ಕೊಹ್ಲಿ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿ ಸಲಹೆ ನೀಡಿದ ಲಕ್ಷ್ಮಣ್ ಸರ್ ! ಹೇಳಿದ್ದೇನು ಗೊತ್ತಾ??

ಕೊಹ್ಲಿ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿ ಸಲಹೆ ನೀಡಿದ ಲಕ್ಷ್ಮಣ್ ಸರ್ ! ಹೇಳಿದ್ದೇನು ಗೊತ್ತಾ??

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ರವರು ಎರಡು ಇನ್ನಿಂಗ್ಸ್ ಗಳಲ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.

ನಾಯಕನಾಗಿ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತಿರುವ ಕಾರಣ ಕೊಹ್ಲಿ ರವರ ಕಳೆದ 90 ದಿನಗಳ ಆಟದ ಬಗ್ಗೆ ಇದೀಗ ಕ್ರಿಕೆಟ್ ತಜ್ಞರು ಮಾತನಾಡುತ್ತಿದ್ದಾರೆ. ಹೌದು, ನಾಯಕ ವಿರಾಟ್ ಕೊಹ್ಲಿ ರವರು, ತಮ್ಮ ಕೊನೆಯ 20 ಇನ್ನಿಂಗ್ಸ್‌ ಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ ಒಂದು ಶತಕ ಕೂಡ ಬಾರಿಸಿಲ್ಲ. ನ್ಯೂಜಿಲೆಂಡ್‌ ಪ್ರವಾಸದಲ್ಲಿ ಕಳೆದ 9 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧ ಶತಕವನ್ನು ಮಾತ್ರ ಬಾರಿಸಿದ್ದಾರೆ. ಇದೀಗ ಇದರ ಕುರಿತು ಮಾತನಾಡಿರುವ ಮಾಜಿ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಅವರು, ವಿರಾಟ್ ಕೊಹ್ಲಿ ರವರಿಗೆ ಶಿಸ್ತಿನ ಕೊರತೆ ಇದೆ. ಅದೇ ಕಾರಣಕ್ಕಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.

ವಿರಾಟ್ ಕೊಹ್ಲಿ ರವರು ಹೆಚ್ಚು ಶಿಸ್ತು ಮತ್ತು ಹೆಚ್ಚು ತಾಳ್ಮೆ ತೋರಿಸಬೇಕು ಎಂದು ನಾನು ಭಾವಿಸುತ್ತೇನೆ, ಇನಿಂಗ್ಸ್ ಆರಂಭಿಸಿದ ರೀತಿಯಲ್ಲಿಯೇ ತಾಳ್ಮೆಯಿಂದ ಬ್ಯಾಟ್ ಬೀಸಬೇಕು, ಸ್ಟ್ರೋಕ್ ಆಟಗಾರನಿಗೆ, ಅದರಲ್ಲಿಯೂ ಯಾರಾದರೂ ಕಡಿಮೆ ಸ್ಕೋರ್ ಮಾಡುತ್ತಿರುವ ಸಂದರ್ಭದಲ್ಲಿ ಆತ್ಮವಿಶ್ವಾಸ ಹೆಚ್ಚಿರಬಾರದು, ತಾಳ್ಮೆಯಿಂದ ಬಾಲ್ ಎದುರಿಸಬೇಕು. ನನಗೆ ಗೊತ್ತು, ನೀವು ಹೆಚ್ಚು ರನ್ ಗಳಿಸಲು ಬಯಸುತ್ತೀರಿ. ನೀವು ಆಕ್ರಮಣ ಮಾಡಲು ಬಯಸುತ್ತೀರಿ, ಲೈನ್ ಅಂಡ್ ಲೆಂಥ್ ನೋಡಿಕೊಂಡು ಬ್ಯಾಟ್ ಬೀಸುತ್ತೀರಿ, ಆದರೆ ನ್ಯೂಜಿಲೆಂಡ್ ನೆಲಕ್ಕೆ ಅನುಗುಣವಾಗಿ ನೀವು ಬ್ಯಾಟ್ ಮಾಡಬೇಕು. ಇನ್ನಿಂಗ್ಸ್ ಪ್ರಾರಂಭದಲ್ಲಿ ವಿರಾಟ್ ಕೊಹ್ಲಿಯಿಂದ ನಾವು ನೋಡುವ ಶಿಸ್ತು ಕಾಣೆಯಾಗಿದೆ, 2 ನೇ ಇನ್ನಿಂಗ್ಸ್‌ನಲ್ಲಿಯೂ ಸಹ, ಉಪಖಂಡದ ಪರಿಸ್ಥಿತಿಗಳಲ್ಲಿ ಅಧ್ಭುತ ಡ್ರೈವ್‌ಗಳನ್ನು ನೋಡುತ್ತಿದ್ದೆವು. ಆದರೆ ಅದು ಕೂಡ ಕಾಣೆಯಾಗಿದೆ. ತಾಳ್ಮೆ ವಹಿಸಿ ಕೆಲವು ಬಾಲ್ ಗಳನ್ನೂ ಬಿಟ್ಟು ಆಟವಾಡಿದರೇ ಉತ್ತಮ ಎಂದು ಸಲಹೆ ನೀಡಿದ್ದಾರೆ.