ರಕ್ಷಣಾ ಒಪ್ಪಂದ: ರಷ್ಯಾ, ಪೋಲೆಂಡ್ ನಂತಹ ಬಲಾಡ್ಯ ರಾಷ್ಟ್ರಗಳನ್ನು ಹಿಂದಿಕ್ಕಿ ಐತಿಹಾಸಿಕ ಕ್ಷಣ ಸೃಷ್ಟಿಸಿದ ಭಾರತ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನವಭಾರತ ಇದೀಗ ವಿಶ್ವಮಟ್ಟದಲ್ಲಿ ರಾರಾಜಿಸುವ ದಿನಗಳು ಬಹಳ ಹತ್ತಿರದಲ್ಲಿ ಇದೆ ಎಂಬ ಮಾತು ಈ ಘಟನೆಯಿಂದ ಮತ್ತಷ್ಟು ಬಲಗೊಂಡಿದೆ. ಆದರೆ ಇಂತಹ ಐತಿಹಾಸಿಕ ಕ್ಷಣವನ್ನು ತೋರಿಸಲು ಕೂಡ ನಮ್ಮ ಮಾಧ್ಯಮಗಳ ಬಳಿ ಸಮಯವಿಲ್ಲ, ಕೇವಲ ಟಿಆರ್ಪಿ ಗಳಿಗಾಗಿ ಬದುಕುತ್ತಿವೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಷ್ಟು ದಿವಸ ಭಾರತ ದೇಶವು ಬಹುತೇಕ ರಕ್ಷಣಾ ಸಾಮಾಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದರಿಂದ ಭಾರತೀಯ ಆರ್ಥಿಕ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇದೀಗ ನರೇಂದ್ರ ಮೋದಿರವರು ತಮ್ಮ ಕನಸಿನ ಯೋಜನೆಯಾದ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯ ಅಡಿಯಲ್ಲಿ ಭಾರತದಲ್ಲಿಯೇ ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸಲು ಕೆಲವೇ ಕೆಲವು ವರ್ಷಗಳ ಹಿಂದೆ ನಿರ್ಧಾರ ಮಾಡಿ ಯೋಜನೆ ಘೋಷಿಸಿದ್ದರು.

ಇದೀಗ ಈ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ತಯಾರಾದ ರಕ್ಷಣಾ ಸಾಮಗ್ರಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಆರಂಭಿಸಿವೆ. ಹೌದು, ಇದೇ ಮೊಟ್ಟ ಮೊದಲ ಬಾರಿಗೆ ಭಾರತ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾ ಸಾಮಗ್ರಿಗಳ ರಫ್ತಿನಲ್ಲಿ ಭಾರಿ ಛಾಪು ಮೂಡಿಸಿರುವ ರಷ್ಯಾ ಹಾಗೂ ಪೋಲೆಂಡ್ ನಂತಹ ದೇಶಗಳನ್ನು ಹಿಂದಕ್ಕೆ ಹಾಕಿದೆ. ಅರ್ಮೇನಿಯ ದೇಶವು 40 ಮಿಲಿಯನ್ ಯುಎಸ್ ಡಾಲರ್ ವೆಚ್ಚದ ರಕ್ಷಣ ಒಪ್ಪಂದಕ್ಕೆ ಸಂಬಂಧಿಸಿದ ಟೆಂಡರ್ ನಲ್ಲಿ ಭಾರತ ದೇಶವು ರಷ್ಯಾ ಹಾಗೂ
ಪೋಲೆಂಡ್ ದೇಶಗಳನ್ನು ಹಿಂದಿಕ್ಕಿ ಕಾಂಟ್ರಾಕ್ಟ್ ಪಡೆದುಕೊಂಡಿದೆ.

ಅರ್ಮೇನಿಯ ದೇಶವು ವೆಪನ್ ಲೊಕೇಟಿಂಗ್ ರೆಡಾರ್ ಗಳ ಅಗತ್ಯವಿದೆ ಎಂದು ಟೆಂಡರ್ ಕರೆದಾಗ ಸ್ಪರ್ಧೆಯಲ್ಲಿ ಭಾರತ, ರಷ್ಯಾ ಹಾಗೂ ಪೋಲೆಂಡ್ ದೇಶಗಳು ಭಾಗವಹಿಸಿದ್ದವು. ಮೂರು ದೇಶಗಳ ಲೊಕೇಟಿಂಗ್ ರೆಡಾರ್ ಗಳನ್ನು ಪರಿಶೀಲನೆ ನಡೆಸಿದ ಅರ್ಮೇನಿಯಾ ದೇಶವು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಯಾರಿಸಿರುವ ಸ್ವಾತಿ ಲೊಕೇಟಿಂಗ್ ರೇಡಾರ್ ಉಳಿದ ರಾಷ್ಟ್ರಗಳಿಗಿಂತ ಸುಲಭ ಹಾಗೂ ಸ್ಪಷ್ಟವಾಗಿ ತನ್ನ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಮೇನಿಯ ದೇಶ ಒಪ್ಪಿಕೊಂಡು ಭಾರತಕ್ಕೆ 40 ಮಿಲಿಯನ್ ಡಾಲರ್ ವೆಚ್ಚದಲ್ಲಿ ಸ್ವಾತಿ ಲೊಕೇಟಿಂಗ್ ಲೀಡರ್ ಗಳನ್ನು ರಫ್ತು ಮಾಡುವಂತೆ ಟೆಂಡರ್ ನೀಡಿದೆ. ಇದು ರಕ್ಷಣಾ ಕ್ಷೇತ್ರದಲ್ಲಿ ರಫ್ತನ್ನು ಉತ್ತೇಜಿಸಬೇಕು ಎಂದು ಕೇಂದ್ರ ಸರ್ಕಾರ ಇಟ್ಟಿರುವ ದಿಟ್ಟ ಹೆಜ್ಜೆ ಯಲ್ಲಿ ‌ ಮಹತ್ವದ ಪಾತ್ರವಹಿಸುತ್ತದೆ.

Post Author: Ravi Yadav