ಬಿಗ್ ಬ್ರೇಕಿಂಗ್:ಡಿಕೆಶಿ ಜಾಮೀನು ರದ್ದಿಗೆ ಕ್ಷಣಗಣನೆ!! ಇ.ಡಿ ಕೈಗೆ ಬೆಂಗಳೂರಲ್ಲಿ ತಾನೇ ಮತ್ತೊಂದು ಅಸ್ತ್ರ ನೀಡಿದ ಡಿಕೆಶಿ

ಇದೀಗ ಅಷ್ಟೇ ಡಿ.ಕೆ ಶಿವಕುಮಾರ್ ರವರು ಬೆಂಗಳೂರಿಗೆ ಆಗಮಿಸಿ ಭರ್ಜರಿ ಸ್ವಾಗತವನ್ನು ಪಡೆದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದ ಮೆರವಣಿಗೆಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಸಾವಿರಾರು ಬೆಂಬಲಿಗರು ಯಾವ ನಾಯಕನಿಗೂ ನೀಡದಂತಹ ಸ್ವಾಗತ ನೀಡಿ ರಾಜ್ಯದಲ್ಲಿ ಸದ್ದು ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ತಿಹಾರ್ ಜೈಲಿನಿಂದ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಕಾರಣಾಂತರಗಳಿಂದ ಮೂರು ದಿನಗಳ ಕಾಲ ವಾಸ್ತವ್ಯ ಹೂಡಿ ಇದೀಗ ಅಷ್ಟೇ ಬೆಂಗಳೂರಿಗೆ ಬಂದಿಳಿದಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೇ ನ್ಯಾಯಾಲಯದ ಬಳಿ ಹಲವಾರು ಬಾರಿ ಜಾಮೀನಿಗೆ ಮನವಿ ಮಾಡಿದ್ದ ಡಿ.ಕೆ ಶಿವಕುಮಾರ್ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿತ್ತು. ಯಾಕೆಂದರೆ ಇ.ಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರ ವಿರುದ್ಧ ಹಲವಾರು ಬಲವಾದ ಸಾಕ್ಷಿಗಳನ್ನು ಕಲೆಹಾಕಿದ್ದಾರೆ, ಈ ದಾಖಲೆಗಳನ್ನು ಮುಂದಿಟ್ಟುಕೊಂಡು ಇ.ಡಿ ಅಧಿಕಾರಿಗಳು ಡಿ.ಕೆ ಶಿವಕುಮಾರ್ ಅವರಿಗೆ ಜಾಮೀನು ತಪ್ಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಹಬ್ಬಕ್ಕೆ ಮನೆಗೆ ತೆರಳಬೇಕು, ನಾನು ಯಾವುದೇ ತಪ್ಪು ಮಾಡಿಲ್ಲ, ನನಗೆ ಅನಾರೋಗ್ಯದ ಸಮಸ್ಯೆ ಇದೆ ಎಂದು ಹಲವಾರು ಬಾರಿ ಅರ್ಜಿ ಸಲ್ಲಿಸಿದರೂ ಸಹ ನ್ಯಾಯಾಲಯ ಡಿ.ಕೆ ಶಿವಕುಮಾರ್ ಅವರ ಮನವಿಗೆ ಸೊಪ್ಪು ಹಾಕಿರಲಿಲ್ಲ. ಆದರೆ ಡಿ.ಕೆ ಶಿವಕುಮಾರ್ ಅವರ ಪರ ವಕೀಲರು ಕಳೆದ ಬಾರಿ ನಡೆದ ವಾದದಲ್ಲಿ ಡಿ.ಕೆ ಶಿವಕುಮಾರ್ ಅವರ ಆರೋಗ್ಯ ದಿನೇ ದಿನೇ ಕುಂಠಿತ ಗೊಳ್ಳುತ್ತಿದೆ. ಡಿ.ಕೆ ಶಿವಕುಮಾರ್ ರವರು ಎಷ್ಟೇ ಬಾರಿ ಕರೆದರೂ ವಿಚಾರಣೆಗೆ ಹಾಜರಾಗುತ್ತಾರೆ. ಆದ ಕಾರಣದಿಂದ ಈ ಕೂಡಲೇ ಜಾಮೀನು ನೀಡಿ ತಿಹಾರ್ ಜೈಲಿನಿಂದ ಬಿಡುಗಡೆ ಭಾಗ್ಯ ನೀಡಬೇಕು ಎಂದು ನ್ಯಾಯಾಲಯದ ಬಳಿ ವಾದ ಮಂಡಿಸಿದ್ದರು. ಡಿ.ಕೆ ಶಿವಕುಮಾರ್ ಅವರನ್ನು ಅನಾರೋಗ್ಯದ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಒಪ್ಪಿಗೆ ನೀಡಿ ಹಲವಾರು ಷರತ್ತುಗಳನ್ನು ವಿಧಿಸಿ ಡಿ.ಕೆ ಶಿವಕುಮಾರ್ ಅವರನ್ನು ಬಿಡುಗಡೆ ಮಾಡಿತ್ತು. ಇದರಿಂದ ವಿಚಲಿತರಾದ ಇ.ಡಿ ಅಧಿಕಾರಿಗಳು, ಜಾಮೀನು ರದ್ದು ಪಡಿಸಲು ಸುಪ್ರೀಂಕೋರ್ಟ್ ಮೊರೆ ಹೋಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.

