ಶಿವಸೇನೆಗೆ ಮರ್ಮಾಘಾತ ! ಚಾಣಕ್ಯನ ಆಟ ಆರಂಭ ! ಪ್ರಮಾಣ ವಚನ ಮುಗಿದೇ ಹೋಯಿತು ! ಅಷ್ಟಕ್ಕೂ ನಡೆದ್ದದೇನು ಗೊತ್ತಾ?

ಶಿವಸೇನೆಗೆ ಮರ್ಮಾಘಾತ ! ಚಾಣಕ್ಯನ ಆಟ ಆರಂಭ ! ಪ್ರಮಾಣ ವಚನ ಮುಗಿದೇ ಹೋಯಿತು ! ಅಷ್ಟಕ್ಕೂ ನಡೆದ್ದದೇನು ಗೊತ್ತಾ?

ಮಹಾರಾಷ್ಟ್ರ ರಾಜ್ಯದಲ್ಲಿ ಒಂದು ತಿಂಗಳ ಹಿಂದಿನಿಂದ ನಡೆಯುತ್ತಿದ್ದ ರಾಜಕೀಯ ಬಿಕ್ಕಟ್ಟಿಗೆ ಇದೀಗ ತೆರೆಬಿದ್ದಿದೆ. ಇನ್ನೇನು ತನಗೆ ಮುಖ್ಯಮಂತ್ರಿ ಕುರ್ಚಿ ದಕ್ಕಿತು ಎಂದುಕೊಂಡು ಅಧಿಕಾರದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಹಾಗೂ ಶಿವಸೇನಾ ಪಕ್ಷಗಳಿಗೆ ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತಿ ಪಡೆದು ಕೊಂಡಿರುವ ಅಮಿತ್ ಶಾ ರವರು ಕೊನೆಗಳಿಗೆಯಲ್ಲಿ ಆಟವನ್ನು ಆರಂಭ ಮಾಡಿ ತಾವೇ ಮುಗಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಇಂದು ಶಿವಸೇನಾ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿಯನ್ನು ರಚನೆ ಮಾಡಿಕೊಂಡು ಸರಕಾರ ರಚಿಸುತ್ತವೆ ಎಂಬ ಸುದ್ದಿ ಬಲವಾಗಿ ಕೇಳಿ ಬಂದಿತ್ತು. ಶಿವಸೇನಾ ಪಕ್ಷದ ಮುಖ್ಯಸ್ಥರಾಗಿರುವ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಯಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಿಜೆಪಿ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ಸುಮ್ಮನೆ ಕುಳಿತುಕೊಳ್ಳದೆ ಮತ್ತೊಂದು ಪಕ್ಷದ ಜೊತೆ ಮೈತ್ರಿಗೆ ಕೈಹಾಕಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಶಿವಸೇನಾ ಪಕ್ಷವು ತನ್ನ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್ ಪಕ್ಷದಿಂದ ಸೇರಿಕೊಳ್ಳಲು ಸಿದ್ಧವಾಗಿತ್ತು. ಅಷ್ಟೇ ಅಲ್ಲದೆ ಏಕಾ ಏಕಿ ನರೇಂದ್ರ ಮೋದಿ ಅವರ ವಿರುದ್ಧ ತೊಡೆತಟ್ಟಿ, ದೇಶದ ಅಭಿವೃದ್ಧಿಗೆ ಅತ್ಯಗತ್ಯ ವಾಗಿರುವ ಬುಲೆಟ್ ರೈಲಿನ ಯೋಜನೆಯ ಮೊದಲನೆ ಭಾಗವಾದ ಮುಂಬೈ ಹಾಗೂ ಅಹಮದಾಬಾದ್ ನಗರದ ನಡುವೆ ಆರಂಭಗೊಂಡಿರುವ ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದ್ದರು.

ಈ ಎಲ್ಲಾ ವಿದ್ಯಮಾನಗಳಿಗೆ ಇದೀಗ ಬಿಜೆಪಿ ಪಕ್ಷದ ಚಾಣಕ್ಯ ಎಂದು ಖ್ಯಾತಿ ಪಡೆದುಕೊಂಡಿರುವ ಅಮಿತ್ ಶಾ ರವರು ತಿರುಗೇಟು ನೀಡಿದ್ದು, ಇದೀಗ ಬಿಜೆಪಿ ಹಾಗೂ ಎನ್ಸಿಪಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಸರ್ಕಾರ ರಚನೆ ಮಾಡಿವೆ. ಅಂದುಕೊಂಡಂತೆ ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿಗಳ ಆಗಿರುವ ದೇವೇಂದ್ರ ಫಡ್ನವಿಸ್ ರವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ ಹಾಗೂ ಎನ್ಸಿಪಿ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಡಲಾಗಿದೆ. ಇಂದು ಮುಂಜಾನೆ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಸಿಎಂ ಪಡ್ನವಿಸ್ ರವರು ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಶಿವಸೇನಾ ಪಕ್ಷ ಮಾಡಿದ ವಂಚನೆಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಇನ್ನು ಎನ್ಸಿಪಿ ಪಕ್ಷವು ಬಿಜೆಪಿ ಪಕ್ಷದ ಎಲ್ಲಾ ಸಿದ್ಧಾಂತಗಳಿಗೆ ಒಪ್ಪಿ ಕೊಂಡಿರುವ ಕಾರಣ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂಬ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ಇದೀಗ ಶಿವಸೇನಾ ಪಕ್ಷಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ, ಅಷ್ಟೇ ಅಲ್ಲದೆ ತನ್ನ ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ಸರ್ಕಾರ ರಚಿಸಲು ಮುಂದೆ ಹೋದ ಕಾರಣ ಈಗಾಗಲೇ ಬಹುತೇಕ ಕಾರ್ಯಕರ್ತರನ್ನು ಕಳೆದುಕೊಳ್ಳುವ ಮೂಲಕ ಇಕ್ಕಟ್ಟಿಗೆ ಸಿಲುಕಿದೆ.