CAA ಬಗ್ಗೆ ಪ್ರತಿಭಟನೆ ಮಾಡಿದವರಿಗೆ ದುಬೈ ಸರ್ಕಾರ ಮಾಡಿದ್ದೇನು ಗೊತ್ತಾ? ಇದು ಅಸಲಿ ಕಾನೂನು ಅಂದರೆ ! ಏನಂತೀರಾ?

CAA ಬಗ್ಗೆ ಪ್ರತಿಭಟನೆ ಮಾಡಿದವರಿಗೆ ದುಬೈ ಸರ್ಕಾರ ಮಾಡಿದ್ದೇನು ಗೊತ್ತಾ? ಇದು ಅಸಲಿ ಕಾನೂನು ಅಂದರೆ ! ಏನಂತೀರಾ?

ನಮಸ್ಕಾರ ಸ್ನೇಹಿತರೇ, ಅಂದುಕೊಂಡಂತೆ CAA ವಿರುದ್ಧ ಪ್ರತಿಭಟನೆ ಇದೀಗ ಕೇವಲ ಆ ಕಾಯ್ದೆಯ ವಿರುದ್ದವಾಗಿಲ್ಲ. ಬದಲಾಗಿ ಧಾರ್ಮಿಕ ಹಾಗೂ ದೇಶದ ವಿರುದ್ಧ ನಡೆಯುವಂತೆ ಬಿಂಬಿತವಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಧರ್ಮಗಳನ್ನು ಎಳೆದು ತಂದು ಕಿಡಿ ಹಚ್ಚುವ ಕೆಲಸ ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮಸಿ ಬಳೆಯುವ ಪ್ರಯತ್ನ ಕೂಡ ನಡೆಯುತ್ತಿದೆ.

ಅದರಲ್ಲಿಯೂ ಕೇರಳದ ಜನತೆ ಬಹುಶಃ ಈ ವಿಷಯದಲ್ಲಿ ಮಾನಿಸಿಕ ಸ್ಥಿಮಿತವನ್ನು ಕಳೆದುಕೊಂಡಂತೆ ಕಾಣುತ್ತಿದೆ, ಇದಕ್ಕೆ ಪೂರಕ ಸಾಕ್ಷಿ ಎಂದರೇ, ಹಲವಾರು ಜನ ಕೇರಳಿಗರು ತಮ್ಮ ಊರನ್ನು ಬಿಟ್ಟು ಕರ್ನಾಟಕದಲ್ಲಿ ಬಂದು ಪ್ರತಿಭಟನೆ ನಡೆಸುತ್ತಿರುವುದು. ಅಲ್ಲಾ ಸ್ವಾಮಿ ಬೇಕಿದ್ದರೆ ನಿಮ್ಮ ರಾಜ್ಯದಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ಶಾಂತಿ ನೆಲೆಸಿರುವ ಇಲ್ಯಾಕೆ ಬರುತ್ತೀರಾ? ಎಂಬುದು ನಮ್ಮ ಪ್ರಶ್ನೆ. ವಿಪರ್ಯಾಸವೆಂದರೇ ಈ ಪ್ರಶ್ನೆ ಕೇಳಬೇಕಾಗಿರುವ ರಾಜಕಾರಣಿಗಳಲ್ಲಿ ಒಗ್ಗಟ್ಟಿಲ್ಲ. ಅಧಿಕಾರದಲ್ಲಿ ಇರುವ ಪಕ್ಷದ ಮೇಲೆ ಗೂಬೆ ಕೂರಿಸಲು ಕೆಲವು ರಾಜಕೀಯ ನಾಯಕರು ಕೇರಳದವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ದುಬೈ ನಲ್ಲಿ ಇದೆ ರೀತಿ ಮಾಡಿದ ಕೇರಳಿಗರಿಗೆ ಅಲ್ಲಿನ ಸರ್ಕಾರ ಮಾಡಿದ್ದೇನು ಗೊತ್ತಾ?

ಹೌದು ಸ್ನೇಹಿತರೇ, ಕೇರಳ ಮೂಲದ ಹಲವಾರು ಜನರು ಒಟ್ಟಾಗಿ ಸೇರಿಕೊಂಡು CAA ವಿರುದ್ಧ ದುಬೈ ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಮೋದಿ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳು ಮೊಳಗ ತೊಡಗಿದವು. ಆರ್ಎಸ್ಎಸ್ ಸಂಸ್ಥೆಯನ್ನು ಕೂಡ ಎಳೆದು ತಂದರು. ಕೂಡಲೇ ಎಚ್ಚೆತ್ತುಕೊಂಡ ದುಬೈ ಸರ್ಕಾರ ಪ್ರತಿಭಟನೆ ನಡೆಸಿವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಸರಿ ಸುಮಾರು ಭಾರತೀಯ ರೂಪಾಯಿಗಳಲ್ಲಿ 3 ಲಕ್ಷ ದಂಡ ವಿಧಿಸಿ, ಕೂಡಲೇ ಉದ್ಯೋಗದಿಂದ ವಜಾಗೊಳಿಸಿ ಗಡಿಪಾರು ಮಾಡಿ, ಇನ್ನು ಮುಂದೆ ದುಬೈ ಪ್ರವೇಶಿಸದಂತೆ ನಿರ್ಬಂಧ ಏರಲು ಮುಂದಾಗಿದೆ. CCTV ದೃಶ್ಯಗಳನ್ನು ಗಮನಿಸಿ ಈಗಾಗಲೇ ೧೦ ಹೆಚ್ಚು ಕೇರಳಿಗರಿಗೆ ಶಿಕ್ಷೆ ವಿಧಿಸಲಾಗಿದೆ. ಇನ್ನು ಉಳಿದವರು ಶಿಕ್ಷೆಯಿಂದ ಪಾರಾಗಲು ಓಮನ್ ದೇಶದ ಮೂಲಕ ತಪ್ಪಿಸಿಕೊಂಡು ತವರು ಸೇರಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.