ಬಿಗ್ ಗ್ರೇಟ್ ನ್ಯೂಸ್: ಮತ್ತೊಮ್ಮೆ ಗೆದ್ದು ಬೀಗಿದ ಮೋದಿ ಸರ್ಕಾರ ! ಕೇಂದ್ರದ ಪ್ರತಿಕ್ರಿಯೆಗೆ ಯುರೋಪಿಯನ್ ಸಂಸತ್ತು ತಲೆಬಾಗಿ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತ ದೇಶವು ಕಳೆದ 20 ವರ್ಷಗಳಿಂದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಗಣರಾಜ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ತಾನು ಗುರುತಿಸಿಕೊಂಡಿದೆ. ಹೀಗಿರುವಾಗ ಪ್ರಜೆಗಳಿಂದ ಆಯ್ಕೆಯಾಗಿರುವ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಭಾರತೀಯ ಪೌರತ್ವದ ಕುರಿತು ಎರಡು ಕಠಿನ ಮಸೂದೆಗಳನ್ನು ಮಂಡಿಸಿತ್ತು. ಇದು ಸಂಪೂರ್ಣವಾಗಿ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಬದಲಾಗಿ ಭಾರತ ದೇಶದ ಆಂತರಿಕ ವಿಚಾರ ಎಂಬುದು ಇತರ ದೇಶಗಳು ಕೂಡ ಮನದಲ್ಲಿಟ್ಟುಕೊಂಡು ಇರಬೇಕಿತ್ತು.

ಆದರೆ ಕೆಲವು ರಾಷ್ಟ್ರಗಳು ಸುಖಾಸುಮ್ಮನೆ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಆರಂಭ ಮಾಡಿದರು. ಅದರಂತೆಯೇ ಯುರೋಪಿಯನ್ ಸಂಸತ್ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸಂಸತ್ತಿನಲ್ಲಿ ಶಾಸಕರ ಬೆಂಬಲದೊಂದಿಗೆ ನಿರ್ಣಯ ಮಂಡಿಸಿತ್ತು. ಇದರಿಂದ ಕೆಂಡಾಮಂಡಲವಾದ ಕೇಂದ್ರ ಸರ್ಕಾರವು ತೀಕ್ಷ್ಣವಾಗಿ ಯುರೋಪಿಯನ್ ಒಕ್ಕೂಟಕ್ಕೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿ ಇದು ಭಾರತದ ಆಂತರಿಕ ವಿಚಾರ ಎಂದು ಖಡಕ್ಕಾಗಿಯೇ ಕಡಕ್ ಮಾತುಗಳ ಮೂಲಕ ಹೇಳಿಕೆ ನೀಡಿತ್ತು. ಇದೀಗ ಯುರೋಪಿಯನ್ ಒಕ್ಕೂಟದ ಈ ನಡೆಯ ಬಗ್ಗೆ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕೊನೆಗೂ ಯುರೋಪಿಯನ್ ಒಕ್ಕೂಟ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಇದರ ಕುರಿತು ಸ್ಪಷ್ಟನೆ ಹೊರಡಿಸಿರುವ ಯುರೋಪಿಯನ್ ವಿದೇಶಾಂಗ ಮತ್ತು ಭದ್ರತಾ ಸಿಬ್ಬಂದ ನೀತಿಯ ವಕ್ತಾರರು ಯುರೋಪಿಯನ್ ಸಂಸತ್ ಹಾಗೂ ಅದರ ಸದಸ್ಯರು ವ್ಯಕ್ತಪಡಿಸಿದ ಯುರೋಪಿಯನ್ ಒಕ್ಕೂಟದ (ಇಯು) ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗೂ ಇದರ ಕುರಿತು ಮಾತನಾಡಿರುವ ಭಾರತದಲ್ಲಿನ ಯುರೋಪಿಯನ್ ಆಯೋಗದ ನಿಯೋಗವು ಸಿಎಎ ಕುರಿತು ರಾಷ್ಟ್ರವನ್ನು ಟೀಕಿಸುವ ಯುರೋಪಿಯನ್ ಸಂಸತ್ತಿನ ನಿರ್ಣಯಗಳಿಂದ ದೂರವಿರಲು ಪ್ರಯತ್ನಿಸಿದೆ. ಅಷ್ಟೇ ಅಲ್ಲದೇ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಭಾರತಕ್ಕೆ ಸಂಪೂರ್ಣವಾಗಿ ಆಂತರಿಕ ವಿಷಯವಾಗಿದೆ ಮತ್ತು ಸಂಸತ್ತಿನ ಉಭಯ ಸದನಗಳಲ್ಲಿ ಸಾರ್ವಜನಿಕ ಚರ್ಚೆಯ ನಂತರ ಕಾನೂನನ್ನು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಅಂಗೀಕರಿಸಲಾಗಿದೆ ಎಂದು ಭಾರತದಲ್ಲಿನ ಯುರೋಪಿಯನ್ ಆಯೋಗದ ನಿಯೋಗವು ಹೇಳಿದೆ.

Post Author: Ravi Yadav