ಮೋದಿ ಅಪಶಕುನ ದಿಂದ ಚಂದ್ರಯಾನ ವಿಫಲವಾಯಿತು ಎಂದ ಕುಮಾರಸ್ವಾಮಿ ರವರಿಗೆ ತಕ್ಕ ತಿರುಗೇಟು ನೀಡಿದ ಸುರೇಶ್ ಕುಮಾರ್ ! ಹೇಳಿದ್ದೇನು ಗೊತ್ತಾ??

ಚಂದ್ರಯಾನ 2 ಕೊನೆಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿರುವ ಬಗ್ಗೆ ಇಡೀ ದೇಶದ ಜನರು ಬೇಸರವಾಗಿದ್ದಾರೆ. ಆದರೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರು ಇಸ್ರೋ ಸಂಸ್ಥೆ ಹಾಗೂ ಚಂದ್ರಯಾನದ ವಿಷಯದಲ್ಲಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ನರೇಂದ್ರ ಮೋದಿ ರವರು ಚಂದ್ರಯಾನ ೨ ಲೈವ್ ವೀಕ್ಷಿಸಲು ಬೆಂಗಳೂರಿಗೆ ಬಂದ ಕಾರಣ ಅಪಶಕುನ ದಿಂದ ಚಂದ್ರಯಾನ ವಿಫಲವಾಯಿತು ಎಂದು ಕುಮಾರಸ್ವಾಮಿ ರವರ ಹೇಳಿಕೆ ನೀಡಿದ್ದೆ, ಕುಮಾರಸ್ವಾಮಿರವರ ವಿರುದ್ಧ ಬಹಳ ಆಕ್ರೋಶದ ಮಾತುಗಳು ಕೇಳಿ ಬಂದಿದ್ದವು. ಇಷ್ಟು ಸಾಲದು ಎಂಬಂತೆ, ಈ ಯೋಚನೆಯನ್ನು ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿತ್ತು, ಎಂದು ಕಾಂಗ್ರೆಸ್ ಪಕ್ಷದ ಪರವಾಗಿ ಮಾತನಾಡಿದ್ದರು.

ಆದರೆ ನರೇಂದ್ರ ಮೋದಿ ರವರು ಎಲ್ಲಿಯೂ ಇದು ನನ್ನ ಯೋಜನೆ ಅಥವಾ ನನ್ನ ಸರ್ಕಾರದ ಸಾಧನೆ ಎಂದು ಹೇಳಿಕೊಂಡಿಲ್ಲ ಅಷ್ಟೇ ಅಲ್ಲದೆ, ಇಸ್ರೋ ಸಂಸ್ಥೆಗೆ ಅಗತ್ಯವಾದ ಸಮಯದಲ್ಲಿ ಅಗತ್ಯವಾದ ಹಣ ಬಿಡುಗಡೆ ಮಾಡಿದ್ದಾರೆ ಇದನ್ನು ಸಹ ಎಲ್ಲಿಯೂ ಅವರು ಬಾಯ್ಬಿಟ್ಟಿಲ್ಲ . ಈ ಎಲ್ಲ ಕಾರಣಗಳಿಂದ ಕುಮಾರಸ್ವಾಮಿ ರವರ ವ್ಯಂಗ್ಯದ ಮಾತುಗಳು ಬಾರಿ ಆಕ್ರೋಶಕ್ಕೆ ಕಾರಣವಾಗಿದ್ದವು, ಇದೇ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಕ್ಕ ತಿರುಗೇಟು ನೀಡಿದ್ದಾರೆ, ಇದೇ ವಿಚಾರವಾಗಿ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ತಕ್ಕ ತಿರುಗೇಟು ನೀಡಿದ್ದಾರೆ,

ಇಂದು ಗಂಗಾವತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು, ನನಗೆ ವೈಯಯುಕ್ತವಾಗಿ ಮನಸ್ಸಿಗೆ ಬಹಳ ದುಃಖವಾಗುತ್ತಿದೆ. ಯಾಕೆಂದರೆ ಈ ರೀತಿ ಹೇಳಿಕೆ ನೀಡುವಂತಹ ಕೆಳಮಟ್ಟದ ಮಾನಸಿಕ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯೊಬ್ಬರು, ನಮ್ಮ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕೆಲಸ ಮಾಡಿದ್ರಲ್ಲ. ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಿದಾಗ ಇನ್ನೇನು ಲ್ಯಾಂಡ್ ಆಯಿತು ಎನ್ನುವಷ್ಟರಲ್ಲಿ ಕೇವಲ 400 ಮೀ. ದೂರದಲ್ಲಿ ವಿಕ್ರಮ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಕ್ಷಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾವ ರೀತಿ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂಬುದನ್ನು ಇಡೀ ದೇಶವೇ ನೋಡಿದೆ.

ಈ ಘಟನೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಇನ್ನೂ ಎತ್ತರಕ್ಕೆ ಬೆಳದಿದೆ ಎಂದರು. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಎಲ್ಲದರಲ್ಲೂ ರಾಜಕೀಯ ಬೆರೆಸುವುದು ಒಳ್ಳೆಯದಲ್ಲ. ರಾಜಕೀಯ ಬೆರುಸುವಂತಹ ವಿಚಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ರಾಜಕೀಯದ ಬಗ್ಗೆ ಮಾತನಾಡಲಿ. ಇಸ್ರೋ ಸಂಸ್ಥೆಗೆ ಆದ ನೋವನ್ನು ಇಡೀ ದೇಶವೇ ಅನುಭವಿಸುತ್ತಿದೆ. ಹೆಚ್.ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರೂ ಒಟ್ಟಿಗೆ ಸೇರಿ ಸರ್ಕಾರ ರಚನೆ ಮಾಡಿದ್ದರು. ತಾವು ಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ ಸಿದ್ದರಾಮಯ್ಯ ರವರು ಮೂಢನಂಬಿಕೆ ನಿಷೇಧ ಕಾನೂನು ನನ್ನ ಜಾರಿಗೆ ತಂದಿದ್ದರು. ಈಗ ಹೆಚ್.ಡಿ ಕುಮಾರಸ್ವಾಮಿ ರವರು ಈ ರೀತಿ ಮಾತನಾಡುತ್ತಿರುವುದು ಕೂಡ ಮೂಢನಂಬಿಕೆಯೇ. ಹಾಗಾಗಿ ಹೆಚ್.ಡಿ ಕುಮಾರಸ್ವಾಮಿ ರವರು ಈ ವಿಚಾರದಲ್ಲಿ ಎಚ್ಚರ ಇಟ್ಟುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.

Post Author: Ravi Yadav