ವಿಶ್ವಕಪ್ ಸೋಲಿನ ಬಳಿಕ ಶಫಾಲಿ ವರ್ಮ ಹಾಗೂ ಭಾರತೀಯ ವನಿತೆಯರ ಕುರಿತು ಖ್ಯಾತ ಬೌಲರ್ ಬ್ರೆಟ್ ಲೀ ರವರು ಹೇಳಿದ್ದೇನು??

ವಿಶ್ವಕಪ್ ಸೋಲಿನ ಬಳಿಕ ಶಫಾಲಿ ವರ್ಮ ಹಾಗೂ ಭಾರತೀಯ ವನಿತೆಯರ ಕುರಿತು ಖ್ಯಾತ ಬೌಲರ್ ಬ್ರೆಟ್ ಲೀ ರವರು ಹೇಳಿದ್ದೇನು??

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ವನಿತೆಯರು ವಿಶ್ವಕಪ್ ಟೂರ್ನಿಯಲ್ಲಿ ಆಟವಾಡಿದ ರೀತಿಯ ಕುರಿತು ಎಲ್ಲೆಡೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಪ್ರಶಸ್ತಿ ಗೆಲ್ಲದೇ ಇದ್ದರೂ ನೀವು ನಮ್ಮನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಎಲ್ಲರೂ ಭಾರತೀಯ ವನಿತೆಯರ ತಂಡದ ಬೆಂಬಲಕ್ಕೆ ನಿಂತಿದ್ದಾರೆ.

ಇದೀಗ ಶೆಫಾಲಿ ವರ್ಮ ಹಾಗೂ ಭಾರತೀಯ ವನಿತೆಯರ ಕುರಿತು ಮಾತನಾಡಿರುವ ಆಸ್ಟ್ರೇಲಿಯ ತಂಡದ ಖ್ಯಾತ ಮಾಜಿ ಬೌಲರ್ ಬ್ರೆಟ್ ಲೀ ರವರು, ಶೆಫಾಲಿ ವರ್ಮ ಅವರು ಕಣ್ಣೀರು ಹಾಕುವುದನ್ನು ನೋಡಲು ಬಹಳ ಕಷ್ಟವಾಯಿತು, ವಿಶ್ವಕಪ್ ಟೂರ್ನಿಯಲ್ಲಿ ಅವರು ಬ್ಯಾಟ್ ಮಾಡಿದ ರೀತಿ ಅದ್ಭುತವಾಗಿತ್ತು. ಕೊನೆಯ ಪಂದ್ಯದ ವರೆಗೂ
ಶೆಫಾಲಿ ವರ್ಮ ರವರು ಬ್ಯಾಟಿಂಗ್ನಲ್ಲಿ ಅಧಿಪತ್ಯ ಸಾಧಿಸಿದ್ದರು, ಆದರೆ ಕೊನೆಯ ಪಂದ್ಯದಲ್ಲಿ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು. ಆದರೆ ಅವರು ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ಮಾಡಿದ ರೀತಿಯ ಕುರಿತು ಹೆಮ್ಮೆ ಪಡಬೇಕು. ಇದೇ ಮೊಟ್ಟ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್ ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿರುವ ಶೆಫಾಲಿ ವರ್ಮ ರವರ ಪ್ರತಿಭೆ ಹಾಗೂ ಮಾನಸಿಕ ಶಕ್ತಿ ಎಷ್ಟು ಇದೆ ಎಂಬುದು ಇದೀಗ ಇಡೀ ವಿಶ್ವಕ್ಕೆ ತಿಳಿದಿದೆ.

ಖಂಡಿತ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಭಾವಶಾಲಿ ಆಟಗಾರ್ತಿಯಾಗಿ ಬದಲಾಗಲಿದ್ದಾರೆ. ಖಂಡಿತವಾಗಿಯೂ ಮುಂದೊಂದು ದಿನ ಮತ್ತಷ್ಟು ಶರವೇಗದಿಂದ ವಾಪಸ್ಸು ಬರಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಖಂಡಿತವಾಗಿಯೂ ಆಸ್ಟ್ರೇಲಿಯ ತಂಡದ ವಿರುದ್ಧ ಅತ್ಯುತ್ತಮ ಕಂಬ್ಯಾಕ್ ಮಾಡಿ ಹೆಚ್ಚು ರನ್ ಗಳಿಸುವುದನ್ನು ಎಲ್ಲರೂ ನೋಡುತ್ತೀರಿ, ಇನ್ನು ಭಾರತ ತಂಡದ ವನಿತೆಯರ ಬಗ್ಗೆ ನಾವು ಮೆಚ್ಚಿಕೊಳ್ಳಲೇಬೇಕು. ಇದು ಭಾರತ ತಂಡದ ವನಿತೆಯರಿಗೆ ಅಂತ್ಯವಲ್ಲ, ಬದಲಾಗಿ ಆರಂಭ, ಬಹುಶಹ ಭಾರತ ತಂಡದ ವನಿತೆಯರು ಫೈನಲ್ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗಿ ಆಟವಾಡಿದರು. ಇಲ್ಲಿಯವರೆಗೂ t-20 ಐಸಿಸಿ ಟೂರ್ನಮೆಂಟ್ ಗಳಲ್ಲಿ ಅವರು ಫೈನಲ್ ಪಂದ್ಯ ಆಡಿಲ್ಲ. ಅಷ್ಟೇ ಅಲ್ಲದೆ ಇದೇ ಮೊಟ್ಟಮೊದಲ ಬಾರಿಗೆ ಅಷ್ಟು ಜನರ ನಡುವೆ ಕ್ರಿಕೆಟ್ ಆಡಿದರು. ಸಾವಿರಾರು ಜನರ ಮುಂದೆ ಮೈದಾನದಲ್ಲಿ ಆಡಲು ಸಾಕಷ್ಟು ಅಭ್ಯಾಸ ಇರಬೇಕು, ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಖಂಡಿತ ಭಾರತ ವನಿತೆಯರ ತಂಡ ಎಲ್ಲರೂ ತಿರುಗಿ ನೋಡುವಂತೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿ ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ.