ವಿ-ಡಿಯೋ: 1 ಅಡಿ ವಿಕೆಟ್ಗಿಂತ ಹಿಂದೆ ಹೋಗಿ ಶರ್ಮ ಬೌಂಡರಿ ಗಳಿಸಿದ್ದು ಹೇಗೆ ಗೊತ್ತಾ? ನೆಟ್ಟಿಗರು ಮಹಿಳೆಯರ 360 ಆಟಗಾರ್ತಿ ಎನ್ನಲು ಕಾರಣವೇನು ಗೊತ್ತೇ??

ವಿ-ಡಿಯೋ: 1 ಅಡಿ ವಿಕೆಟ್ಗಿಂತ ಹಿಂದೆ ಹೋಗಿ ಶರ್ಮ ಬೌಂಡರಿ ಗಳಿಸಿದ್ದು ಹೇಗೆ ಗೊತ್ತಾ? ನೆಟ್ಟಿಗರು ಮಹಿಳೆಯರ 360 ಆಟಗಾರ್ತಿ ಎನ್ನಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇದೀಗ ಭಾರತೀಯ ವನಿತೆಯರು ಟಿ20 ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಯಾವ ರೀತಿ ಮಿಂಚುತ್ತಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ಶೆಫಾಲಿ ವರ್ಮ ರವರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ.

ಕಳೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಶೆಫಾಲಿ ವರ್ಮ ರವರು ಏಳು ಬೌಂಡರಿಗಳು ಹಾಗೂ ಒಂದು ಸಿಕ್ಸರ್ ಸಹಾಯದೊಂದಿಗೆ 34 ಎಸೆತಗಳಲ್ಲಿ 47 ರನ್ ಗಳಿಸಿ ಮಿಂಚಿದರು. ದುರದೃಷ್ಟವಶಾತ್ ಕೇವಲ ಮೂರು ರನ್ಗಳಿಂದ ಅರ್ಧ ಶತಕ ವಂಚಿತರಾದರು. ಇದೇ ಸಮಯದಲ್ಲಿ ಹತ್ತನೇ ಓವರ್ ನ ಮೊದಲ ಎಸೆತದಲ್ಲಿ ಶೆಫಾಲಿ ವರ್ಮ ರವರು ಶ್ರೀಲಂಕಾದ ಸ್ಪಿನ್ನರ್ ಶಶಿಕಲಾ ಸಿರಿ ವರ್ಧನೆ ರವರ ಎಸೆತಕ್ಕೆ ವಿಕೆಟ್ ಗಿಂತ ಒಂದು ಅಡಿ ಹಿಂದೆ ಹೋಗಿ ಬೌಂಡರಿ ಗಳಿಸುತ್ತಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲ್ ಕೊಂಚ ನಿಧಾನವಾದ ಕಾರಣ ತಕ್ಷಣವೇ ಎಚ್ಚೆತ್ತುಕೊಂಡು ಯಾವ ಆಟಗಾರರು ಎಲ್ಲಿ ಇದ್ದಾರೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಲೆಗ್ ಸೈಡ್ ಮೂಲಕ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಾರೆ. ಈ ವಿಚಿತ್ರ ಹಾಗೂ ವಿಶೇಷವಾದ ಹೊಡೆತ ಕೆಳಗಿನ ಟ್ವೀಟ್ ನಲ್ಲಿ ಇದ್ದು ನೀವೇ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.