ಸೆಮಿಫೈನಲ್ ಪಂದ್ಯ ಆಡದೇ ಫೈನಲ್ ತಲುಪಿದ ಭಾರತೀಯ ವನಿತೆಯರು ! ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸ್ಪೂರ್ತಿ ಮೆರೆದ ಭಾರತೀಯ ವನಿತೆಯರು ! ಹೇಳಿದ್ದೇನು ಗೊತ್ತಾ?

ಸೆಮಿಫೈನಲ್ ಪಂದ್ಯ ಆಡದೇ ಫೈನಲ್ ತಲುಪಿದ ಭಾರತೀಯ ವನಿತೆಯರು ! ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಸ್ಪೂರ್ತಿ ಮೆರೆದ ಭಾರತೀಯ ವನಿತೆಯರು ! ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ವನಿತೆಯರು ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಮಳೆ ಸುರಿಯುತ್ತಿರುವ ಕಾರಣ ಇಂದು ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯ ನಡೆಯಲಿಲ್ಲ.

ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ತಲುಪಿದ ಭಾರತೀಯ ವನಿತೆಯರ ತಂಡವು ಸೆಮಿಫೈನಲ್ ನ ಎದುರಾಳಿ ಇಂಗ್ಲೆಂಡ್ ತಂಡಕ್ಕಿಂತ ಹೆಚ್ಚು ಅಂಕಗಳನ್ನು ಹೊಂದಿದ್ದ ಕಾರಣ ಲೀಗ್ ಹಂತದ ಅಂಕ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ಪಂದ್ಯ ನಡೆಯದೇ ಹೋದರೂ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇದರ ನಂತರ ನಡೆದ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸಿದ ಭಾರತೀಯ ವನಿತೆಯರು ನೆಟ್ಟಿಗರ ಮನಗೆದ್ದಿದ್ದಾರೆ.

ಹೌದು, ಈ ಪಂದ್ಯದ ಫಲಿತಾಂಶದ ಕುರಿತು ಮಾತನಾಡಿರುವ ವನಿತೆಯರು, ವಿಶ್ವ ಕಪ್ ನಂತಹ ಮಹತ್ವದ ಟೂರ್ನಿಗಳಲ್ಲಿ ಪ್ರಮುಖವಾದ ಪಂದ್ಯಗಳಿಗೆ ಮೀಸಲು ದಿನವನ್ನು ಐಸಿಸಿ ನಿಗದಿಪಡಿಸಬೇಕು. ನಾವು ಫೈನಲ್ ಗೆ ತಲಿಪಿದ್ದು ಬಹಳ ಖುಷಿಯ ವಿಚಾರ, ನಮಗೆ ಅದರ ಕುರಿತು ಹೆಮ್ಮೆಯಿದೆ. ಆದರೆ ಪಂದ್ಯವನ್ನಾಡಿ ಗೆಲುವು ಸಾಧಿಸಿ ಬಂದಿದ್ದರೇ, ಅದರ ಸಂತೋಷವೇ ಬೇರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಭಾನುವಾರ ಭಾರತೀಯ ಕಾಲಮಾನದಲ್ಲಿ 1.30 ಕ್ಕೆ ಪಂದ್ಯ ಆರಂಭವಾಗಲಿದ್ದು ಆಸ್ಟ್ರೇಲಿಯಾ ದೇಶದ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಎರಡು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇದೇ ಮೊದಲ ಬಾರಿ ಫೈನಲ್ ತಲುಪಿರುವ ಭಾರತೀಯ ವನಿತೆಯರ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ವಿಜಯ ಪತಾಕೆ ಹಾರಿಸಲು ಎಂಬುದು ಎಲ್ಲರ ಆಸೆಯಾಗಿದೆ. ಭಾರತೀಯ ವನಿತೆಯರ ತಂಡಕ್ಕೆ ಶುಭವಾಗಲಿ ಎಂದು ಹಾರೈಸೋಣ.