ದಾದಾ ಮನವಿ ಮಾಡಿಕೊಂಡರೂ ಒಪ್ಪದ ತಂಡಗಳ ಆಯೋಜಕರು ! ಐಪಿಎಲ್ ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಭಾರಿ ನಿರಾಸೆ !

ದಾದಾ ಮನವಿ ಮಾಡಿಕೊಂಡರೂ ಒಪ್ಪದ ತಂಡಗಳ ಆಯೋಜಕರು ! ಐಪಿಎಲ್ ಆರಂಭಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ಭಾರಿ ನಿರಾಸೆ !

ನಮಸ್ಕಾರ ಸ್ನೇಹಿತರೇ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಐಪಿಎಲ್ ಟೂರ್ನಿಯು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗಲಿದೆ.

ಈಗಾಗಲೇ ರಣಜಿ ಅಥವಾ ರಾಷ್ಟ್ರೀಯ ಸೇವೆ ಸಲ್ಲಿಸುತ್ತಿರುವ ಆಟಗಾರರನ್ನು ಹೊರತು ಪಡಿಸಿ ಉಳಿದ ಆಟಗಾರರು ನೆಟ್ ಪ್ರಾಕ್ಟೀಸ್ ಆರಂಭ ಮಾಡಿದ್ದು, ಧೋನಿ, ಸುರೇಶ್ ರೈನಾ, ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್ ಸೇರಿದಂತೆ ವಿದೇಶಿ ಆಟಗಾರರು ಕೂಡ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಐಪಿಎಲ್ ಟೂರ್ನಿಗೆ ಉತ್ತಮ ಆರಂಭ ನೀಡಿ ಮತ್ತಷ್ಟು ಜನರನ್ನು ಸೆಳೆಯಬೇಕು ಎಂದು ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ರವರು, ಎಲ್ಲಾ ತಂಡಗಳಿಂದ ಪ್ರಮುಖ ಆಟಗಾರರನ್ನು ಆಯ್ಕೆ ಮಾಡಿ ಎರಡು ತಂಡಗಳಾಗಿ ವಿಭಜನೆ ಮಾಡಿ ಪಂದ್ಯ ನಡೆಸಿ ಅಭಿಮಾನಿಗಳಿಗೆ ರಸದೌತಣ ನೀಡಲು ಪ್ಲಾನ್ ಹಾಕಿದ್ದರು.ಆದರೆ ಇದೀಗ ಸೌರವ್ ಗಂಗೂಲಿ ರವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.

ಸ್ವತಹ ಸೌರವ್ ಗಂಗೂಲಿ ರವರೇ ಐಪಿಎಲ್ ತಂಡಗಳ ಮಾಲೀಕರ ಬಳಿ ಈ ಸುದ್ದಿ ಪ್ರಸ್ತಾಪಿಸಿದಾಗ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ವಿವಿಧ ರೀತಿಯ ಟೂರ್ನಿ ಗಳಿಂದ ಆಟಗಾರರು ವಿಶ್ರಾಂತಿ ಇಲ್ಲದೇ ಪಂದ್ಯಗಳ ಮೇಲೆ ಪಂದ್ಯ ಗಳಲ್ಲಿ ಆಟವಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಐಪಿಎಲ್ ಆರಂಭಕ್ಕೂ ಮುನ್ನ ಮತ್ತೊಂದು ಪಂದ್ಯ ಎಂದರೇ ಆಟಗಾರರಿಗೆ ವಿಶ್ರಾಂತಿ ಸಿಗುವುದಿಲ್ಲ ಎಂದು ತಂಡದ ಆಯೋಜಕರು ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಇಷ್ಟಾದರೂ ಪಟ್ಟುಬಿಡದ ಸೌರವ್ ಗಂಗೂಲಿ ರವರು, ಐಪಿಎಲ್ ಟೂರ್ನಿ ಮುಗಿದ ಬಳಿಕ ವಾದರೂ ಈ ಪಂದ್ಯವನ್ನು ನಡೆಸಬೇಕು ಎಂದು ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಆಟಗಾರರ ಕಾಲವಕಾಶ, ವಿಶ್ರಾಂತಿಯನ್ನು ಗಮನದಲ್ಲಿಟ್ಟು ಕೊಂಡು ಪಂದ್ಯ ನಡೆಸಬೇಕೋ ಇಲ್ಲವೋ ಎಂಬುದರ ಬಗ್ಗೆ ನಿರ್ಧಾರ ತೆಗೆದು ಕೊಳ್ಳುತ್ತೇವೆ ಎಂದು ತಂಡಗಳ ಆಯೋಜಕರು ತಿಳಿಸಿದ್ದಾರೆ.