ವಿಶ್ವ ರ್ಯಾಂಕಿಂಗ್ನಲ್ಲಿ (Ranking) ರಾರಾಜಿಸಿದ ಶಫಾಲಿ ವರ್ಮ ! ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ ಲೇಡೀ ಸೆಹ್ವಾಗ್

ನಮಸ್ಕಾರ ಸ್ನೇಹಿತರೇ, ಇದೀಗ ವನಿತೆಯರ ಭಾರತ ತಂಡದ ಆರಂಭಿಕ ಆಟಗಾರ್ತಿ ಯಾಗಿರುವ ಶಫಾಲಿ ವರ್ಮ ರವರು ಯಾವ ರೀತಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ.

ಯಾವುದೇ ಅಂಜಿಕೆ ಇಲ್ಲದೆ ಬ್ಯಾಟಿಂಗ್ ಮಾಡಿ, ಭಾರತೀಯ ಕ್ರಿಕೆಟ್ ಲೆಜೆಂಡ್ ಸೆಹವಾಗ್ ರವರಂತೆ ಬ್ಯಾಟ್ ಬೀಸುತ್ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶಫಾಲಿ ವರ್ಮ ರವರು ಇದೀಗ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಹೌದು ಇದೀಗ ವನಿತೆಯರ ಟಿ-ಟ್ವೆಂಟಿ ಕ್ರಿಕೆಟಿನ ಐಸಿಸಿ ರ್ಯಾಂಕಿಂಗ್ ಪ್ರಕಟಣೆ ಗೊಂಡಿದ್ದು ಒಮ್ಮೆಲೆ ಬರೋಬ್ಬರಿ 19 ಸ್ಥಾನಗಳನ್ನು ಜಿಗಿದು ಅಗ್ರಸ್ಥಾನ ಪಡೆದು ಕೊಂಡಿದ್ದಾರೆ.

ಇತ್ತೀಚಿಗಷ್ಟೇ ವಿಶ್ವಕಪ್ ಸರಣಿಯಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶರ್ಮರವರು ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ವಿಶ್ವಕಪ್ ಆರಂಭವಾಗುವ ಮುನ್ನ ಇವರ ಸ್ಥಾನ 19, ಆದರೆ ಇದೀಗ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ ‌. ಇನ್ನು ಭಾರತೀಯ ವನಿತೆಯರ ಮತ್ತೊಬ್ಬರು ಆರಂಭಿಕ ಆಟಗಾರ್ತಿಯಾಗಿರುವ ಸ್ಮೃತಿ ಮಂದನ ರವರು ಎರಡು ಸ್ಥಾನ ಕೆಳಕ್ಕೆ ಬಂದು ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

Post Author: Ravi Yadav