ಬಿಜೆಪಿ ಸರ್ಕಾರ ರಚನೆಯ ನಂತರ ಶಿವಸೇನಾ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್ ! ಬಹುಮತಕ್ಕೆ ಮತ್ತಷ್ಟು ಹತ್ತಿರವಾದ ಬಿಜೆಪಿ ! ಹೇಗೆ ಗೊತ್ತಾ?

ಬಿಜೆಪಿ ಸರ್ಕಾರ ರಚನೆಯ ನಂತರ ಶಿವಸೇನಾ ಪಕ್ಷಕ್ಕೆ ಮತ್ತೊಂದು ಬಿಗ್ ಶಾಕ್ ! ಬೀದಿಗೆ ಬಂದ ಶಿವಸೇನಾ ರಾಜಕೀಯ ! ಪಕ್ಷದ ಅಂತ್ಯಕ್ಕೆ ನಾಂದಿಯಾಯೀತೇ?

ಇದೀಗ ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಮಹತ್ವದ ವಿದ್ಯಮಾನಗಳು ನಡೆಯುತ್ತಿವೆ. ಒಂದು ಕಡೆ ಇಂದು ಮೈತ್ರಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಶಿವಸೇನಾ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳಿಗೆ ಶಾಕ್ ನೀಡಿರುವ ಬಿಜೆಪಿ ಪಕ್ಷವು ಎನ್ಸಿಪಿ ಪಕ್ಷದ ಇಪ್ಪತ್ತಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಪಡೆದುಕೊಂಡು ಸರ್ಕಾರ ರಚನೆ ಮಾಡಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಪಟ್ಟವನ್ನು ಕಳೆದುಕೊಂಡು ಚಿಂತೆಯಲ್ಲಿ ತೊಡಗಿ ಕೊಂಡಿರುವ ಶಿವಸೇನಾ ಪಕ್ಷಕ್ಕೆ ಇದೀಗ ಅತಿದೊಡ್ಡ ಶಾಕ್ ಎದುರಾಗಿದೆ. ಇಷ್ಟು ದಿವಸ ಮುಖ್ಯಮಂತ್ರಿಯಾ ಕುರ್ಚಿಯ ಕನಸು ಕಾಣುತ್ತಿದ್ದ ಶಿವಸೇನಾ ಪಕ್ಷವು ಇದೀಗ ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡು ಬೀದಿಗೆ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಜೆಪಿ ಪಕ್ಷವು ಕೇವಲ ಎನ್ಸಿಪಿ ಪಕ್ಷದ 20 ಶಾಸಕರ ಬೆಂಬಲದಿಂದ ಹೇಗೆ ಬಹುಮತ ಸಾಧಿಸುತ್ತದೆ ಎಂದು ಕೊನೆಯ ಆಸೆ ಉಳಿಸಿಕೊಂಡಿದ್ದ ಶಿವಸೇನಾ ಪಕ್ಷಕ್ಕೆ ಇದೀಗ ತನ್ನದೇ ಪಕ್ಷದ ಶಾಸಕರು ದೊಡ್ಡ ಶಾಕ್ ನೀಡಲು ಹೊರಟಿದ್ದಾರೆ. ಅಷ್ಟೇ ಅಲ್ಲದೆ ಈ ಮೂಲಕ ಬಿಜೆಪಿ ಪಕ್ಷವು ಮ್ಯಾಜಿಕ್ ನಂಬರ್ಗೆ ಮತ್ತಷ್ಟು ಹತ್ತಿರವಾಗಿದೆ.

ಇದೀಗ ಶಿವಸೇನಾ ಪಕ್ಷದ 20ಕ್ಕೂ ಹೆಚ್ಚು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ವಲಸೆ ಹೋಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರೆಸಾರ್ಟ್ ರಾಜಕೀಯ ಆರಂಭಗೊಂಡಿದ್ದು ಶಿವಸೇನಾ ಪಕ್ಷದ ಶಾಸಕರು ಜೈಪುರದಲ್ಲಿರುವ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಲು ನಿರ್ಧಾರ ಮಾಡಿದ್ದಾರೆ ಎಂದು ಉದ್ಧವ್ ಠಾಕ್ರೆ ಅವರು ತಿಳಿಸಿದ್ದಾರೆ. ಈಗಾಗಲೇ ಛತ್ರಪತಿ ಶಿವಾಜಿ ರವರ ಅನುಯಾಯಿಗಳು ಹಾಗೂ ಹಿಂದುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ ಬಾಳಠಾಕ್ರೆ ರವರ ಬೆಂಬಲಿಗರು ಶಿವಸೇನಾ ಪಕ್ಷದ ವಿರುದ್ಧ ಸಿಡಿದೆದ್ದಿರುವ ಕಾರಣ ಈ ಎಲ್ಲ ಶಾಸಕರು ತಮ್ಮ ಕಾರ್ಯಕರ್ತರ ಬೆಂಬಲವನ್ನು ಕಳೆದುಕೊಳ್ಳುವ ಭೀತಿಯಿಂದ ಬಿಜೆಪಿ ಪಕ್ಷಕ್ಕೆ ವಲಸೆ ಹೋಗುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದು, ಒಂದು ವೇಳೆ ಅದೇ ನಡೆದಲ್ಲಿ ಶಿವಸೇನಾ ಪಕ್ಷವು ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದೆ.