ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಶರ್ಮಿಳಾ ರವರು ಮಾಡಿದ್ದಾದರು ಏನು ಗೊತ್ತಾ? ಈ ಒಳ್ಳೆಯ ಕೆಲಸದ ಬಗ್ಗೆ ತಿಳಿಯಲು ಒಮ್ಮೆ ಓದಿ,

ನಟಿ ಶರ್ಮಿಳಾ ಮಾಂಡ್ರೆ ಅಂದ ತಕ್ಷಣ ಇವರು ನಟಿಸಿರುವ ಬಹು ತಾರಗಣವಿರುವ ನವಗ್ರಹ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣ ಸಿನಿಮಾ ನೆನಪಾಗಬಹುದು. ಇನ್ನು ಈ ನಟಿ ಅಷ್ಟಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲವಾದರು ಈಕೆ ಕ್ಯಾನ್ಸರ್ ರೋಗಿಗಳಿಗೆ ಮಾಡಿರುವ ಈ ಕೆಲಸ ಎಲ್ಲರೂ ಮೆಚ್ಚುವಂತದ್ದಾಗಿದೆ. ನಟಿ ಶರ್ಮಿಳಾ ಮಾಂಡ್ರೆ ಅವರು ಕ್ಯಾನ್ಸರ್ ರೋಗಿಗಳಿಗೆ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು, ನಟಿ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ,ಅಷ್ಟೇ ಅಲ್ಲದೆ ಮನವಿಯೊಂದನ್ನು ಅಭಿಮಾನಿಗಳ ಮುಂದೆ ಇಟ್ಟಿದ್ದಾರೆ. ಕ್ಯಾನ್ಸರ್ ರೋಗ ಈಗೀಗ ಎಲ್ಲ ಕಡೆ ಸಾಮಾನ್ಯವಾಗಿ ಹೋಗಿದೆ, ಪ್ರತಿ ವರ್ಷ ಸುಮಾರು 11,57,294 ಜನರು ಕ್ಯಾನ್ಸರ್ ರೋಗಕ್ಕೆ ಗುರಿಯಾಗುತ್ತಿದ್ದಾರೆ. ಅದರಲ್ಲಿ ಸುಮಾರು 7,84,821 ಜನರು ಮರಣ ಹೊಂದುತ್ತಾರೆ. ಆದ್ದರಿಂದ ಕ್ಯಾನ್ಸರ್ ನ ತಡೆಗಟ್ಟಲು ಅನೇಕ ಕಾರ್ಯಕ್ರಮಗಳು ನಡೆಯುತ್ತದೆ.

ಹೀಗಾಗಿ ನಾನು ಕೇಳಿಕೊಳ್ಳುವುದು ಇಷ್ಟೇ ನಾವೇನೋ ಹಣ ಕಾಸಿನ ಸುರಕ್ಷತೆಗೆ ವಿಮೆಯನ್ನು ಮಾಡಿಸಿರುತ್ತೇವೆ. ಆದರೆ ಅನೇಕ ಜನರಿಗೆ ಔಷಧಿ ಕೊಳ್ಳಲು ದುಡ್ಡು ಇರುವುದಿಲ್ಲ. ಇನ್ನು ಅನೇಕ ಮಕ್ಕಳಿಗೆ ಓದಲು ಆಸಕ್ತಿ ಇದ್ದರೂ ಹಣಕಾಸಿನ ತೊಂದರೆಯಿಂದ ಓದಲಾಗುವುದಿಲ್ಲ, ಇನ್ನು ಅಂತಹ ಮಕ್ಕಳಿಗೆ ಓದುವುದಕ್ಕೆ ಪುಸ್ತಕಗಳನ್ನು ಕೊಟ್ಟರು ಸಾಕು ಹಾಗೂ ಇಂಥದ್ದೇ ಕೊಡಬೇಕೆಂದೇನಿಲ್ಲ ಹಣ ಕೊಡಲಾಗದಿದ್ದರು. ನಿಮಗೆ ಏನು ಸಾಧ್ಯವೋ ಅವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಕೊಟ್ಟರೆ ಅವರಿಗೂ ಸಹಾಯ ಆಗುತ್ತದೆ ಎಂದು ತಮ್ಮ ಮನವಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಅಷ್ಟೇ ಅಲ್ಲದೆ ನಿಮಗೆ ಯಾರಿಗಾದರೂ ಸಹಾಯ ಮಾಡಬೇಕೆನ್ನುವ ಮನ್ಸಸಿದ್ದು ಏನು ಮಾಡಬೇಕೆಂದು ತೋಚದಿದ್ದರೆ ನನ್ನನ್ನು ಕಾಂಟ್ಯಾಕ್ಟ್ ಮಾಡಿ ಎಂದು ಹೇಳಿದ್ದಾರೆ. ಇನ್ನು ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸವನ್ನು ಮಾಡುತ್ತಿಲ್ಲ ಇದು ನನ್ನ ಆತ್ಮ ತೃಪ್ತಿಗೆ ಎಂದು ಶರ್ಮಿಳಾ ಮಾಂಡ್ರೆ ಹೇಳಿಕೊಂಡಿದ್ದಾರೆ. ಇನ್ನು ನಟಿ ಶರ್ಮಿಳಾ ಮಾಂಡ್ರೆ ಯೋಗರಾಜ್ ಭಟ್ ಅವರ ಗಾಳಿಪಟ-2 ಸಿನಿಮಾದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Post Author: Ravi Yadav