ಬಿಗ್ ಬ್ರೇಕಿಂಗ್:ಮಹತ್ವದ ನಿರ್ಧಾರ ಘೋಷಣೆ ಮಾಡಿದ ಶ್ರೀ ರಾಮುಲು, ಅಧಿಕಾರದಲ್ಲಿ ಹೊಸ ಪರ್ವ ಆರಂಭಿಸಲು ಸಿದ್ದವಾಗಿ ಮಾಡಲು ಹೊರಟಿರುವುದು ಏನು ಗೊತ್ತಾ?

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಆರೋಗ್ಯ ಇಲಾಖೆ ಸಚಿವರಾಗಿ ಕೆಲಸ ನಿರ್ವಹಣೆ ಮಾಡಿದ್ದ ಶ್ರೀ ರಾಮುಲು ಅವರು 108 ಆಂಬುಲೆನ್ಸ್ ಸೇವೆಯನ್ನು ಆರಂಭಿಸಿ ಜನರ ಮನಗೆದ್ದಿದ್ದರು. ಮತ್ತೊಮ್ಮೆ ಅಧಿಕಾರಕ್ಕೆ ಏರಿದ ಕೆಲವೇ ಕೆಲವು ದಿನಗಳಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನದ ಬಲವಾದ ಆಕಾಂಕ್ಷಿಯಾಗಿದ್ದ ಶ್ರೀ ರಾಮುಲು ರವರು ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿಲ್ಲವಾದರೂ ಇದೀಗ ತಮ್ಮ ಕೆಲಸಗಳ ಮೂಲಕ ಮತ್ತೊಮ್ಮೆ ಜನರ ಮನಗೆಲ್ಲಲು ಸಿದ್ದರಾಗಿದ್ದಾರೆ. ಹೌದು, ಈ ಬಾರಿ ಸರ್ಕಾರಿ ಆಸ್ಪತ್ರೆಗಳ ಮೂಲ ಸೌಕರ್ಯಗಳ ಜೊತೆಗೆ, ಸರ್ಕಾರೀ ಆಸ್ಪತ್ರೆಗಳನ್ನು ಎಲ್ಲರೂ ಬಳಸುವಂತೆ ಬೇಕಾಗಿರುವ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಶ್ರೀ ರಾಮುಲು ರವರು, ಇತ್ತೀಚೆಗಷ್ಟೇ ಸರ್ಕಾರೀ ವೈದ್ಯರು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದರೇ, ಕೆಲಸದಿಂದ ತೆಗೆದು ಹಾಕುವುದಾಗಿ ಕಠಿಣ ಎಚ್ಚರಿಕೆ ಹೊರಡಿಸಿದ್ದರು, ಅಷ್ಟೇ ಅಲ್ಲದೆ, ಹೆರಿಗೆ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳು ನೀಡಲಾಗುತ್ತದೆ ಎಂದು ತಿಳಿಸಿದ್ದರು.

ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಶ್ರೀ ರಾಮುಲು ರವರು, ಸರ್ಕಾರೀ ಆಸ್ಪತ್ರೆಗಳನ್ನು ಹೈ ಟೆಕ್ ಆಗಿ ಬದಲಾಯಿಸಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಸಕಲ ಸೌಲಭ್ಯಗಳನ್ನು ತಾವೇ ಕುದ್ದು ಪರೀಕ್ಷೆ ನಡೆಸಲು ನಿರ್ಧಾರ ಮಾಡಿರುವ ಶ್ರೀ ರಾಮುಲು ರವರು, ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಗುಣಮಟ್ಟ ಹೆಚ್ವಳಕ್ಕೆ ಕ್ರಮ ಕೈಗೊಳ್ಳಾಗುತ್ತದೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಗ್ರಾಮ ವಾಸ್ತವ್ಯ ದಂತೆ ಆಸ್ಪತ್ರೆಯಲ್ಲಿ ತಂಗಿ ಎಲ್ಲಾ ಸೌಲಭ್ಯಗಳನ್ನು ಗಮನಿಸಲಾಗುವುದು, ಹಾಗೂ ಸ್ಥಳದಲ್ಲಿಯೇ ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇದೇ ವಿಷಯ ಮಾತನಾಡುವಾಗ ಇನ್ನಷ್ಟು ಮಾಹಿತಿ ತಿಳಿಸಿದ ಶ್ರೀ ರಾಮುಲು ರವರು, ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ. ನಮ್ಮ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ. ನೆರೆ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ‌ನೀಡುತ್ತಿದೆ. ಹೊಸ ಕಾಮಗಾರಿಗಳಿಗೆ ಹಣ ಬಿಡುಗಡೆಗೂ ಸಮಸ್ಯೆ ಇಲ್ಲ. ಎಲ್ಲಾ ಕಾಮಗಾರಿಗಳು‌ ನಡೆಯುತ್ತಿವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

Post Author: Ravi Yadav