ಡಿ ಕೆ ಶಿ ಸ್ವಾಗತ ಕಾರ್ಯ ಕ್ರಮದ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ- ಕಾಂಗ್ರೆಸ್ ಕಾರ್ಯಕರ್ತರಿಗೆ ಬಾರಿ ಮುಜುಗರ

ಡಿ ಕೆ ಶಿ ಸ್ವಾಗತ ಕಾರ್ಯ ಕ್ರಮದ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಸಿದ್ದರಾಮಯ್ಯ- ಕಾಂಗ್ರೆಸ್ ಕಾರ್ಯಕರ್ತರಿಗೆ ಬಾರಿ ಮುಜುಗರ

ಇದೀಗ ಕಳೆದ ಹಲವಾರು ಗಂಟೆಗಳಿಂದ ನೀವು ಕನ್ನಡದ ಯಾವುದೇ ಚಾನೆಲ್ ಹಾಕಿದರೂ ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಡಿ ಕೆ ಶಿವಕುಮಾರ್ ರವರನ್ನು ಕಾಂಗ್ರೆಸ್ ಕಾರ್ಯ ಕರ್ತರು ಅದ್ದೊರಿಯಾಗಿ ಸ್ವಾಗತ ಮಾಡುತ್ತಿರುವ ಸುದ್ದಿ ಪ್ರಸಾರ ವಾಗುತ್ತಿದೆ. ಕನಿಷ್ಠ ಇನ್ನೂ ಎರಡು ದಿನಗಳ ಕಾಲ ಇದೇ ಸುದ್ದಿ ಪ್ರಸಾರವಾಗುತ್ತಿರುತ್ತದೆ. ಇಷ್ಟು ದಿವಸ ಈ.ಡಿ ಅಧಿಕಾರಿಗಳು ಕನಕಪುರ ಬಂಡೆಯನ್ನು ಪುಡಿ ಪುಡಿ ಮಾಡಿದ್ದಾರೆ, ಡಿ ಕೆ ಶಿ ಯಾವುದಕ್ಕೂ ಜಗ್ಗಲ್ಲ ಹೀಗೆ ಹಲವಾರು ಟೈಟಲ್ ಗಳನ್ನು ಹಾಕಿ TRP ಪಡೆದು ಕೊಂಡ ನಂತರ ಇದೀಗ ಏಕಾಏಕಿ ಡಿ ಕೆ ಶಿವಕುಮಾರ್ ರವರನ್ನು ಹುಲಿ ಬಂತು ಹುಲಿ, ಡಿ ಕೆ ಸಾಹೇಬ್ರು ಇಸ್ ಬ್ಯಾಕ್, ಹೀಗೆ ಇನ್ನು ಹಲವಾರು ಟೈಟಲ್ ಗಳ ಮೂಲಕ TRP ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಪಡುತ್ತಿವೆ.

ಈ ಸ್ವಾಗತ ಕಾರ್ಯಕ್ರಮಕ್ಕೆ ಹಲವಾರು ವಿರೋಧದ ಮಾತುಗಳು ಈಗಾಗಲೇ ಕೇಳಿಬಂದಿವೆ. ಹೌದು, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಈ ವಿಷಯದ ಕುರಿತು ಹೊರಹಾಕಿದ್ದಾರೆ. ಅಂದು ಕೊಂಡಂತೆ ಬಿಜೆಪಿ ಪಕ್ಷದ ಕಾರ್ಯ ಕರ್ತರು ಈ ಸ್ವಾಗತ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತ ಪಡಿಸುತ್ತಾ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇದು ನಮ್ಮ ನಾಯಕನಿಗೆ ನಾವು ನೀಡುತ್ತಿರುವ ಸ್ವಾಗತ ಎಂದು ಸಮರ್ಥನೆ ಮಾಡಿ ಕೊಂಡಿದ್ದಾರೆ. ಇದರ ನಡುವೆ ಮಾಜಿ ಲೋಕಾಯುಕ್ತ ಅಧ್ಯಕ್ಷ ಸಂತೋಷ್ ಹೆಗ್ಡೆ ರವರು ಈ ಕಾರ್ಯಕ್ರಮದ ಕುರಿತು ಮಾತನಾಡಿ, ಮೊದಲು ಭ್ರಷ್ಟರು ಜೈಲಿಗೆ ಹೋಗಿ ಬಂದರೆ ಅವರನ್ನು ಬಹಿಷ್ಕಾರ ಮಾಡಲಾಗುತ್ತಿತ್ತು ಆದರೆ ಇಂದು ಭ್ರಷ್ಟರನ್ನು ಸ್ವಾಗತ ಮಾಡಲಾಗುತ್ತಿದೆ. ಒಳ್ಳೆಯದು ಮಾಡಿದರೇ ಪೂಜೆ ಮಾಡಿ, ಆದರೆ ಭ್ರಷ್ಟರ ಬೆಂಬಲಕ್ಕೆ ನಿಲ್ಲಬೇಡಿ ಎಂದಿದ್ದಾರೆ.

ಇದೀಗ ಇದೇ ವಿಚಾರದ ಕುರಿತು ಮಾತನಾಡಿರುವ ಸಿದ್ದರಾಮಯ್ಯ ರವರು ಇದೇ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜನೆ ಮಾಡಿರುವ ಸ್ವಾಗತ ಅಲ್ಲ. ಇದು ಕೇವಲ ಡಿ ಕೆ ಶಿವಕುಮಾರ್ ರವರ ಬೆಂಬಲಿಗರು ಮಾಡುತ್ತಿರುವ ಸ್ವಾಗತ ಕಾರ್ಯಕ್ರಮ. ಇದಕ್ಕೂ ಹಾಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಕಾರ್ಯ ಕರ್ತರು ಯಾವುದೇ ರೀತಿಯ ಕಾರ್ಯ ಕ್ರಮಗಳಿಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. ಅದೇ ಕಾರಣಕ್ಕಾಗಿ ನಾನು ಸ್ವಾಗತ ಕಾರ್ಯ ಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಖಾಸಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಕಾರ್ಯ ಕರ್ತರಿಗೆ ಬಾರಿ ಮುಜುಗರ ಉಂಟಾಗಿದ್ದು, ಇದೇ ಹೇಳಿಕೆಯು ಇದೀಗ ಬಿಜೆಪಿ ಪಕ್ಷದ ಕಾರ್ಯ ಕರ್ತರಿಗೆ ಅಸ್ತ್ರವಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ವಾದ ವಿವಾದಗಳನ್ನು ಪಕ್ಕಕ್ಕೆ ಇಟ್ಟು, ಈ ಅದ್ದೂರಿ ಮೆರವಣಿಗೆಗೆ ಲಕ್ಷಾಂತರ ರೂ ಖರ್ಚು ಮಾಡಿದ್ದು ಯಾರು ಎಂದು ಎಂಬುದನ್ನು ಐಟಿ ಇಲಾಖೆ ಹೊರ ತೆಗೆಯಲು ಪ್ರಯತ್ನ ಪಟ್ಟರೆ ಒಳಿತು ಎಂದು ಸಹ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.