ಜಮ್ಮು ಕಾಶ್ಮೀರದ ವಿಚಾರದಲ್ಲಿ ವಿಪಕ್ಷಗಳಿಗೆ ಬಹಿರಂಗ ಸವಾಲು ಎಸೆದ ಮೋದಿ !

ಜಮ್ಮು ಕಾಶ್ಮೀರದ ವಿಚಾರದಲ್ಲಿ ವಿಪಕ್ಷಗಳಿಗೆ ಬಹಿರಂಗ ಸವಾಲು ಎಸೆದ ಮೋದಿ !

ಇದೀಗ ದೇಶದ ಎಲ್ಲೆಡೆ ಬಿಜೆಪಿ ಪಕ್ಷವು ತಾನು ಯಾವ ಕಾರಣಕ್ಕೆ ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಿದ ವಿಶೇಷ ಸ್ಥಾನ ಮಾನ ವನ್ನು ತೆಗೆದು ಹಾಕಿದ್ದೇನೆ ಎಂದು ಸ್ಪಷ್ಟವಾಗಿ ಜನರಿಗೆ ತಿಳಿಸಿ ಹೇಳಿದೆ. ವಿಶೇಷ ಸ್ಥಾನಮಾನದಿಂದ ಜಮ್ಮು ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಉಗ್ರರು ಯಾವ ರೀತಿ ವಿಶೇಷ ಸ್ಥಾನಮಾನವನ್ನು ದುರ್ಬಳಕೆ ಮಾಡಿಕೊಂಡು ದೇಶದ ವಿರುದ್ಧ ಕತ್ತಿ ಮಸೆಯುತ್ತಿದ್ದರು, ಜಮ್ಮು ಹಾಗೂ ಕಾಶ್ಮೀರದ ಕೆಲವು ಪ್ರಾದೇಶಿಕ ಪಕ್ಷಗಳು ಜನರನ್ನು ಹೇಗೆ ದೋಚಿ ಕೊಳ್ಳುತ್ತಿದ್ದವು ಹಾಗೂ ದಬ್ಬಾಳಿಕೆ ಮಾಡುತ್ತಿದ್ದರು ಎಂಬುದನ್ನು ಇಡೀ ದೇಶ ಸುತ್ತಿ ಬಿಜೆಪಿ ಪಕ್ಷವು ಯಾವ ಕಾರಣಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆಯಲಾಗಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಟ್ಟಿದೆ. ಇಡೀ ದೇಶದ ಬಹುತೇಕ ಜನರು ಜಮ್ಮು ಹಾಗೂ ಕಾಶ್ಮೀರ ಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದುಕೊಳ್ಳುವ ಸಮಯಕ್ಕಾಗಿ ಕಾದು ಕುಳಿತಿದ್ದರು, ಆದರೆ ಕೆಲವು ಪಕ್ಷಗಳು ಮಾತ್ರ ವಿಶೇಷ ಸ್ಥಾನಮಾನವನ್ನು ತೆಗೆಯುವುದು ಬೇಡ ಎಂದು ಕಿಡಿಕಾರಿದ್ದವು..

