ಬಯಲಾಯಿತು ಬಿಜೆಪಿ ಆಂತರಿಕ ಸಮೀಕ್ಷೆ: ಬಿಜೆಪಿಗೆ ಬಿಗ್ ಶಾಕ್ ! ಎಚ್ಚೆತ್ತುಕೊಳ್ಳದೆ ಇದ್ದರೆ ಬಿಜೆಪಿ ಅಪಾಯ ಕಟ್ಟಿಟ್ಟ ಬುತ್ತಿ

ಇದೀಗ ಎಲ್ಲಿ ನೋಡಿದರೂ ವಿಧಾನಸಭಾ ಉಪ ಚುನಾವಣೆ ಬಾರಿ ಸದ್ದು ಮಾಡುತ್ತಿದೆ. ಇತ್ತ ಅನರ್ಹ ಶಾಸಕರ ಭವಿಷ್ಯ ನ್ಯಾಯಾಲಯದ ಅಂಗಳದಲ್ಲಿ ಇರುವ ಬಿಜೆಪಿ ಪಕ್ಷವು ಅಭ್ಯರ್ಥಿಗಳನ್ನು ಘೋಷಣೆ ಮಾಡದೆ ನ್ಯಾಯಾಲಯದ ತೀರ್ಪಿಗಾಗಿ ಕಾದು ಕುಳಿತಿದೆ. ಮತ್ತೊಂದೆಡೆ ಹೇಗಾದರೂ ಮಾಡಿ ಬಿಜೆಪಿ ಪಕ್ಷವನ್ನು ಸೋಲಿಸಿ ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಜಾರಿಗೆ ತರುವ ಆಲೋಚನೆ ನಡೆಸಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗಾಗಲೇ ಉಪ ಚುನಾವಣೆಯ ತಯಾರಿಯಲ್ಲಿ ತೊಡಗಿಕೊಂಡಿವೆ. ಜೆಡಿಎಸ್ ಪಕ್ಷವು ಹೇಗಾದರೂ ಮಾಡಿ ಮೂರು ನಾಲ್ಕು ಸ್ಥಾನಗಳನ್ನು ಗೆಲ್ಲಬೇಕು, ಇನ್ನುಳಿದಂತೆ ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷವನ್ನು ಆರಕ್ಕಿಂತ ಕಡಿಮೆ ಸೀಟುಗಳಿಗೆ ಸೀಮಿತ ಗೊಳಿಸಿದರೆ ಮಧ್ಯಂತರ ಚುನಾವಣೆ ಕಟ್ಟಿಟ್ಟ ಬುತ್ತಿ ಎಂದು ಹೋರಾಡುತ್ತಿವೆ. ಹೀಗಿರುವಾಗ ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆ ಇದೀಗ ಹೊರ ಬಿದ್ದಿದ್ದು ಬಿಜೆಪಿ ಪಕ್ಷಕ್ಕೆ ಅತಿದೊಡ್ಡ ಶಾಕ್ ಎದುರಾಗಿದೆ.

ಹೇಗಾದರೂ ಮಾಡಿ ಈ ಉಪ ಚುನಾವಣೆಯಲ್ಲಿ ಕನಿಷ್ಠ ಏಳು ಸೀಟುಗಳನ್ನು ಗೆದ್ದುಕೊಂಡು ಸರ್ಕಾರವನ್ನು ಭದ್ರ ಪಡಿಸಿಕೊಳ್ಳಬೇಕು ಎಂದು ಪ್ರಯತ್ನ ಪಡುತ್ತಿರುವ ಬಿಜೆಪಿ ಪಕ್ಷವು ಎಲ್ಲಾ ಚುನಾವಣೆ ಗಳಿಗೂ ಮುನ್ನ ಮಾಡುವಂತೆ ಪಕ್ಷದ ವತಿಯಿಂದ ಆಂತರಿಕ ಸಮೀಕ್ಷೆ ನಡೆಸಿ ಫಲಿತಾಂಶ ವನ್ನು ಕಂಡು ಬೆರಗಾಗಿದೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತಿರುವ ಕಾರಣ ಬಿಜೆಪಿ ಪಕ್ಷದಲ್ಲಿ ಆಂತರಿಕ ಕಲಹ ಹೆಚ್ಚಾಗಿದ್ದು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಕೇವಲ ಮೂರರಿಂದ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ ಎಂದು ಆಂತರಿಕ ಸಮೀಕ್ಷೆ ಹೇಳಿದೆ. ಇದರಿಂದ ಕಂಗಾಲಾಗಿರುವ ಬಿಜೆಪಿ ಪಕ್ಷವು ವಿಧಾನಸಭಾ ಉಪ ಚುನಾವಣೆಯನ್ನು ಮತ್ತಷ್ಟು ಎಚ್ಚರಿಕೆಯಿಂದ ಎದುರಿಸುವುದು ಒಳಿತು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದೆ. ಒಂದು ವೇಳೆ ಇದೇ ರೀತಿ ನಡೆದು ಕರ್ನಾಟಕ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸಂದರ್ಭ ಬಂದರೆ ಈ ಬಾರಿಯೂ ಸಹ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav