ಚಂದ್ರಯಾನ -2 ವಿಫಲವಾಗಲು ಕಾರಣ ತಿಳಿಸಿದ ಕುಮಾರಣ್ಣ- ಹೇಳಿದ್ದನ್ನು ಕೇಳಿ ರೊಚ್ಚಿಗೆದ್ದ ಜನ

ಕುಮಾರಸ್ವಾಮಿ ರವರು ಇತ್ತೀಚಿಗೆ ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿಯೂ ಭಾರತೀಯ ಸೇನೆಯ ಬಗ್ಗೆ ಹಾಗೂ ಪುಲ್ವಾಮಾ ದಾಳಿಯ ಬಗ್ಗೆ ಆಡಿದ ಮಾತುಗಳು ಬಾರಿ ವೈರಲ್ ಆಗಿದ್ದವು. ಇದೀಗ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡಿ ಹಾಗೇ ಮಾಡಿ ಇಸ್ರೋ ವಿಷಯದಲ್ಲಿ ರಾಜಕೀಯವನ್ನು ಎಳೆದು ತಂದು ಮತ್ತೊಮ್ಮೆ ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಚಂದ್ರಯಾನ -2 ನ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ, ಯಾವೊಬ್ಬ ನಿಜವಾದ ದೇಶ ಭಕ್ತರು ಎಷ್ಟೇ ನಿರಾಸೆಗೊಂಡಿದ್ದರೂ ಸಹ, ಇನ್ನು ಸಮಯವಿದೆ ಇಸ್ರೋ ಏನಾದರೂ ಮಾಡಿ ವಿಕ್ರಂ ಲ್ಯಾಂಡರ್ ನ ಜೊತೆ ಸಂಪರ್ಕ ಸಾಧಿಸುತ್ತದೆ ಎಂದು ನಿರಾಸೆಯಲ್ಲಿಯೂ ಕೊನೆ ಆಸೆ ಉಳಿಸುಕೊಂಡು ಕಾಯುತ್ತಿದ್ದಾರೆ.ಇಷ್ಟೆಲ್ಲ ನಡೆಯುತ್ತಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ರವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದು ವಿಪರ್ಯಾಸವೇ ಸರಿ.

ಆದರೆ ಕುಮಾರಸ್ವಾಮಿ ರವರು ಮಾತ್ರ ಇದನ್ನು ರಾಜಕೀಯ ಲಾಭವನ್ನಾಗಿ ಮಾಡಿಕೊಳ್ಳರು ಪ್ರಯತ್ನ ಪಟ್ಟು, ಚಂದ್ರಯಾನ 2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರ ಮೇಲೆ ಲ್ಯಾಂಡ್ ಆಗುವ ಸಂದರ್ಭವನ್ನು ನೋಡಲು ಪ್ರಧಾನ ಮಂತ್ರಿಗಳಾದ ಮೋದಿ ರವರು ಬೆಂಗಳೂರಿಗೆ ಆಗಮಿಸಿದ್ದರು, ಅವರು ಬೆಂಗಳೂರಿಗೆ ಕಾಲಿಟ್ಟಿದೆ ತಡ, ಇಸ್ರೋ ವಿಜ್ಞಾನಿಗಳಿಗೆ ಎಲ್ಲೊ ಒಂದು ಕಡೆ ಅಪಶಕುನ ಆಯ್ತೋ ಏನೋ ಗೊತ್ತಿಲ್ಲ. ಚಂದ್ರಯಾನ-2 ಸರಿಯಾಗಿ ಲ್ಯಾಂಡ್​ ಆಗಲಿಲ್ಲ ಎಂದು ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ಈ ಚಂದ್ರಯಾನ ಯೋಜನೆಗೆ ಅನುಮೋದನೆ ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಮತ್ತೊಮ್ಮೆ ಕುಟುಕಿದ್ದಾರೆ ಹಾಗೂ ನರೇಂದ್ರ ಮೋದಿ ರವರು ಈ ಕ್ರೆಡಿಟ್ ತೆಗೆದುಕೊಳ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ. ಈ ಮಾತುಗಳು ಹೊರಬೀಳುತ್ತಿದ್ದಂತೆ ದೇಶವೇ ಇಸ್ರೋ ಸಂಸ್ಥೆಯ ಪರವಾಗಿ ನಿಂತಿರುವ ಕಾರಣ ಕುಮಾರಸ್ವಾಮಿ ರವರನ್ನು ಜನರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Post Author: Ravi Yadav