ತಂದೆಯ ಚಿಕಿತ್ಸೆ ಫಲಕಾರಿಯಾಗಲಿಲ್ಲ ! ಆದರೆ ತಂದೆಗಾಗಿ ಜನರೇ ನೀಡಿದ ಹಣದಲ್ಲಿ ಉಳಿದಿದ್ದನ್ನು ಕುಲಕರ್ಣಿ ಅವರ ಪುತ್ರ ಏನು ಮಾಡಲಿದ್ದಾರಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇತ್ತೀಚೆಗೆ ಕಿರುತೆರೆಯ ಖ್ಯಾತ ನಟ ಸಂಜೀವ್ ಕುಲಕರ್ಣಿ ರವರು ನಮ್ಮೆಲ್ಲರನ್ನು ಅಗಲಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಕಳೆದ ಹದಿನೈದು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಂಜೀವ್ ರವರು ಇತ್ತೀಚೆಗೆ ಇಹಲೋಕ ತ್ಯಜಿಸಿದ್ದರು.

ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಸಂಜೀವ ಕುಲಕರ್ಣಿ ರವರಿಗೆ ಇತ್ತೀಚೆಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಹೇಳಿದರು. ಈ ಶಸ್ತ್ರ ಚಿಕಿತ್ಸೆಗೆ 45 ಲಕ್ಷ ರೂಪಾಯಿ ಬೇಕಾಗುತ್ತದೆ ಎಂಬುದು ತಿಳಿಯುತ್ತಿದ್ದಂತೆ ಮಿಲಾಪ್ ಎಂಬ ವೆಬ್ಸೈಟ್ ನ ಮೂಲಕ ಜನರ ಬಳಿ ಸಹಾಯ ಮಾಡುವಂತೆ ಮನವಿ ಮಾಡಿದರು. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ 38 ಲಕ್ಷಕ್ಕೂ ಹೆಚ್ಚು ರೂಪಾಯಿಗಳು ಕಲೆಕ್ಟ್ ಆಗಿದ್ದವು. ಆದರೆ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಸಂಜೀವ್ ಕುಲಕರ್ಣಿ ರವರು ನಮ್ಮೆಲ್ಲರನ್ನು ಅಗಲಿದರು. ಇದಾದ ಬಳಿಕ ಕಲೆಕ್ಟ್ ಆದ ಹಣ ಹೇಗೆ ಖರ್ಚಾಗಿದೆ ಹಾಗೂ ಎಷ್ಟು ಉಳಿದಿದೆ ಎಂಬುದರ ಲೆಕ್ಕ ನೀಡಲು ಸಂಜೀವ್ ಕುಲಕರ್ಣಿ ರವರ ಪುತ್ರ ಸೌರಭ್ ಕುಲಕರ್ಣಿ ರವರು ಫೇಸ್ಬುಕ್ನಲ್ಲಿ ಮಾತನಾಡಿ, ಸಂಪೂರ್ಣವಾಗಿ ಲೆಕ್ಕ ನೀಡಿ ಉಳಿದ ಹಣವನ್ನು ಏನು ಮಾಡುತ್ತೇನೆ ಎಂದು ವಿವರಿಸಿದ್ದಾರೆ.

ಮಿಲಾಪ್ ಅಕೌಂಟ್ಗೆ ನಲ್ಲಿ ಜನರು ನಮ್ಮ ತಂದೆಗಾಗಿ 38,95,281 ರೂಪಾಯಿ ಹಣ ನೀಡಿದ್ದರು. ಆದರೆ ತಮ್ಮದೇ ಆದ ಲೆಕ್ಕಾಚಾರದ ಮೂಲಕ ಮಿಲಾಪ್ ಸಂಸ್ಥೆಯು ಕಮಿಷನ್ ಹಣವನ್ನು ಕಟ್ ಮಾಡಿ ನಮಗೆ 35,98,611 ರೂಪಾಯಿಗಳನ್ನು ನೀಡಿತು. ಇನ್ನು ಸುಮಾರು 26 ಲಕ್ಷ ಗಳಿಗೂ ಹೆಚ್ಚು ಹಣ ನಾರಾಯಣ ಹೃದಯದಲ್ಲಿ ಬಿಲ್ಲಾಗಿತ್ತು. ಆದರೆ ನಾರಾಯಣ ಹೃದಯಾಲಯ ಸಂಸ್ಥೆಯು ನಮಗೆ 5,53,590 ರೂಪಾಯಿ ರಿಯಾಯಿತಿ ನೀಡಿದ್ದು, 21,09,835 ರೂಪಾಯಿ ಆಸ್ಪತ್ರೆ ಬಿಲ್ ಕಟ್ಟಿದೆವು. ತದನಂತರ ಅಪ್ಪನ ಅಕೌಂಟ್ನಲ್ಲಿ 14,88,776 ರೂಪಾಯಿ ಹಾಗೆಯೇ ಉಳಿದಿದೆ. ಈ ಹಣದಲ್ಲಿ ನಮಗೆ ಒಂದು ರೂಪಾಯಿ ಕೂಡ ಬೇಡ, ದಯವಿಟ್ಟು ಯಾರಾದರೂ ಅಗತ್ಯವಿದ್ದರೇ ನಮ್ಮನ್ನು ಸಂಪರ್ಕಿಸಿ. ಈ ಸಂಪೂರ್ಣ ಹಣವನ್ನು ಅಗತ್ಯವಿರುವ ಯಾರಾದರೂ ಬಳಸಿಕೊಳ್ಳ ಬಹುದು ಎಂದು ಲೆಕ್ಕಾಚಾರದ ಸಮೇತ ವಿವರಣೆ ನೀಡಿದ್ದಾರೆ. ಇವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು ಸೌರಭ್ ಅವರ ಮಾತುಗಳನ್ನು ಕೇಳಿದ ಪ್ರತಿಯೊಬ್ಬರೂ ಪ್ರಶಂಸೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Post Author: Ravi Yadav