ಜಾರ್ಖಂಡ್ ಫಲಿತಾಂಶದ ಬಗ್ಗೆ ಅಮಿತ್ ಶಾ ಹಾಗೂ ಮಾಜಿ ಸಿಎಂ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪೌರತ್ವ ತಿದ್ದುಪಡಿ ಮಸೂದೆಯ ಘೋಷಣೆ ನಂತರ ನಡೆದ ಮೊದಲ ಚುನಾವಣೆಯಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿ ಪಕ್ಷ ಸೋಲನ್ನು ಕಂಡಿದೆ. ಪೌರತ್ವ ತಿದ್ದು ಪಡಿ ಮಸೂದೆಯು ಇಲ್ಲಿ ಪರಿಣಾಮ ಬೀರಿದೆ ಎಂದು ಹಲವಾರು ಕಾಂಗ್ರೆಸ್ ಹಾಗೂ JMM ಪಕ್ಷದ ನಾಯಕರು ಈಗಾಗಲೇ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಆದರೂ ಕೂಡ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಈ ಮಸೂದೆಯನ್ನು ವಾಪಸ್ಸು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಹಾಗೂ ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ (ಇನ್ನು ರಾಜೀನಾಮೆ ನೀಡಿಲ್ಲ) ಪ್ರತಿಕ್ರಿಯೆ ನೀಡಿದ್ದಾರೆ.

ಇದರ ಕುರಿತು ಮಾತನಾಡಿರುವ ಅಮಿತ್ ಶಾ ರವರು, ಯಾರನ್ನು ದೂಷಿಸದೆ ಜನಾದೇಶವನ್ನು ಗೌರವಿಸುತ್ತೇವೆ. ಕಳೆದ ಐದು ವರ್ಷಗಳ ಕಾಲ ಅಧಿಕಾರ ನಡೆಸಲು ಅವಕಾಶ ನೀಡಿದ ಜಾರ್ಖಂಡ್ ರಾಜ್ಯದ ಎಲ್ಲಾ ಜನತೆಗೂ ಧನ್ಯವಾದಗಳು. ಇನ್ನು ಮುಂದೆಯೂ ಕೂಡ ಬಿಜೆಪಿ ಪಕ್ಷವು ಅಭಿವೃದ್ಧಿ ಎಂಬ ಮಂತ್ರಕ್ಕೆ ಬದ್ಧವಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಹಾಗೂ ಬಿಜೆಪಿ ಪಕ್ಷದ ಗೆಲುವಿಗಾಗಿ ಶ್ರಮ ವಹಿಸಿದ ಕಾರ್ಯಕರ್ತರು ಹಾಗೂ ನಾಯಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇನ್ನು ಇದೇ ವಿಷಯದ ಕುರಿತು ಮಾತನಾಡಿರುವ ರಘುಬರ್ ದಾಸ್ ರವರು, ಇದು ಬಿಜೆಪಿ ಪಕ್ಷದ ಸೋಲಲ್ಲ ನನ್ನ ವೈಯಕ್ತಿಕ ಸೋಲು, ಮುಂದಿನ ಚುನಾವಣೆಯ ವರೆಗೂ ವಿಪಕ್ಷ ಸ್ಥಾನದಲ್ಲಿಕೂತು ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿಕೆ ನೀಡಿದ್ದಾರೆ.

Post Author: Ravi Yadav