ಪರ-ವಿರೋಧದ ಬಗ್ಗೆ ತಲೆಕೆಡಿಸಿಕೊಳ್ಳದ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಹಾಗೂ ಕಾಶ್ಮೀರ ದಲ್ಲಿ ನಡೆಯುತ್ತಿದ್ದ ಹಿಂಸಾಚಾರಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಹಾಗೂ ಸೇನೆಗೆ ಸ್ವತಂತ್ರ ನೀಡಿ ಬಲ ಪಡಿಸಲು ಕೊನೆಗೂ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದಾದ ಬಳಿಕ ವಿರೋಧ ಕೇಳಿ ಬಂದ ಕಾರಣ ಬಿಜೆಪಿ ಪಕ್ಷವು ತನ್ನ ಹಲವಾರು ಸಂಸದರನ್ನು ನೇಮಕ ಮಾಡಿ ದೇಶದ ಹಲವಾರು ಮೂಲೆಗಳಿಗೆ ತೆರಳಿ ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ದಿಂದ ದೇಶಕ್ಕೆ ಹಾಗೂ ದೇಶದ ಸೈನಿಕರಿಗೆ ಉಂಟಾಗುತ್ತಿದ್ದ ಸಮಸ್ಯೆಗಳ ಕುರಿತು ಸಂಪೂರ್ಣವಾಗಿ ವಿವರಣೆ ನೀಡಿ ಇದೀಗ ದೇಶದ ಶೇಕಡ 90ಕ್ಕೂ ಹೆಚ್ಚು ಜನ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ್ದು ಒಳ್ಳೆಯದಾಯಿತು ಎನ್ನುತ್ತಿದ್ದಾರೆ. ಹೀಗಿರುವಾಗ ಇಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ಕೇಂದ್ರದ ಈ ಕಠಿಣ ನಿರ್ಧಾರವನ್ನು ವಿರೋಧ ಮಾಡುತ್ತಿರುವ ಕಾಂಗ್ರೆಸ್ ಹಾಗೂ ಎನ್ಸಿಪಿ ಪಕ್ಷಗಳಿಗೆ ಬಹಿರಂಗ ಸವಾಲು ಎಸೆದಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು ಆಳಿದ ಈ ಪವಿತ್ರ ಭೂಮಿಯಲ್ಲಿ ವಿರೋಧ ಪಕ್ಷಗಳಿಗೆ ನಾನು ಇಂದು ಬಹಿರಂಗ ಸವಾಲು ಎಸೆಯುತ್ತೇನೆ. ಇಷ್ಟು ದಿವಸ ಜಮ್ಮು ಹಾಗೂ ಕಾಶ್ಮೀರ ಕಣಿವೆಯಲ್ಲಿ ನೀಡಿದ ವಿಶೇಷ ಸ್ಥಾನಮಾನದಿಂದ ಅಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಸ್ಥಿತ ವರ್ಗದವರಿಗೆ ಯಾವುದೇ ಅಗತ್ಯ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೆ, ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ನಿರ್ಧಾರವನ್ನು ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಲು ಬಳಸಿಕೊಂಡು ಮೊಸಳೆ ಕಣ್ಣೀರು ಗಳನ್ನು ಸುರಿಸುತ್ತಾ ಅಲ್ಲಿನ ಜನರನ್ನು ಮರಳು ಮಾಡುವ ನಾಟಕವಾಡುತ್ತಿವೆ.. ಹೇಗಿದ್ದರೂ ಮೊದಲಿನಿಂದಲೂ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಿರುವ ನಿರ್ಧಾರವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಾ ಬಂದಿವೆ, ಹೀಗಿರುವಾಗ ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಯ ಪ್ರಣಾಳಿಕೆಯಲ್ಲಿ ಎಲ್ಲಾ ವಿಪಕ್ಷಗಳು ನಾವು ವಿಶೇಷ ಸ್ಥಾನಮಾನವನ್ನು ಮತ್ತೊಮ್ಮೆ ಕಾಶ್ಮೀರಕ್ಕೆ ಮರಳಿ ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಸೇರಿಸಲಿ.

ತಾಕತ್ತಿದ್ದರೆ, ಮತ್ತೊಮ್ಮೆ ಜಮ್ಮು ಹಾಗೂ ಕಾಶ್ಮೀರ ಕಣಿವೆಯಲ್ಲಿ ವಿಶೇಷ ಸ್ಥಾನಮಾನವನ್ನು ಜಾರಿಗೊಳಿಸುತ್ತೇವೆ ಎಂದು ತಮ್ಮ ಎಲ್ಲಾ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಗಳಲ್ಲಿ ಈ ಅಂಶವನ್ನು ಸೇರಿಸಿ ಬಿಡುಗಡೆ ಮಾಡಲಿ. ಕೇವಲ ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆಗಳಿಗೆ ಈ ಪ್ರಣಾಳಿಕೆ ಸೀಮಿತ ವಾಗಬಾರದು, ಬದಲಾಗಿ ದೇಶದಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ನಾವು ಮರಳಿ ಜಾರಿ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ತಿಳಿಸಿ ಹೇಳಲಿ ಎಂದು ಜರಿದಿದ್ದಾರೆ. ಇನ್ನು ವಾಲ್ಮೀಕಿ ಸಮುದಾಯದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ ಅವರು ನಾನು ಇದೀಗ ಜಮ್ಮು ಹಾಗೂ ಕಾಶ್ಮೀರಕ್ಕೆ ತೆರಳಿ ವಾಲ್ಮೀಕಿ ಸಮುದಾಯದ ವಾಲ್ಮೀಕಿ ಬಂಧುಗಳನ್ನು ಅಪ್ಪಿಕೊಂಡು ಸಾಂತ್ವನ ಮಾಡಬಹುದಾಗಿದೆ ಎಂದು ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.