ಇದೀಗ ಇದೇ ವಿಚಾರವಾಗಿ ಇ.ಡಿ ಅಧಿಕಾರಿಗಳಿಗೆ ಖುದ್ದು ಡಿ.ಕೆ ಶಿವಕುಮಾರ್ ರವರೇ ಅಸ್ತ್ರವೊಂದನ್ನು ನೀಡಿದ್ದಾರೆ. ಈ ಅಸ್ತ್ರವನ್ನು ಇ.ಡಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಪ್ರಯೋಗ ಮಾಡಿದರೇ ಡಿ.ಕೆ ಶಿವಕುಮಾರ್ ರವರ ಜಾಮೀನು ಬಹಳ ಸುಲಭವಾಗಿ ರದ್ದಾಗುತ್ತದೆ. ಅಷ್ಟಕ್ಕೂ ಆ ಅಸ್ತ್ರವಾದರೂ ಏನು ಗೊತ್ತಾ?? ತಿಳಿಯಲು ಒಮ್ಮೆ ಸಂಪೂರ್ಣವಾಗಿ ಓದಿ.

ನ್ಯಾಯಾಲಯದಲ್ಲಿ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಡಿ.ಕೆ ಶಿವಕುಮಾರ್ ರವರು, ಅನಾರೋಗ್ಯದಿಂದ ಜಾಮೀನು ಪಡೆದುಕೊಂಡಿರುವ ಕಾರಣ, ಯಾವುದೇ ಪ್ರಚಾರ ಸಭೆಗಳಲ್ಲಿ, ರಾಜಕೀಯಕ್ಕೆ ಸಂಬಂಧಿಸಿದ ಭಾಷಣ ಮಾಡಿದ್ದಲ್ಲಿ ಅಥವಾ ಇನ್ನಿತರ ಸಭೆ-ಸಮಾರಂಭ, ಮೆರವಣಿಗೆಗಳಲ್ಲಿ ಭಾಗವಹಿಸಬಾರದು ಎಂದು ಷರತ್ತಿನಲ್ಲಿ ತಿಳಿಸಿತ್ತು ಎನ್ನಲಾಗಿದೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಅವರು ನ್ಯಾಯಾಲಯದ ಆದೇಶ ಮೀರಿ ಮೇಲೆ ತಿಳಿಸಿರುವ ಯಾವುದೇ ನಿಯಮಗಳನ್ನು ಮೀರಿದ್ದಲ್ಲಿ, ಅನಾರೋಗ್ಯದ ಕಾರಣ ನೀಡಿ ಪಡೆದುಕೊಂಡಿರುವ ಜಾಮೀನನ್ನು ಪ್ರಶ್ನೆ ಮಾಡಿ ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಹಾಗೂ ನೀಡಿರುವ ಜಾಮೀನನ್ನು ಕೂಡಲೇ ರದ್ದು ಪಡಿಸಿ ನ್ಯಾಯಾಲಯ ಮತ್ತೊಮ್ಮೆ ಬಂಧನ ಆದೇಶ ಹೊರಡಿಸುವ ಹಕ್ಕು ಹೊಂದಿದೆ ಎಂದು ಮೊದಲೇ ತಿಳಿಸಲಾಗಿದೆ. ಆದರೆ ಇದೆಲ್ಲವನ್ನು ಮರೆತಿರುವ ಡಿ.ಕೆ ಶಿವಕುಮಾರ್ ಅವರು ಅದ್ದೂರಿ ಸ್ವಾಗತವನ್ನು ಎಂಜಾಯ್ ಮಾಡುತ್ತಾ, ಓಪನ್ ಕಾರಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೆ ಮಾಧ್ಯಮಗಳ ಮುಂದೆ ಹಲವಾರು ನಿಮಿಷಗಳ ಕಾಲ ಭಾಷಣ ಮಾಡಿ ನಿಯಮ ಮುರಿದಿದ್ದಾರೆ.

Post Author: Ravi Yadav