ವೈರಲ್ ಆಯ್ತು ವಿಡಿಯೋ: ಬ್ಯಾಟಿಂಗ್ನಲ್ಲಿ ವಿಫಲ ! ಫೀಲ್ಡಿಂಗ್ ನಲ್ಲಿ ಜನರ ಮನಗೆದ್ದ ಸಂಜು ಸ್ಯಾಮ್ಸನ್!

ವೈರಲ್ ಆಯ್ತು ವಿಡಿಯೋ: ಬ್ಯಾಟಿಂಗ್ನಲ್ಲಿ ವಿಫಲ ! ಫೀಲ್ಡಿಂಗ್ ನಲ್ಲಿ ಜನರ ಮನಗೆದ್ದ ಸಂಜು ಸ್ಯಾಮ್ಸನ್!

ನಮಸ್ಕಾರ ಸ್ನೇಹಿತರೇ ಇದೀಗ ಭಾರತ ತಂಡವು ನ್ಯೂಜಿಲೆಂಡ್ ನೆಲದಲ್ಲಿ ಐದಕ್ಕೇ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ನ್ಯೂಜಿಲೆಂಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ವೈಟ್ ವಾಶ್ ಮಾಡಿದ ಸಾಧನೆ ಮಾಡಿದೆ.

ದೇಶಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಾರಣ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಕೊಂಡಿದ್ದ ಸಂಜು ಸ್ಯಾಮ್ಸನ್ ರವರು ಕಳೆದ ಎರಡು ಪಂದ್ಯಗಳಿಂದ ಆಡಲು ಅವಕಾಶ ಪಡೆದು ಕೊಂಡಿದ್ದಾರೆ. ಆದರೆ ಎರಡು ಪಂದ್ಯಗಳಲ್ಲೂ ವಿಫಲವಾಗಿ ಕೇವಲ 10 ರನ್ ಗಳಿಸುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ. ಹಲವಾರು ಸರಣಿಗಳಿಂದ ಬೆಂಚ್ ಕಾಯುತ್ತಿದ್ದ ಸಂಜು ಸ್ಯಾಮ್ಸನ್ ರವರು ತಮಗೆ ಸಿಕ್ಕ ಅವಕಾಶವನ್ನು ಬ್ಯಾಟಿಂಗ್ನಲ್ಲಿ ಸದುಪಯೋಗ ಪಡಿಸಿಕೊಳ್ಳಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡ ಮೇಲೆ ಫೀಲ್ಡಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಾರೆ.

ಹೌದು, ನ್ಯೂಜಿಲೆಂಡ್ ವಿರುದ್ಧ ನಡೆದ ಐದನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟ್ಸ್ ಮ್ಯಾನ್ ರಾಸ್ ಟೈಲರ್ ರವರು ಎಂಟನೇ ಓವರ್ನಲ್ಲಿ ಚೆಂಡನ್ನು ಬೌಂಡರಿ ಕಡೆಗೆ ಬಾರಿಸಿದರು. ಇನ್ನೇನು ಸಿಕ್ಸರ್ ಹೋಯಿತು ಎನ್ನುವಷ್ಟರಲ್ಲಿ ಬಹಳ ಅದ್ಭುತವಾಗಿ ಸನ್ನಿವೇಶವನ್ನು ಹ್ಯಾಂಡಲ್ ಮಾಡಿದ ಸಂಜು ಸ್ಯಾಮ್ಸನ್ ರವರು ಕ್ಷಣ ಮಾತ್ರದಲ್ಲಿ ಬೌಂಡರಿ ಗೆರೆಯಾಚೆ ದಾಟಿ ಅತ್ಯುತ್ತಮ ಡೈವ್ ಮೂಲಕ ಕ್ಯಾಚ್ ಹಿಡಿದು ಚೆಂಡನ್ನು ಮತ್ತೆ ಗ್ರೌಂಡಿಗೆ ಎಸೆದು ತಾವು ಬೌಂಡರಿ ಗೆರೆಯಾಚೆ ಬಿದ್ದರು. ಈ ಮೂಲಕ ತಂಡಕ್ಕೆ ಕೇವಲ ನಾಲ್ಕು ರನ್ನುಗಳು ಸೇವ್ ಆದರೂ ಕೂಡ ಇವರ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಬಾರಿ ಪ್ರಶಂಸೆಗಳನ್ನು ವ್ಯಕ್ತ ಪಡಿಸಿದ್ದಾರೆ. ಕೆಳಗಡೆ ಈ ಕುರಿತಾದ ಟ್ವೀಟ್ ಅಟ್ಯಾಚ್ ಮಾಡಲಾಗಿದೆ. ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.