ಎಬಿಡಿ ಸೇರಿದಂತೆ ಮೂವರು ಆಟಗಾರರಿಗೆ ತಂಡಕ್ಕೆ ಮರಳುವಿಕೆಯ ಕುರಿತು ಕಠಿಣ ಸಂದೇಶ ರವಾನೆ ಮಾಡಿದ ಸೌತ್ ಆಫ್ರಿಕಾ ಕೋಚ್ ಮಾರ್ಕ್ ಬೌಚರ್.

ಎಬಿಡಿ ಸೇರಿದಂತೆ ಮೂವರು ಆಟಗಾರರಿಗೆ ತಂಡಕ್ಕೆ ಮರಳುವಿಕೆಯ ಕುರಿತು ಕಠಿಣ ಸಂದೇಶ ರವಾನೆ ಮಾಡಿದ ಸೌತ್ ಆಫ್ರಿಕಾ ಕೋಚ್ ಮಾರ್ಕ್ ಬೌಚರ್.

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಸೌತ್ ಆಫ್ರಿಕಾ ತಂಡವು ಫಾರ್ಮ್ ಕಳೆದುಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಂದ್ಯಗಳನ್ನು ಗೆಲ್ಲಲು ಬಹಳ ತಿಣುಕಾಡುತ್ತಿದೆ. ಇದನ್ನು ಗಮನಿಸಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್ ಆಗಿರುವ ಮಾರ್ಕ್ ಬೌಚರ್ ಅವರು, ತಂಡಕ್ಕೆ ಕೆಲ ಆಟಗಾರರನ್ನು ಮರಳಿ ಸೇರಿಸಿಕೊಳ್ಳಲು ಆಸಕ್ತಿ ತೋರಿದ್ದರು.


ಹೇಗಿದ್ದರೂ ಕಳೆದ ಬಾರಿ 50 ಓವರ್ ಗಳ ವಿಶ್ವಕಪ್ ನಡೆದಾಗ ತಂಡಕ್ಕೆ ವಾಪಸ್ಸು ಬರುತ್ತೇನೆಂದ ಡಿವಿಲಿಯರ್ಸ್ ರವರು ವಾಪಸ್ಸು ಬರುತ್ತಾರೆ. ಇವರ ಜೊತೆ ಕ್ರಿಸ್ ಮೋರಿಸ್ ಹಾಗೂ ನಿವೃತ್ತಿ ಘೋಷಣೆ ಮಾಡಿರುವ ಇಮ್ರಾನ್ ತಾಹಿರ್ ರವರನ್ನು ಕರೆತರುವ ಮೂಲಕ ಸೌತ್ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಬಲ ತುಂಬಲು ನಿರ್ಧಾರ ಮಾಡಿದ್ದರು. ಅಂದು ಕೊಂಡಂತೆ ಮೂರು ಜನರಿಗೆ ಆಹ್ವಾನ ನೀಡಿದ ಬಳಿಕ ಇದೀಗ ಅದ್ಯಾಕೋ ಎಬಿ ಡಿವಿಲಿಯರ್ಸ್ ಸೇರಿದಂತೆ ಇನ್ನುಳಿದ ಇಬ್ಬರು ಆಟಗಾರರು ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಅಭಿಮಾನಿಗಳು ಎಬಿ ಡಿವಿಲಿಯರ್ಸ್ ರವರು ಮತ್ತೊಮ್ಮೆ ಆಡುತ್ತಾರೆ ಎಂದು ಭಾರೀ ಖುಷಿಯಲ್ಲಿರುವ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಅಷ್ಟೇ ಅಲ್ಲದೆ ಕ್ರಿಸ್ ಮೋರಿಸ್ ಹಾಗೂ ಇಮ್ರಾನ್ ತಾಹಿರ್ ಅವರು ಕೂಡ ಈ ವಿಷಯದಲ್ಲಿ ಮೌನ ತಾಳಿದ್ದಾರೆ. ಇದನ್ನು ಗಮನಿಸಿರುವ ಸೌತ್ ಆಫ್ರಿಕಾ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಅವರು ಒಂದು ವೇಳೆ ನೀವು ಮುಂದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದರೇ ಜೂನ್ ಒಂದನೇ ತಾರೀಕಿಗೂ ಮುನ್ನ ಸೌತ್ ಆಫ್ರಿಕಾ ತಂಡದಲ್ಲಿ ಲಭ್ಯವಾಗಿರಬೇಕು ಹಾಗೂ ತಮ್ಮ ಶಕ್ತಿಯನ್ನು ಸಾಬೀತು ಪಡಿಸಬೇಕು. ಇಲ್ಲ ನಾವು ನೇರವಾಗಿ ವಿಶ್ವಕಪ್ ಗೆ ಬಂದು ಆಡುತ್ತೇವೆ ಎಂದರೆ ಸೌತ್ ಆಫ್ರಿಕಾ ತಂಡದಲ್ಲಿ ಸ್ಥಾನ ನೀಡಲು ಸಾಧ್ಯವಿಲ್ಲ, ಐಪಿಎಲ್ ಟೂರ್ನಿ ಮುಗಿದ ತಕ್ಷಣ ಬಂದು ಸೌತ್ ಆಫ್ರಿಕಾ ತಂಡವನ್ನು ಸೇರಿಕೊಂಡರೇ ಮಾತ್ರ ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ.