ಸೆಲ್ಫಿ ಕೇಳಿದ ಸೈನಿಕರಿಗೆ ಯಶ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಮತ್ತೊಮ್ಮೆ ಸದ್ದು ಮಾಡಿದ ರಾಕಿ ಭಾಯ್

ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿರುವ ಯಶ್ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ಯಾವುದೇ ವಿಷಯಗಳನ್ನು ಮುಚ್ಚು ಮರೆ ಮಾಡದೇ ನೇರವಾಗಿ ಸ್ಪಷ್ಟ ಮಾತುಗಳ ಮೂಲಕ ತಿಳಿಸಿ ಬಿಡುತ್ತಾರೆ. ತಾನು ಚಿತ್ರರಂಗದಲ್ಲಿ ಎಷ್ಟೇ ಯಶಸ್ಸು ಗಳಿಸಿದರೂ ತಮ್ಮ ಸರಳ ವ್ಯಕ್ತಿತ್ವದ ಮೂಲಕ ಅದೆಷ್ಟೋ ಬಾರಿ ಮನಗೆದ್ದಿದ್ದಾರೆ.

ಯಶೋಮಾರ್ಗದ ಅಡಿಯಲ್ಲಿ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡಿರುವ ಯಶ್ ರವರು, ತಮ್ಮ ಕೈಲಾದ ಸಹಾಯವನ್ನು ಪ್ರತಿಬಾರಿಯೂ ಸರಿಯಾದ ಸಮಯಕ್ಕೆ ಮಾಡಿ ತಮ್ಮ ಸಮಾಜಮುಖಿ ಕಾರ್ಯಗಳಿಂದ ಮತ್ತಷ್ಟು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಯಶ್ ರವರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಬೆಂಗಳೂರು ಏರ್ಪೋರ್ಟ್ ನಲ್ಲಿ ಬಂದಿಳಿದ ಅವರನ್ನು ಕಂಡು ಹಲವಾರು ಅಭಿಮಾನಿಗಳು ಬಹಳ ಸುಲಭವಾಗಿ ಯಶ್ ರವರನ್ನು ಗುರುತಿಸಿದರು, ಅದೇ ಸಮಯದಲ್ಲಿ ದೇಶದ ಗಡಿ ಕಾಯುವ ಸೈನಿಕರು ಏರ್ಪೋರ್ಟ್ ನಲ್ಲಿ ಯಶ್ ರವರನ್ನು ನೋಡಿದ ನಂತರ ಬಹಳ ಖುಷಿಯಿಂದ ಯಶ್ ರವರ ಬಳಿ ತೆರಳಿ ಕೂಡಲೇ ವಿಶ್ ಮಾಡಿ ನಿಮ್ಮ ಜೊತೆ ಒಂದು ಸೆಲ್ಫಿ ಗೆ ಅವಕಾಶ ಮಾಡಿಕೊಡಬೇಕು ಎಂದು ಅವರ ಬಳಿ ಹೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಯಶ್ ರವರು, ಸರ್ ನಾವು ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅನುಮತಿ ಕೇಳಬೇಕು, ನೀವು ನಮ್ಮ ದೇಶದ ವೀರರು, ನಿಮ್ಮ ಜೊತೆ ನಾನು ಸೆಲ್ಫಿ ತೆಗೆದುಕೊಳ್ಳುವುದು ನನ್ನ ಅದೃಷ್ಟ, ನಿಮ್ಮಂತಹ ಹೀರೋ ಮುಂದೆ ನಾವೇನು ಅಲ್ಲ ಎಂದು ಪ್ರತಿಕ್ರಿಯೆ ನೀಡಿ, ಸೈನಿಕರ ಜೊತೆ ಸೆಲ್ಫಿ ಅನ್ನು ತೆಗೆದುಕೊಂಡರು. ತದನಂತರ ಸೈನಿಕರು ಬೇರೆ ಊರಿಗೆ ತೆರಳುತ್ತಿದ್ದಾರೆ ಎಂದು ತಿಳಿದಾಗ ಹೊರಡುವ ಸಮಯದಲ್ಲಿ ಸೈನಿಕರಿಗೆ ಸೆಲ್ಯೂಟ್ ಮಾಡಿ ಗೌರವವುಳ್ಳ ಆಪ್ತತೆ ಮೆರೆದಿದ್ದಾರೆ. ಇದೀಗ ಯಶ್ ರವರ ಈ ಹೇಳಿಕೆ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮತ್ತೊಮ್ಮೆ ಹೆಸರು ಚರ್ಚೆಗೆ ಗ್ರಾಸವಾಗಿದ್ದಾರೆ.

Post Author: Ravi Yadav