ಕೊಹ್ಲಿ ದಾಖಲೆಯನ್ನು ಕುಟ್ಟಿ ಪುಡಿಪುಡಿ ಮಾಡಿದ ಕನ್ನಡಿಗ! ಕಿಂಗ್ ಕೊಹ್ಲಿ ಹೆಸರಿನ ದಾಖಲೆ ಇದೀಗ ರಾಹುಲ್ ಹೆಸರಲ್ಲಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಡೆದ ಐದನೇ ಪಂದ್ಯದಲ್ಲಿಯೂ ಜಯಗಳಿಸುವ ಮೂಲಕ ಇದೇ ಮೊಟ್ಟಮೊದಲ ಬಾರಿಗೆ ನ್ಯೂಜಿಲೆಂಡ್ ನೆಲದಲ್ಲಿ ಭಾರತ ತಂಡವು ವೈಟ್ ವಾಶ್ ಮಾಡಿದ ಸಾಧನೆ ಮಾಡಿದೆ.

ಪ್ರತಿ ಪಂದ್ಯದಲ್ಲೂ ಉಪಯುಕ್ತ ರನ್ ಗಳ ಮೂಲಕ ಭಾರತ ತಂಡಕ್ಕೆ ತನ್ನದೇ ಆದ ಕೊಡುಗೆ ನೀಡಿದ ರಾಹುಲ್ ರವರು ಸರಣಿ ಶ್ರೇಷ್ಠ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಕೊನೆಯ ಪಂದ್ಯದಲ್ಲಿ 45 ರನ್ ಗಳಿಸಿ ಔಟ್ ಆಗುವ ಮೂಲಕ ಅರ್ಧಶತಕ ವಂಚಿತರಾದ ರಾಹುಲ್ ರವರು ಒಟ್ಟಾರೆ ಈ ಸರಣಿಯಲ್ಲಿ ಎರಡು ಅರ್ಧ ಶತಕವನ್ನು ಸಿಡಿಸಿದಷ್ಟೆ ಅಲ್ಲದೇ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊತ್ತು ಕೊಂಡು ಭೇಷ್ ಎನಿಸಿ ಕೊಂಡಿದ್ದಾರೆ. ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ರವರು ಗಾಯಗೊಂಡು ಹೊರ ನಡೆದಾಗ ಕ್ಯಾಪ್ಟನ್ ಜವಾಬ್ದಾರಿಯನ್ನು ಕೂಡ ತನ್ನ ಹೆಗಲ ಮೇಲೆ ವಹಿಸಿಕೊಂಡು ಬೌಲಿಂಗ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ಭಾರತಕ್ಕೆ ಜಯ ತಂದು ಕೊಟ್ಟಿದ್ದಾರೆ. ಇದೀಗ ಇದೇ ರಾಹುಲ್ ರವರು ಇಷ್ಟು ದಿವಸ ಕಿಂಗ್ ಕೊಹ್ಲಿ ಹೆಸರಿನಲ್ಲಿ ಇದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ.

ಹೌದು, ಇಷ್ಟು ದಿವಸ ಕಿಂಗ್ ಕೊಹ್ಲಿ ಅವರ ಹೆಸರಿನಲ್ಲಿ ದ್ವೀಪಕ್ಷಿಯ (ಎರಡು ತಂಡಗಳ) ಟಿ-20 ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೆ ಒಂದೇ ಸರಣಿಯಲ್ಲಿ 199 ರನ್ ಗಳಿಸುವ ಮೂಲಕ ಪಾತ್ರರಾಗಿದ್ದರು. ಆದರೆ ಈ ಸರಣಿಯಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ರವರು ಸರಣಿಯಲ್ಲಿ ಒಟ್ಟಾರೆ 224 ರನ್ ಗಳಿಸುವ ಮೂಲಕ ಕಿಂಗ್ ಕೊಹ್ಲಿ ರವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿ ಕೊಂಡಿದ್ದಾರೆ. ಇನ್ನು ಅಂತರಾಷ್ಟ್ರೀಯ ಎಲ್ಲಾ ತಂಡಗಳಿಗೆ ಹೋಲಿಸಿದರೆ ಕೆಎಲ್ ರಾಹುಲ್ ರವರು ದ್ವಿತೀಯ ಸ್ಥಾನದಲ್ಲಿದ್ದಾರೆ, ಮೊದಲನೇ ಸ್ಥಾನದಲ್ಲಿ ದ್ವಿಪಕ್ಷೀಯ ಟಿ20 ಸರಣಿಯಲ್ಲಿ 233 ರನ್ ಗಳಿಸಿರುವ ಮೊಜಾಂಬಿಕ್ ದೇಶದ ಡ್ಯಾಮಿಯಾನೋ ಕುವಾನ ಇದ್ದಾರೆ. ಒಟ್ಟಿನಲ್ಲಿ ಈ ಸರಣಿಯಲ್ಲಿ ಕೆ ಎಲ್ ರಾಹುಲ್ ಅವರು ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದು ಎಲ್ಲರ ಮನಗೆ ದ್ದಿದ್ದಾರೆ.

Post Author: Ravi Yadav