ತಗೊಳಪ್ಪಾ ! ಮಂಧ್ಯಂತರ ನೆರೆ ಪರಿಹಾರ ಘೋಷಣೆ ನೋಡಿ ಪ್ರಕಾಶ್ ರಾಜ್ ಹೇಳಿದ್ದೇನು ಗೊತ್ತಾ??

ಇದ್ದಕ್ಕಿದ್ದ ಹಾಗೆಯೇ ಕೆಲವು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಸೇರಿದಂತೆ ರಾಜ್ಯದ ಎಲ್ಲೆಡೆ ವಿರೋಧ ಬೆಂಬಲಿಗರು ಸಹ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶವನ್ನು ಹೊರ ಹಾಕಿದ್ದರು.. ನೆರೆ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದರು. ಇದರ ಜೊತೆಗೆ ಬಿಜೆಪಿ ಪಕ್ಷದ ಹಲವಾರು ಕಟ್ಟಾ ಬೆಂಬಲಿಗರು ಸಹ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದ್ಯಾವ ಕಾರಣಕ್ಕೆ ಕೇಂದ್ರ ಸರ್ಕಾರ ನೆರೆ ಪರಿಹಾರವನ್ನು ವಿಳಂಬ ಮಾಡಿತ್ತೋ ತಿಳಿದಿಲ್ಲ, ಆದರೆ ಇದರಿಂದ ಕೇಂದ್ರ ಸರ್ಕಾರ ಟೀಕೆಗಳಿಗೆ ಗುರಿಯಾಗಿತ್ತು. ಇದೇ ಸಮಯದಲ್ಲಿ ಚುನಾವಣಾ ವೇಳೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಿದ್ದ ಹಲವಾರು ಸಾಮಾನ್ಯ ಜನರಿಗೆ ದುಡ್ಡುಕೊಡದೆ ಪಲಾಯನ ಮಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಪ್ರಕಾಶ್ ರಾಜ್ ರವರು  ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದರು.

ಹೌದು, ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಟೀಕೆಗಳ ಬಾಣಗಳನ್ನು ಸುರಿಸಿದ್ದ ಪ್ರಕಾಶ್ ರಾಜ್ ಮತ್ತೊಮ್ಮೆ ಸದ್ದು ಮಾಡಿದ್ದರು.ಇದಾದ ಕೆಲವೇ ಕೆಲವು ದಿನಗಳಲ್ಲಿ ರಾಜ್ಯದ ಸಮಗ್ರ ವರದಿಯನ್ನು ಗಮನಿಸಿದ ಕೇಂದ್ರ ಸರ್ಕಾರ, ವರದಿಯನ್ನು ತಿರಸ್ಕರಿಸಿ ನಂತರ ಮತ್ತೊಮ್ಮೆ ವರದಿ ಸಲ್ಲಿಸಲು ಮನವಿ ಮಾಡಿತ್ತು. ಆದರೆ ವರದಿ ಸಲ್ಲಿಸಲು ವಿಳಂಬ ಆಗುವ ಕಾರಣದಿಂದ ಮಧ್ಯಂತರ ಪರಿಹಾರ ಎಂದು 1200 ಕೋಟಿ ಹಣವನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿತ್ತು. ಇದೀಗ ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ ರವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೊದ್ದಿಕೊಳ್ಳುವುದಕ್ಕೆ ಕಂಬಳಿ ಕೇಳಿದರೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಜನರಿಗೆ ಕರ್ಚಿಫ್ ಭಿಕ್ಷೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಣ್ಣ ಮೊತ್ತದ ಪರಿಹಾರಕ್ಕೆ ಪ್ರಜೆಗಳು ಮರುಳಾಗದಿರಿ, ದೇಶದ ದುಡ್ಡು ನಮ್ಮದು, ನಮ್ಮ ಸಂಕಷ್ಟದಲ್ಲಿ ಪಕ್ಷತೀತ ರಾಗಿ ಪ್ರಶ್ನಿಸುವುದನ್ನು ನಿಲ್ಲಿಸಬೇಡಿ. ಯಾರೇ ಆದರೂ, ನಾವು ಉಗೀತಿದ್ರೇನೆ ಕೆಲಸ ಮಾಡುವುದು ಅಲ್ವಾ ಎಂದು ಟ್ವಿಟ್ಟರ್ ನಲ್ಲಿ ಕಿಡಿ ಕಾರಿದ್ದಾರೆ.

Post Author: Ravi Yadav