ದುರ್ಗಾಪೂಜೆ ಮಾಡಿದ್ದಕ್ಕೆ ಟೀಕೆ ಮಾಡಿದ್ದ ಮೌಲ್ವಿಗಳಿಗೆ ತಕ್ಕ ತಿರುಗೇಟು ನೀಡಿದ ಸಂಸದೆ ನುಸ್ರತ್ ಜಹಾನ್ – ಹೇಳಿದ್ದೇನು ಗೊತ್ತಾ?

ಬಂಗಾಳದ ಖ್ಯಾತ ನಟಿ ಹಾಗೂ ಟಿಎಂಸಿ ಪಕ್ಷದ ಸಂಸದ ನುಸ್ರತ್ ಜಹಾನ್ ರವರು ತಮ್ಮ ನಡೆಗಳ ಮೂಲಕ ಹಲವಾರು ಬಾರಿ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೂಲತಹ ಇಸ್ಲಾಂ ಧರ್ಮ ದವರಾಗಿರುವ ನುಸ್ರತ್ ಜಹಾನ್ ರವರು ಸರ್ವ ಧರ್ಮಗಳಲ್ಲಿ ಸಮಾನತೆಯನ್ನು ಕಾಣುತ್ತಾರೆ. ಇತ್ತೀಚೆಗಷ್ಟೇ ತಮ್ಮ ವೈವಾಹಿಕ ಜೀವನವನ್ನು ನಿಖಿಲ್ ಜೈನ್ ರವರ ಜೊತೆ ಆರಂಭ ಮಾಡಿದ್ದರು. ವಿವಾಹದ ಬಳಿಕ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮನಃಸ್ಪೂರ್ತಿಯಾಗಿ ಪಾಲ್ಗೊಳ್ಳುತ್ತಿರುವ ನುಸ್ರತ್ ಜಹಾನ್ ರವರು ಇತ್ತೀಚೆಗೆ ಎಂದಿನಂತೆ ಮಂಗಳಸೂತ್ರ ಧರಿಸಿ, ತಮ್ಮ ಪತಿ ನಿಖಿಲ್ ಜೈನ್ ರವರೊಂದಿಗೆ ದುರ್ಗಾ ಮಾತೆಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಿಮ ಬಂಗಾಳದ ಮೂಲ ವಿಧಾನಗಳಲ್ಲಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದ ನುಸ್ರತ್ ಜಹಾನ್ ರವರು ಪೂಜೆ ಮಾಡಿ ನೃತ್ಯ ಮಾಡುತ್ತಿರುವ ವಿಡಿಯೋ ಇಡೀ ದೇಶದ ಗಮನ ಸೆಳೆದಿತ್ತು.

