ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ನಿರ್ಣಯ ಘೋಷಿಸಿದ ಸುರೇಶ್ ಕುಮಾರ್ ! ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮತ್ತೊಂದು ನಿರ್ಣಯ !

ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ನಿರ್ಣಯ ಘೋಷಿಸಿದ ಸುರೇಶ್ ಕುಮಾರ್ ! ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮತ್ತೊಂದು ನಿರ್ಣಯ !

ನಮಸ್ಕಾರ ಸ್ನೇಹಿತರೇ, ಶಿಕ್ಷಣ ಸಚಿವರಾದ ಮೇಲೆ ಹಲವಾರು ನಿರ್ಣಯಗಳನ್ನು ಕೈಗೊಂಡು ಶಿಕ್ಷಣ ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ಅನುಸರಿಸುತ್ತಿರುವ ಸುರೇಶ್ ಕುಮಾರ್ ಅವರು ಇದೀಗ ಮತ್ತೊಂದು ಉತ್ತಮ ನಿರ್ಧಾರ ತೆಗೆದು ಕೊಂಡಿದ್ದಾರೆ.

ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಖಾಸಗಿ ಶಾಲೆಗಳತ್ತ ಹೆಚ್ಚಾಗಿ ಪೋಷಕರು ಆಸಕ್ತಿ ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ತನ್ನದೇ ಆದ ಮಹತ್ವವನ್ನು ಕಳೆದುಕೊಳ್ಳುತ್ತಾ ಸಾಗುತ್ತಿವೆ. ಆದರೆ ಇತ್ತೀಚೆಗೆ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ರವರ ಕೆಲವೊಂದು ನಿರ್ಧಾರಗಳು ನಿಜವಾಗಲೂ ಖಾಸಗಿ ಶಾಲೆಗಳಿಗೆ ಸರ್ಕಾರಿ ಶಾಲೆಗಳು ಶೈಕ್ಷಣಿಕ ವಿಚಾರದಲ್ಲಿ ಪೈಪೋಟಿ ನೀಡಬಲ್ಲವೂ ಎಂಬ ಆಸೆಯನ್ನು ತುಸು ಹುಟ್ಟಿಸುತ್ತಿದೆ. ಈ ಆಸೆ ಮತ್ತಷ್ಟು ಹೆಚ್ಚಿಸುವಂತೆ ಇದೀಗ ಸುರೇಶ್ ಕುಮಾರ್ ರವರು ಸರ್ಕಾರಿ ಶಾಲೆಗಳಲ್ಲಿಯೂ ಎಲ್ಕೆಜಿ ಹಾಗೂ ಯುಕೆಜಿ ಆರಂಭ ಮಾಡಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಸಿದ್ದಾಪುರ ಶಾಲೆಯ ಶತಮಾನೋತ್ಸವ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಕುಮಾರ್ ರವರು, ಸರ್ಕಾರಿ ಶಾಲೆಗಳಲ್ಲಿ ಕೊಠಡಿ ಸಮಸ್ಯೆ ಇದೆ,
ಕೊಠಡಿ ಸಮಸ್ಯೆಗಳ ಬಗ್ಗೆ ಡಿಡಿಪಿಐ ಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಅಭಿವೃದ್ಧಿ ಪಡಿಸಲಾಗುವುದು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಯಾವುದೇ ಕಾರಣಕ್ಕೂ ದೇಶದ ವಿರುದ್ಧ ಎಂದಿಗೂ ಹೋಗುವುದಿಲ್ಲ, ಯಾಕೆಂದರೆ ಸರ್ಕಾರಿ ಶಾಲೆ ಇಲ್ಲಿ ಓದುವ ಮಕ್ಕಳಿಗೆ ಭಾರತೀಯ ನೆಲದ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ. ಶಿಕ್ಷಣ ಇಲಾಖೆ ಒಂದು ಬಡ ಇಲಾಖೆ, ಆದರೂ ಕೂಡ ಇಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಅವಕಾಶ ಇದೆ. ನನ್ನ ತಾಯಿ ಶಿಕ್ಷಕಿ ಆಗಿದ್ದರು, ಆದಕಾರಣ ಇದೀಗ ನನಗೆ ಶಿಕ್ಷಣ ಇಲಾಖೆಯ ಋಣ ತೀರಿಸುವ ಅವಕಾಶ ದೊರೆತಿದೆ. ಶಿಕ್ಷಣ ಇಲಾಖೆ ಅಭಿವೃದ್ಧಿಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.