ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡ ಸ್ಪಿನ್ನರ್ ಹರ್ಭಜನ್ ಸಿಂಗ್ ! ಮೊಟ್ಟಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಹೇಳಿದ್ದೇನು ಗೊತ್ತಾ ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತ ತಂಡದಲ್ಲಿ ಪದೇಪದೇ ಚಾನ್ಸ್ ಪಡೆದುಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವ ವಾಶಿಂಗ್ಟನ್ ಸುಂದರ್ ಅವರ ಆಯ್ಕೆಯ ಬಗ್ಗೆ ಹಲವಾರು ದಿನಗಳಿಂದ ಚರ್ಚೆ ನಡೆಯುತ್ತಿದೆ.

ಈತ ಅಂಡರ್ 19 ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಬಿಟ್ಟರೇ ಉಳಿದ ಯಾವ ಸರಣಿಗಳಲ್ಲಿ ಅಥವಾ ಟೂರ್ನಿಗಳಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಪ್ರದರ್ಶನ ನೀಡಿಲ್ಲ. ಬ್ಯಾಟಿಂಗ್ನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ, ಬೌಲಿಂಗ್ನಲ್ಲಿ ಅಷ್ಟಾಗಿ ಬಾಲ್ ಸ್ಪಿನ್ ಮಾಡುತ್ತಿಲ್ಲ ಎಂಬ ಹಲವಾರು ಕಾರಣಗಳನ್ನು, ಹಲವಾರು ಜನ ನೀಡಿ ವಾಶಿಂಗ್ಟನ್ ಸುಂದರ್ ಅವರನ್ನು ಆಯ್ಕೆ ಮಾಡಬೇಡಿ ಎಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಈ ಸಾಲಿಗೆ ಇದೀಗ ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ರವರು ಸೇರಿಕೊಂಡಿದ್ದು ವಾಶಿಂಗ್ಟನ್ ಸುಂದರ್ ಅವರನ್ನು ಪಕ್ಕಕ್ಕಿಟ್ಟು ಕೆಲವು ಆಟಗಾರನನ್ನು ಆಯ್ಕೆ ಮಾಡುವಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಷಿಂಗ್ಟನ್ ಸುಂದರ್ ರವರು ಕೊಂಚ ಬ್ಯಾಟ್ ಮಾಡುತ್ತಾರೆ ಎಂಬ ಕಾರಣದಿಂದ ಪ್ರತಿ ಬಾರಿಯೂ ಅವರಿಗೆ ಚಾನ್ಸ್ ನೀಡಲಾಗುತ್ತಿದೆ, ಆದರೆ ಇಲ್ಲಿಯವರೆಗೂ ಅವರು ಮಿಂಚಿದ್ದನ್ನು ನಾನು ನೋಡಿಲ್ಲ. ಕೇರಳ ತಂಡದ ಜಲಾಜ್ ಸಕ್ಸೇನ ಹಾಗೂ ವಿದರ್ಭ ತಂಡದ ವಕಾರೆ ರವರು ರಣಜಿ ಟ್ರೋಫಿ ಸೇರಿದಂತೆ ಇತರ ಟೂರ್ನಿಗಳಲ್ಲಿ ಬಹಳ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಇವರಿಗೆ ಇಲ್ಲಿಯವರೆಗೂ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ, ಇನ್ನು ಶಬ್ದಾಜ್ ನದೀಮ್ ರವರು ಕೇವಲ ಒಂದು ಟೆಸ್ಟ್ ಪಂದ್ಯಕ್ಕೆ ಸೀಮಿತವಾಗಿ ಹೋದರು, ಇಂತಹ ಆಟಗಾರರನ್ನು ಆಯ್ಕೆ ಮಾಡದೇ ವಾಷಿಂಗ್ಟನ್ ಸುಂದರ್ ಅವರಂಥ ಆಟಗಾರರನ್ನು ಆಯ್ಕೆ ಮಾಡಿ ಭಾರತೀಯ ಯುವ ಆಟಗಾರರಲ್ಲಿ ಸ್ಪಿನ್ ಕೌಶಲ್ಯತೆ ಕುಸಿಯುತ್ತಿದೆ, ಸ್ಪಿನ್ ಬೌಲರ್ಗಳು ಮುಂದಿನ ಪೀಳಿಗೆಯಲ್ಲಿ ದೊರೆಯುವುದಿಲ್ಲ ಎಂದರೆ ಏನು ಮಾಡಲು ಸಾಧ್ಯ. ಇವರೆಲ್ಲರಿಗೂ ಅವಕಾಶ ನೀಡಿ, ತಮ್ಮ ಶಕ್ತಿ ಸಾಬೀತು ಮಾಡಲು ಕಾಲಾವಕಾಶ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.

Post Author: Ravi Yadav