ರಣಜಿ ಟ್ರೋಫಿ: ಸೆಮಿಫೈನಲ್ನಲ್ಲಿ ಕರ್ನಾಟಕಕ್ಕೆ ಬಾರಿ ನಿರಾಸೆ ! ಇಲ್ಲಿಗೆ ಕೊನೆಗೊಳ್ಳುವುದೇ ಕರ್ನಾಟಕ ಕನಸು?

ರಣಜಿ ಟ್ರೋಫಿ: ಸೆಮಿಫೈನಲ್ನಲ್ಲಿ ಕರ್ನಾಟಕಕ್ಕೆ ಬಾರಿ ನಿರಾಸೆ ! ಇಲ್ಲಿಗೆ ಕೊನೆಗೊಳ್ಳುವುದೇ ಕರ್ನಾಟಕ ಕನಸು?

ನಮಸ್ಕಾರ ಸ್ನೇಹಿತರೇ, ಇದೀಗ ನಡೆಯುತ್ತಿರುವ ಬಂಗಾಳ ಹಾಗೂ ಕರ್ನಾಟಕದ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಪಂದ್ಯದ ಮೊದಲನೇ ಅವಧಿಯಲ್ಲಿ ಕರ್ನಾಟಕ ತಂಡ ಉತ್ತಮ ಪ್ರದರ್ಶನ ನೀಡಿದ್ದು ಬಿಟ್ಟರೇ ಉಳಿದ ಅವಧಿ ಗಳೆಲ್ಲವೂ ಬಂಗಾಳ ತಂಡದ ಪಾಲಾಗಿದೆ.

ಹೌದು, ಮೊದಲ ಅವಧಿಯಲ್ಲಿ ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡವು ನಿಮಗೆಲ್ಲರಿಗೂ ತಿಳಿದಿರುವಂತೆ 67 ರನ್ನುಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ತದನಂತರ ಚೇತರಿಗೆ ಗೊಂಡು ಅನುಷ್ಟಪ್ ಮುಂಜುಮ್ದಾರ್ ರವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಮುನ್ನೂರರ ಗಡಿ ದಾಟಿತ್ತು. ಇದಕ್ಕೆ ಬದಲಾಗಿ ತನ್ನ ಮೊದಲನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಕೆ ಎಲ್ ರಾಹುಲ್, ಮನೀಶ್ ಪಾಂಡೆ ರವರಂತಹ ಬಲಾಡ್ಯ ಬ್ಯಾಟ್ಸ್ಮನ್ಗಳು ಇದ್ದರೂ ಕೂಡ ತನ್ನ ಇನ್ನಿಂಗ್ಸನ್ನು ಕೇವಲ 122 ರನ್ ಗಳಿಗೆ ಮುಗಿಸಿದೆ.

ಈ ಮೂಲಕ ಮೊದಲನೇ ಇನ್ನಿಂಗ್ಸ್ನಲ್ಲಿ 190 ರನ್ ಗಳ ಹಿನ್ನಡೆ ಅನುಭವಿಸಿತು. ಇದೀಗ ತನ್ನ ಎರಡನೇ ಇನಿಂಗ್ಸ್ ಆರಂಭಿಸಿರುವ ಬಂಗಾಳ ತಂಡವು 72 ರನ್ ಗಳನ್ನು ಗಳಿಸಿ 4 ವಿಕೆಟ್ ಗಳನ್ನು ಕಳೆದುಕೊಂಡಿದೆ. ಇನ್ನು ಬಂಗಾಳ ತಂಡದ ಕೈಯಲ್ಲಿ 6 ವಿಕೆಟ್ ಗಳಿದ್ದು ಈಗಾಗಲೇ 262 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ಕರ್ನಾಟಕ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು, ಪಂದ್ಯ ಡ್ರಾ ಗೊಂಡರು ಕೂಡ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಬಂಗಾಳ ತಂಡ ಫೈನಲ್ ತಲುಪಲಿದೆ.