ಭಾರತೀಯರ ಕನಸಿನ ಯೋಜನೆಗೆ ಬ್ರೇಕ್- ಕಾಂಗ್ರೆಸ್-ಎನ್ಸಿಪಿ-ಶಿವಸೇನಾ ಪಕ್ಷಗಳ ಮೊದಲ ನಿರ್ಧಾರವೇನಂತೆ ಗೊತ್ತಾ?

ಭಾರತೀಯರ ಕನಸಿನ ಯೋಜನೆಗೆ ಬ್ರೇಕ್- ಕಾಂಗ್ರೆಸ್-ಎನ್ಸಿಪಿ-ಶಿವಸೇನಾ ಪಕ್ಷಗಳ ಮೊದಲ ನಿರ್ಧಾರವೇನಂತೆ ಗೊತ್ತಾ?

ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್-ಎನ್ಸಿಪಿ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಶಿವಸೇನಾ ಪಕ್ಷವು ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಮೂರು ಪಕ್ಷಗಳು ಅಧಿಕಾರದ ಹಂಚಿಕೆಗಾಗಿ ಲಾಭಿ ನಡೆಸುತ್ತಿವೆ ಎಂದ ಸುದ್ದಿಗಳು ಹರಿದಾಡುತ್ತಿವೆ. ಅಷ್ಟರಲ್ಲಿಯೇ ಎನ್ಸಿಪಿ ಪಕ್ಷವು ಮುಖ್ಯಮಂತ್ರಿ ಕುರ್ಚಿಯನ್ನು ಎರಡೂವರೆ ವರ್ಷಗಳ ಕಾಲ ತನ್ನದಾಗಿಸಿಕೊಳ್ಳುವ ಚಿಂತನೆಯಲ್ಲಿ ತೊಡಗಿದೆ. ಈ ಎಲ್ಲಾ ಚರ್ಚೆಗಳ ನಡುವೆ ಇನ್ನು ಸರ್ಕಾರ ರಚನೆಗೆ ಮುನ್ನವೇ ತಮ್ಮ ಮುಂದಿನ ಹಾದಿ ಹೇಗಿರಲಿದೆ ಎಂದುದನ್ನು ಸಾಭೀತು ಪಡಿಸಿವೆ.

ಅಭಿವೃದ್ಧಿಯ ಕಡೆ ಗಮನ ಹರಿಸುವುದನ್ನು ಬಿಟ್ಟು ಇನ್ನೂ ಅಧಿಕಾರದ ಗದ್ದುಗೆ ಏರುವ ಮುನ್ನವೇ ಯೋಜನೆಗಳ ರದ್ದಿಗೆ ಮುಂದಾಗಿದೆ. ಕರ್ನಾಟಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ ಬಳಿಕ ಯೋಜನೆಗಳ ವಿಚಾರದಲ್ಲಿ ಬಾರಿ ಭಿನ್ನಮತಗಳು ಕಾಣಿಸಿಕೊಂಡಿದ್ದವು. ಯಾವ ಸಮಯದಲ್ಲಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಸಿದ್ಧಾಂತಗಳು ಒಂದೇ ಹಾದಿಯಲ್ಲಿ ಹಾದು ಹೋಗಲಿಲ್ಲ. ಅದೇ ರೀತಿ ಇದೀಗ ಮಹಾರಾಷ್ಟ್ರ ದಲ್ಲಿಯೂ ನಡೆಯುವ ಸೂಚನೆಗಳು ಕಂಡು ಬಂದಿವೆ. ಇದೀಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಈಗಾಗಲೇ ಇದಕ್ಕೆ ಸಿದ್ಧತೆ ಮಾಡಿಕೊಂಡು ಯೋಜನೆ ರೂಪಿಸಿದಂತೆ ಕಾಣುತ್ತಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ಹಲವಾರು ಅಭಿವೃದ್ಧಿಯ ಯೋಜನೆಗಳಿಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿದ್ದಾರೆ.

ಕೇಂದ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ಒಟ್ಟಾಗಿ ಹಣವನ್ನು ಹಾಕಿ ಅಹಮದಾಬಾದ್‌ ಮತ್ತು ಮುಂಬೈ ಮಹಾ ನಗರಗಳ ನಡುವೆ ಬುಲೆಟ್ ರೈಲು ಯೋಜನೆಗೆ ಹಸಿರು ನಿಶಾನೆ ತೋರಿ ಶಂಕು ಸ್ಥಾಪನೆ ಮಾಡಿದ್ದರು. ಆದರೆ ಇದೀಗ ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್-ಎನ್ಸಿಪಿ-ಶಿವಸೇನಾ ಪಕ್ಷಗಳು ಅಧಿಕಾರಕ್ಕೆ ಬಂದ ತಕ್ಷಣ ಈ ಯೋಜನೆಯನ್ನು ರಾಜ್ಯ ಸರ್ಕಾರದ ವತಿಯಿಂದ ರದ್ದು ಮಾಡಿ ಆದೇಶ ಹೊರಡಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ಪೂರ್ಣ ಗೊಳಿಸಲೇಬೇಕು ಎಂದು ಕೊಂಡರೇ ಸಂಪೂರ್ಣ ಹಣವನ್ನು ನೀವೇ ಹಾಕಿ ಯೋಜನೆ ಪೂರ್ಣಗೊಳಿಸಿ ಎಂದು ಆದೇಶ ಹೊರಡಿಸಲು ಸಿದ್ಧವಾಗಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.