ಕಿವಿ ಕೇಳಿಸದ,ಕೆಲವು ಮಾತು ಬಾರದ ಮಕ್ಕಳು ತಮ್ಮದೇ ಶೈಲಿಯನ್ನು ರಾಷ್ಟ್ರಗೀತೆ ಹಾಡಿದ್ದು ಹೇಗೆ ಗೊತ್ತಾ?

ಕಿವಿ ಕೇಳಿಸದ,ಕೆಲವು ಮಾತು ಬಾರದ ಮಕ್ಕಳು ತಮ್ಮದೇ ಶೈಲಿಯನ್ನು ರಾಷ್ಟ್ರಗೀತೆ ಹಾಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇನ್ನೇನು 71 ವೈಭವಯುತ ಗಣರಾಜ್ಯೋತ್ಸವಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಕೇವಲ ಭಾರತೀಯರಷ್ಟೇ ಅಲ್ಲದೇ, ವಿಶ್ವದ ಹಲವಾರು ದೇಶಗಳ ಪ್ರಜೆಗಳು ಗಣರಾಜ್ಯೋತ್ಸವದ ವೈಭವವನ್ನು ನೋಡಲು ಕಾಡು ಕುಳಿತಿದ್ದಾರೆ. ಹೀಗಿರುವಾಗ ಇದೀಗ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ಹಳೆಯದಾದರೂ ಮನಸ್ಸಿಗೆ ಮುದ ಕೊಡುವ ವಿಡಿಯೋ ಇದಾಗಿದೆ, ಕಣ್ಣಂಚಲ್ಲಿ ನೀರು ಬರುವುದಂತೂ ಖಚಿತ !

ನಮ್ಮ ದೇಶವೇ ಹಾಗೇ ಸ್ವಾಮಿ, ಕೆಲವರು ದೇಶವನ್ನು ವಿಭಜನೆ ಮಾಡುತ್ತೇವೆ ಎಂದರೂ ಅವೆರೆಲ್ಲರೂ ರಾತ್ರೋ ರಾತ್ರಿ ಜನ ನಾಯಕರಾಗುತ್ತಾರೆ. ವಿಪರ್ಯಾಸ ಎಂದರೇ, ಇವರಿಗೆ ಅಭಿಮಾನಿಗಳು ಕೂಡ ಇರುತ್ತಾರೆ. ಇನ್ನು ಕೆಲವರು ವಂದೇ ಮಾತರಂ ಹೇಳುವುದಿಲ್ಲ ಎನ್ನುತ್ತಾರೆ. ಇನ್ನು ಕೆಲವರು ರಾಷ್ಟ್ರ ಗೀತೆ ಹಾಡುವುದಿಲ್ಲ ಎನ್ನುತ್ತಾರೆ. ಇನ್ನು ಇವರೆಲ್ಲ ಬಿಡಿ ಇನ್ನು ಕೆಲವು ರಾಷ್ಟ್ರ ಗೀತೆ ಗೆ ನೀಡಬೇಕಾದ ಕನಿಷ್ಠ ಗೌರವ ನೀಡುವುದಿಲ್ಲ. ಸರ್ಕಾರವು ರಾಷ್ಟ್ರೀಯತೆ ಮನದಲ್ಲಿ ಉಳಿಸಲು ಹಲವಾರು ಕಡೆ ರಾಷ್ಟ್ರ ಗೀತೆ ಕಡ್ಡಾಯ ಮಾಡಿದ್ದರೂ, ಕೆಲವರು ಎದ್ದು ನಿಂತು ಗೌರವ ಸೂಚಿಸುವುದಿಲ್ಲ. ಇವರನ್ನೆಲ್ಲ ಪಕ್ಕಕ್ಕೆ ಇಟ್ಟು ನೋಡಿದರೇ, (ಈ ಕೆಳಗಿನ ವಿಡಿಯೋ ನೋಡುವ ಮುನ್ನ ಸಂಪೂರ್ಣ ಓದಿ, ತಡ ನಂತರ ಈ ವಿಡಿಯೋ ನೋಡಿ.

ಅಪ್ಪಟ ದೇಶ ಭಕ್ತರು ಕಾಣಿಸುತ್ತಾರೆ. ರಾಷ್ಟ್ರೀಯತೆಯನ್ನು ಪ್ರತಿಯೊಂದು ವಿಚಾರ ದಲ್ಲಿಯೂ ಎತ್ತಿ ಹಿಡಿಯುತ್ತಾರೆ. ಅದೇ ರೀತಿಯ ಘಟನೆಯನ್ನು ನಾವು ಇಂದು ಇಲ್ಲಿ ನೋಡೋಣ. ಮೇಲಿನ ವಿಡಿಯೋ ನೋಡಿ, ಅಲ್ಲಿ ಶ್ರವಣ ದೋಷವುಳ್ಳ ಪುಟ್ಟ ಮಕ್ಕಳು ನಮ್ಮ ರಾಷ್ಟ್ರಗೀತೆ ಜನಗಣಮನ ವನ್ನು ತಮ್ಮ ಶೈಲಿಯಲ್ಲಿ ಸೈನ್ (ಸನ್ನೆ) ಭಾಷೆಯನ್ನು ಬಳಸಿ ಹಾಡಿದ್ದಾರೆ. ಈ ವಿಡಿಯೋ ಎರಡು ವರ್ಷ ಹಳೆಯದಾಗಿದ್ದರೂ ಇದೀಗ ಬಾರಿ ವೈರಲ್ ಆಗಿದೆ. ಕೆಲವರು ನಮ್ಮ ದೇಶದ ಅನ್ನವನ್ನು ತಿಂದು ಇಲ್ಲಿನ ಪವಿತ್ರ ಭೂಮಿಯಲ್ಲಿ ಓಡಾಡಿ ರಾಷ್ಟ್ರಗೀತೆ ಹಾಡಿದರೇ ಮಾತ್ರ ದೇಶ ಭಕ್ತರೇ, ಪ್ರಜಾ ಪ್ರಭುತ್ವ ಹೇಗೆ ಬೇಕಾದರೂ ಇದರಬಹುದು ಎನ್ನುವ ಜನರು ಇವರನ್ನು ನೋಡಿ ಕಲಿಯಬೇಕು. ನಮ್ಮ ದೇಶ ನಮ್ಮ ಹೆಮ್ಮೆ.