ಜೆ ಎನ್ ಯು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿದ ಸುಬ್ರಮಣ್ಯನ್ ಸ್ವಾಮಿ ! ಹೇಳಿದ್ದೇನು ಗೊತ್ತಾ?

ಜೆ ಎನ್ ಯು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿದ ಸುಬ್ರಮಣ್ಯನ್ ಸ್ವಾಮಿ ! ಹೇಳಿದ್ದೇನು ಗೊತ್ತಾ?

ನಮ್ಮ ದೇಶದ ಪರಿಸ್ಥಿತಿ ಹೇಗಿದೆ ಎಂದರೇ, ಸಾವಿರಾರು ರೂ ಖರ್ಚು ಮಾಡಿದರೂ ಕೂಡ ವಿದ್ಯಾಭ್ಯಾಸವನ್ನು ಭರಿಸಲು ಅದೆಷ್ಟೋ ಲಕ್ಷಂತಾರ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಇದರ ಕಡೆ ಗಮನ ಹರಿಸುತ್ತಿದೆಯಾದರೂ, ಇಡೀ ಭಾರತದಲ್ಲಿ ಶಿಕ್ಷಣ ಎಲ್ಲರಿಗೂ ಸಿಗುವಂತೆ ಮಾಡಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಇದರ ನಡುವೆ ಸರ್ಕಾರವೇ ಅತಿ ಕಡಿಮೆ ದರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಲವೊಂದು ಕಾಲೇಜುಗಳನ್ನು ತೆರೆದಿದೆ.

ಅದರಲ್ಲಿ ಜೆ ಎನ್ ಯು ಕೂಡ ಒಂದು. ಆದರೆ ಇಲ್ಲಿ ವಿಪರ್ಯವೇನು ಗೊತ್ತಾ? ಇಲ್ಲಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಮನಬಂದಂತೆ ವಿದ್ಯಾರ್ಥಿಗಳು ದುರುಪಯೋಗ ಮಾಡಿಕೊಂಡು ದೇಶದಲ್ಲಿ ಇನ್ನಿಲ್ಲದಂತೆ ಶಾಂತಿ ಕದಡಲು ಪ್ರಯತ್ನ ಪಡುತ್ತಿದ್ದಾರೆ. ಹೌದು, ಅಲ್ಲಿನ ವಿದ್ಯಾರ್ಥಿಗಳು ಕೆಲವರು ಮಾತ್ರ ಬಡತನದಲ್ಲಿ ನಿಜವಾಗಿಯೂ ಬದುಕುತ್ತಿದ್ದಾರೆ. ಆದರೆ ಕೆಲವರು ತಮ್ಮ ಜನಾಂಗದ ಹೆಸರಿನಲ್ಲಿ ಸೇರಿಕೊಂಡು ಅಲ್ಲಿನ ಪರಿಸರವನ್ನು ಹಾಳು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಸರಿ ಆಯಿತು ಸರ್ಕಾರ ನಿಮಗೆ ಇಷ್ಟ ಇಲ್ಲ ಅದರ ವಿರುದ್ಧ ಘೋಷಣೆ ಕೂಗಿದರೇ, ಸರ್ಕಾರದ ನಿರ್ಧಾರಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕೊಳ್ಳಬಹುದು, ಆದರೆ ಇಲ್ಲಿನ ಕೆಲವು ವಿದ್ಯಾರ್ಥಿಗಳು ದೇಶದ ವಿರುದ್ಧ ಮಾತುಗಳನ್ನು ಮಾತನಾಡಿ, ಇಡೀ ದೇಶಕ್ಕೆ ಆದರ್ಶರಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಧ್ವಂಸ ಮಾಡುವುದು, ದೇಶ ವಿಭಜನೆ ಹೀಗೆ ಕೆಲಸಕ್ಕ ಭಾರದ ಹೋರಾಟ ಮಾಡುತ್ತಿದ್ದಾರೆ.

ಇದೀಗ ಇದೇ ವಿಚಾರ ಗಂಭೀರವಾಗಿದೆ. ದೆಹಲಿಯಲ್ಲಿ ಹೋರಾಟದ ಹೆಸರಿನಲ್ಲಿ ಇನ್ನಿಲ್ಲದ ತೊಂದರೆ ನೀಡಲು ಐಫೋನ್, ೧ ಲಕ್ಷಕ್ಕೂ ಬೆಲೆ ಬಾಳುವ ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಬಳಸುವ 35 ಕ್ಕೂ ಹೆಚ್ಚು ವಯಸ್ಸಾಗಿರುವ ಯುವ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಈ ಪರಿಸ್ಥಿಗೆ ಪ್ರತಿಕ್ರಿಯೆ ನೀಡಿರುವ ಸುಬ್ರಮಣ್ಯನ್ ಸ್ವಾಮಿ ರವರು, ಜೆ ಎನ್ ಯು ಕಾಲೇಜು ಅನ್ನು 2 ವರ್ಷಗಳ ಕಾಲ ಸ್ಥಗಿತಗೊಳಿಸಿ, ಜೆ ಎನ್ ಯು ಆವರಣದಲ್ಲಿ ಪೊಲೀಸ್ ಠಾಣೆಯನ್ನು ತೆರೆದು ಜೆ ಎನ್ ಯು ಕಾಲೇಜಿನ ಹೆಸರನ್ನು ಬದಲಾಯಿಸಿ ಎಂದು ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇವರ ಸಲಹೆಯನ್ನು ಸ್ವಾಗತಿಸಿರುವ ನೆಟ್ಟಿಗರು ಜೆ ಎನ್ ಯು ಕಾಲೇಜಿಗೆ ಸಾರ್ವರ್ಕರು, ಭಗತ್ ಸಿಂಗ್ ರವರಂತಹ ಹೋರಾಟಗಾರರ ಹೆಸರು ಇಡೀ ಆಗ ದೇಶ ಪ್ರೇಮ ತಾನಾಗಿಯೇ ಹುಟ್ಟುತ್ತದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.