ಆದರೆ ನುಸ್ರತ್ ಜಹಾನ್ ರವರ ಈ ನಡೆಗೆ ಸುನ್ನಿ ಪಂಥಕ್ಕೆ ಸೇರಿದ ಧರ್ಮ ಗುರುಗಳು ಕಿಡಿಕಾರಿದ್ದರು. ನುಸ್ರತ್ ಜಹಾನ್ರವರ ವಿರುದ್ಧ ಕಿಡಿಕಾರಿರುವ ಧರ್ಮ ಗುರುಗಳಾದ ಮುಸ್ತಿ ಅಸದ್ ಕಾಶ್ಮೀ ಅವರು ಇಸ್ಲಾಂ ಧರ್ಮದ ಪ್ರಕಾರ ಎಲ್ಲಾ ಮುಸಲ್ಮಾನರು ಕೇವಲ ಅಲ್ಲಾಹುವಿನ ಪ್ರಾರ್ಥನೆ ಮಾಡಬೇಕು, ಇದನ್ನು ಇಸ್ಲಾಂ ಧರ್ಮ ಈಗಾಗಲೇ ನುಸ್ರತ್ ಜಹಾನ್ ರವರಿಗೆ ಹಲವಾರು ಬಾರಿ ಆದೇಶ ನೀಡಿದೆ. ಆದರೂ ಸಹ ನುಸ್ರತ್ ಜಹಾನ್ ರವರು ಎಲ್ಲ ಆದೇಶಗಳನ್ನು ತಿರಸ್ಕಾರ ಮಾಡಿ ಹಿಂದೂ ದೇವರುಗಳ ಪೂಜೆಗಳನ್ನು ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧ, ಅವರು ಮಾಡಿದ ಕೆಲಸ ಅರಾಮ್ (ಧರ್ಮಕ್ಕೆ ಬಾಹಿರ, ಪಾಪದ ಕೆಲಸ) ಎಂದು ಕಠಿಣ ಮಾತುಗಳಲ್ಲಿ ನುಸ್ರತ್ ಜಹಾನ್ ರವರ ವಿರುದ್ಧ ಕಿಡಿಕಾರಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ಲಾಂ ಮೌಲ್ವಿ ಗಳು , ನುಸ್ರತ್ ಜಹಾನ್ರವರ ವಿವಾಹದ ಬಗ್ಗೆಯೂ ಮಾತನಾಡಿ, ನುಸ್ರತ್ ಜಹಾನ್ ರವರು ಅನ್ಯಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಇದು ಇಸ್ಲಾಂ ಧರ್ಮದ ತತ್ವಗಳಿಗೆ ವಿರುದ್ಧ, ಆದ ಕಾರಣ ಈ ಕೂಡಲೇ ನುಸ್ರತ್ ಜಹಾನ್ ರವರು ತಮ್ಮ ಹೆಸರು ಹಾಗೂ ತಮ್ಮ ಧರ್ಮವನ್ನು ಬದಲಾಯಿಸಿ ಕೊಳ್ಳಬೇಕು. ಇಸ್ಲಾಂ ಹೆಸರು ಇಟ್ಟುಕೊಂಡು ಧರ್ಮಕ್ಕೆ ಯಾವುದೇ ರೀತಿಯ ಕೆಟ್ಟ ಹೆಸರು ತರುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದರು. ಪ್ರತಿಯೊಂದು ವಿಚಾರಗಳಿಗೂ ತಮ್ಮ ಸರ್ವ ಧರ್ಮಗಳು ಸಮ ಎಂಬ ತತ್ವದಿಂದ ತಿರುಗೇಟು ನೀಡುತ್ತಿದ್ದ ನುಸ್ರತ್ ಜಹಾನ್ ರವರು ಮೌಲ್ವಿ ರವರ ಹೇಳಿಕೆಗೂ ಸಹ ತಿರುಗೇಟು ನೀಡಿದ್ದು, ಮೌಲ್ವಿಗಳು ನುಸ್ರತ್ ಜಹಾನ್ ರವರ ತಿರುಗೇಟಿಗೆ ಮತ್ತೊಮ್ಮೆ ಕೆಂಡಕಾರಿದ್ದಾರೆ.

ಇಸ್ಲಾಂ ಧರ್ಮಗುರುಗಳ ಆಕ್ರೋಶಕ್ಕೆ ಪ್ರತಿಕ್ರಿಯೆ ನೀಡಿರುವ ನುಸ್ರತ್ ಜಹಾನ್ ರವರು, ನಾನು ಎಲ್ಲ ಧರ್ಮಗಳ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುತ್ತೇನೆ. ಸರ್ವ ಧರ್ಮಗಳು ಸಮ, ಎಲ್ಲ ಧರ್ಮದ ಸೌಹಾರ್ದತೆಯನ್ನು ಸಾರಲು ನನ್ನದೇ ಆದ ಹಾದಿಯಲ್ಲಿ ನಾನು ಮುನ್ನುಗ್ಗುತ್ತಿದ್ದೇನೆ, ನಾನು ಮಾಡುತ್ತಿರುವುದು ಸರಿ ಎಂದು ನನಗೆ ಅನಿಸುತ್ತಿದೆ. ನನ್ನ ಪತಿ ಹಿಂದೂ ಧರ್ಮದವರು, ಆದ ಕಾರಣದಿಂದ ನಾನು ಮಂಗಳಸೂತ್ರವನ್ನು ಬಹಳ ಗೌರವದಿಂದ ಪೂಜಿಸುತ್ತೇನೆ. ದುರ್ಗಾ ಮಾತೆಯ ಪೂಜೆ ಮಾಡುವುದು ನನಗೆ ತಪ್ಪು ಎಂದು ಭಾಸವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನುಸ್ರತ್ ಜಹಾನ್ ರವರ ಈ ಹೇಳಿಕೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಪರ ಹಾಗೂ ವಿರೋಧದ ಹೇಳಿಕೆಗಳ ನಡುವೆ ಕೆಲವೊಂದು ಆಕ್ರೋಶದ ಮಾತುಗಳು ಕೇಳಿಬಂದಿವೆ.

Post Author: Ravi Yadav