ಕೊನೆಗೂ ಫಿಕ್ಸ್ ಆಯಿತು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ಮುಹೂರ್ತ !

ಕೊನೆಗೂ ಫಿಕ್ಸ್ ಆಯಿತು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ಮುಹೂರ್ತ ! ಯಾವಾಗ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಹತ್ತು ವರ್ಷಗಳಿಂದ ವಿವಿಧ ಕಾರಣ ಗಳಿಂದ ವಿಳಂಬವಾಗಿದ್ದ ಮಂಗಳೂರು ಪಂಪ್ ವೆಲ್ ಫ್ಲೈ ಓವರ್ ಗೆ ಕೊನೆಗೂ ಉದ್ಘಾಟನಾ ಭಾಗ್ಯ ಸಿಕ್ಕಿದೆ. ಕಳೆದ ಬಾರಿ ಲೋಖಾಸಭಾ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರವರನ್ನು ಟೀಕಿಸಲು ಕಾಂಗ್ರೆಸ್ ಪಕ್ಷ ಇದೇ ಪಂಪ್ ವೆಲ್ ಫ್ಲೈ ಓವರ್ ಅನ್ನು ಬಳಸಿದ ಕಾರಣ ಈ ಫ್ಲೈ ಓವರ್ ಬಾರಿ ಸದ್ದು ಮಾಡಿತ್ತು. ಆದರೆ ಸರ್ಕಾರದಿಂದ ಸರಿಯಾದ ಸಮಯದಲ್ಲಿ ಅನುದಾನದ ಹಣ ಬಿಡುಗಡೆ ಯಾದರೂ ಕಂಪನಿ ನಿರ್ಲಕ್ಷದಿಂದ ಫ್ಲೈ ಓವರ್ ನಿರ್ಮಾಣ ತಡವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ರವರು ಹೇಳಿಕೆ ನೀಡಿದ್ದರು.

ಕೊನೆಗೂ ಏನೇ ಆಗಲಿ ಇದೀಗ ಮಂಗಳೂರು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿದ್ದು ಇದೇ ತಿಂಗಳ ಅಂದರೆ ಜನವರಿ 31 ರಂದು ಈ ಫ್ಲೈ ಓವರ್ ಉದ್ಘಾಟನೆ ನಡೆಯಲಿದ್ದು ಅಂದಿನಿಂದಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ತಿಳಿದುಬಂದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಈ ಕಾಮಗಾರಿ ಆರಂಭವಾಗಿತ್ತು.