುವ ಆಟಗಾರ ಶುಭಂ ಗಿಲ್ ರವರು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಶಿಖರ್ ಧವನ್ ಮತ್ತೆ ತಂಡಕ್ಕೆ ವಾಪಸಾಗಿದ್ದಾರೆ. ಒಟ್ಟಾರೆಯಾಗಿ ತಂಡ ಈ ಕೆಳಗಿನಂತಿದೆ.

ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (C), ಶ್ರೇಯಸ್ ಅಯ್ಯರ್, ಲೋಕೇಶ್ ರಾಹುಲ್ (WK), ಮನೀಶ್ ಪಾಂಡೆ, ರಿಷಭ್ ಪಂತ್, ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಭುವನೇಶ್ವರ್, ಜಾಸ್ಪೀತ್ ಬುಮ್ರಾ, ಶಮಿ