ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಚನೆ ಕುರಿತು ಅಚ್ಚರಿಯ ಟ್ವೀಟ್ ಮಾಡಿದ ಸ್ವಾಮಿ ! ಪರೋಕ್ಷವಾಗಿ ಬಿಜೆಪಿಯ ಮಹಾ ಗುಟ್ಟು ರಟ್ಟು ಮಾಡಿ ಹೇಳಿದ್ದೇನು ಗೊತ್ತಾ??

ಇದೀಗ ಇಡೀ ದೇಶದಲ್ಲಿ ರಾತ್ರೋ ರಾತ್ರಿ ಬಿಜೆಪಿ ಸರ್ಕಾರ ರಚನೆಗೆ ಬೇಕಾದ ಸಿದ್ಧತೆ ಮಾಡಿಕೊಂಡ ವಿಷಯದ ಕುರಿತು ಚರ್ಚೆ ನಡೆಯುತ್ತಿದೆ. ಅದೇಗೋ ಸರ್ಕಾರ ರಚನೆಯಾಯಿತು ಆದರೆ ಬಹುಮತ ಸಾಭೀತು ಮಾಡಲು ಇನ್ನು ಹಲವಾರು ಸವಾಲುಗಳು ಬಾಕಿ ಉಳಿದಿವೆ. ಆದರೆ ರಾಜಕೀಯ ಪಂಡಿತರ ಪ್ರಕಾರ ಬಿಜೆಪಿ ಪಕ್ಷ ಶಿವಸೇನಾ ಹಾಗೂ ಎನ್ಸಿಪಿ ಪಕ್ಷಗಳ ಶಾಸಕರ ಬೆಂಬಲದೊಂದಿಗೆ ಅಥವಾ ಶಾಸಕರನ್ನು ರಾಜೀನಾಮೆ ನೀಡುವಂತೆ ಮಾಡಿ ತಮ್ಮದೇ ಸಂಪೂರ್ಣ ಸರ್ಕಾರ ರಚಿಸುತ್ತದೆ ಎಂದು ಹೇಳಿದ್ದಾರೆ.

ಈ ಎಲ್ಲ ವಿದ್ಯಮಾನಗಳ ನಡುವೆ ಮಹಾರಾಷ್ಟ್ರ ರಾಜ್ಯದಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಸಿನಿಮೀಯ ರಾಜಕೀಯ ಬೆಳವಣಿಗೆಗಳ ಕುರಿತು ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಹಿಂದುತ್ವದ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದುಕೊಂಡಿರುವ ಸುಬ್ರಮಣ್ಯನ್ ಸ್ವಾಮಿ ರವರು ಅಚ್ಚರಿಯ ಟ್ವೀಟ್ ಮಾಡಿದ್ದಾರೆ. ಮೊದಲಿಂದಲೂ ಶಿವಸೇನಾ ಪಕ್ಷವು ಸುಖಾ ಸುಮ್ಮನೆ ಖ್ಯಾತೆ ತೆಗೆಯುವುದನ್ನು ನಿಲ್ಲಿಸಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಅಭಿಪ್ರಾಯ ಪಡುತ್ತಿದ್ದ ಸುಬ್ರಮಣ್ಯನ್ ಸ್ವಾಮಿ ರವರು ಈಗಲೂ ಸಹ ಅದೇ ನಿಲುವನ್ನು ಹೊಂದಿದ್ದಾರೆ ಎಂದು ಈ ಟ್ವೀಟ್ ನ ಮೂಲಕ ತಿಳಿದುಬಂದಿದೆ.

ಹೌದು, ಇದೀಗ ಟ್ವೀಟ್ ಮಾಡಿರುವ ಸುಬ್ರಮಣ್ಯನ್ ಸ್ವಾಮಿ ರವರು, ನಾನು ಮೊದಲಿಂದಲೂ ಶಿವಸೇನಾ ಪಕ್ಷಕ್ಕೆ ಹೇಳುತ್ತಾ ಬಂದಿದ್ದೆ, ನನ್ನ ಮಾತನ್ನು ಶಿವಸೇನಾ ಪಕ್ಷ ಕೇಳಿದ್ದರೇ ಹಿಂದುತ್ವವನ್ನು ಬೆಂಬಲಿಸುವ ಶಕ್ತಿಗಳನ್ನು ಹೊಡೆಯುತ್ತಿರಲಿಲ್ಲ. ಹಿಂದುತ್ವಕ್ಕಾಗಿ ಮುಖ್ಯಮಂತ್ರಿ ಕುರ್ಚಿಯನ್ನು ತ್ಯಾಗ ಮಾಡುವ ಮನಸ್ಥಿತಿ ಶಿವಸೇನಾ ಪಕ್ಷಕ್ಕೆ ಇರಬೇಕಿತ್ತು. ಆದರೆ ಈಗ ಬೇರೆ ವಿಧಿ ಇಲ್ಲದೇ ಹಿಂದುತ್ವವನ್ನು ಉಳಿಸಲು ಹೊಡೆಯುವವರನ್ನೇ ಹೊಡೆಯುವುದು ಅನಿವಾರ್ಯವಾಗಿದೆ, ಇದರಿಂದ ಮನಸ್ಸಿಗೆ ಬೇಸರವಾಗುತ್ತಿದೆ ಎಂದಿದ್ದಾರೆ. ಆದರೆ ಇಲ್ಲಿ ಶಿವಸೇನಾ ಪಕ್ಷದ ಕುರಿತು ಅಭಿಪ್ರಾಯ ಹೇಳುವಾಗ ಪರೋಕ್ಷವಾಗಿ ಎನ್ಸಿಪಿ ಪಕ್ಷವನ್ನು ಹೊಡೆಯುವ ನಿರ್ಧಾರ ಬಿಜೆಪಿ ಮಾಡಿದೆ ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

Post Author: Ravi Yadav