ಇತರ ಸಂಸದರಿಗೆ ಮಾದರಿಯಾದ ಲಡಾಕ್ ಸಂಸದ, ಮತ್ತೊಮ್ಮೆ ಜನರ ಮನಗೆದ್ದಿದ್ದು ಹೇಗೆ ಗೊತ್ತಾ??

ಇತರ ಸಂಸದರಿಗೆ ಮಾದರಿಯಾದ ಲಡಾಕ್ ಸಂಸದ, ಮತ್ತೊಮ್ಮೆ ಜನರ ಮನಗೆದ್ದಿದ್ದು ಹೇಗೆ ಗೊತ್ತಾ??

ಕಳೆದ ಕೆಲವು ದಿನಗಳ ಹಿಂದೆ ಯಾರಿಗೂ ತಿಳಿಯದ ಸಂಸದರೊಬ್ಬರು ಇದ್ದಕ್ಕಿದ್ದ ಹಾಗೇ ಇಡೀ ವಿಶ್ವದಲ್ಲಿ ಬಾರಿ ಸದ್ದು ಮಾಡಿದ್ದರು. ಕೇವಲ ಕೆಲವೇ ಕೆಲವು ಘಂಟೆಗಳಲ್ಲಿ ಒಂದು ಭಾಷಣದಿಂದ ಇಡೀ ದೇಶದ ಗಮನ ಸೆಳೆದು, ಹಲವಾರು ಜನರ ಮನ ಗೆದ್ದು, ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದರು, ಅಂದಿನಿಂದ ಇವರು ಏನು ಮಾಡಿದರೂ ಬಹಳ ಸುದ್ದಿಯಾಗುತ್ತಿದೆ. ಆದರೆ ಕೇವಲ ಆಕ್ರೋಶದ ಮಾತುಗಳನ್ನು ಹಾಗೂ ವಿಶೇಷ ಸ್ಥಾನಮಾನ ರದ್ದತಿಯ ಸಂಭ್ರಮದ ಮಾತುಗಳನ್ನು ಈ ಮಾಧ್ಯಮಗಳು ಹೈ ಲೈಟ್ ಮಾಡಿ ತೋರಿಸಿ ಇವರ ಬಗ್ಗೆ ಪ್ರೋಗ್ರಾಮ್ ಗಳ ಪ್ರೋಗ್ರಾಮ್ ಗಳನ್ನೂ ಮಾಡಿ ಟಿ ರ್ ಪಿ ಗಳನ್ನೂ ಹೆಚ್ಚಿಸಿಕೊಂಡಿದ್ದರು .ಆದರೆ ಇದೀಗ ಮಾಧ್ಯಮಗಳು ಮತ್ತೊಂದು ಮಾದರಿ ಕೆಲಸವನ್ನು ಕುರಿತು ಸುದ್ದಿ ಪ್ರಸಾರ ಮಾಡುತ್ತಿಲ್ಲ ಯಾಕೆ ಎಂದು ನಂಗಂತೂ ತಿಳಿಯುತ್ತಿಲ್ಲ. ಸಂಪೂರ್ಣ ವಿವರಿಗಳಿಗಾಗಿ ಕೆಳಗಡೆ ಓದಿ, ಈ ವಿಷಯ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡಿ ಹಂಚಿಕೊಳ್ಳಿ, ಮತ್ತಷ್ಟು ಸುದ್ದಿಗಳಿಗಾಗಿ ಕರುನಾಡ ವಾಣಿ ಲೈಕ್ ಮಾಡಿ ಫಾಲೋ ಮಾಡಿ.

ಇದೀಗ ಇದೇ ಭಾರತದ ಬಹುತೇಕ ಪ್ರದೇಶಗಳಲ್ಲೂ ಪ್ರವಾಹ ಹೆಚ್ಚಾಗಿದೆ. ವರುಣ ದೇವಾ ಎಲ್ಲರ ಮೇಲೆ ಕೆಂಗಣ್ಣು ಬೀರಿದ್ದು, ದೇಶದ ಬಹುತೇಕ ರಾಜ್ಯಗಳು ಪ್ರವಾಹಕ್ಕೆ ನಲುಗಿ ಹೋಗಿವೆ. ಹೀಗಿರುವಾಗ ಇದಕ್ಕಿದ್ದ ಹಾಗೇ ಮಳೆ ನೀರು ಹೆಚ್ಚಾಗಿ ಹರಿದು ಬಂದ ಕಾರಣ, ಲಡಾಖ್ ಅಣೆಕಟ್ಟಿನ ಮೂರು ಸ್ಪಿಲ್‌ವೇಗಳನ್ನು ತೆರೆದಿದ್ದು, ಇದು ಸಟ್ಲೆಜ್ ನದಿಯಲ್ಲಿ ಪ್ರವಾಹ ವನ್ನು ಸೃಷ್ಟಿಸಿದೆ. ನೀರಿನ ಮಟ್ಟವು ಪ್ರಸ್ತುತ 14.5 ಅಡಿಗಳಲ್ಲಿದೆ ಮತ್ತು 150,000 ರಿಂದ 200,000 ಕ್ಯೂಸೆಕ್ ನೀರು ನದಿಗೆ ಪ್ರವೇಶಿಸಬಹುದೆಂಬ ಆತಂಕವಿದೆ. ಬಹುತೇಕ ಸಿಂಧೂ ನದಿ ಸೇರಿದಂತೆ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿವೆ, ಈಗಾಗಲೇ ಹಲವಾರು ಪ್ರದೇಶಗಳು ಪ್ರವಾಹದಲ್ಲಿ ಮುಳುಗಿವೆ. ಹೀಗಿರುವಾಗ ಲಡಾಕ್ ಕ್ಷೇತ್ರದ ಜನರಲ್ಲಿ ಇನ್ನಿಲ್ಲದ ಆತಂಕ ಮನೆ ಮಾಡಿತ್ತು.

ಸರ್ಕಾರ ಹೇಗಿದ್ದರೂ ಗಂಜಿ ಕೇಂದ್ರ ಸೇರಿದಂತೆ ಹಲವಾರು ಯೋಜನೆಗಳ ಮೂಲಕ ಹಣ ನೀಡಲಿದೆ, ಆದರೆ ಹಣ ನೀಡಿದರೆ ಸಾಲದು ವ್ಯವಸ್ಥೆಗಳು ಹೇಗಿವೆ, ಹಣ ಹೇಗೆ ಖರ್ಚಾಗುತ್ತಿದೆ, ಆಹಾರದ ಗುಣಮಟ್ಟ ಹೇಗಿದೆ, ಎಲ್ಲಾ ವಸ್ತುಗಳು ಸರಿಯಾದ ಸಮಯಕ್ಕೆ ತಲುಪುತ್ತವೆಯೇ? ಎಂಬ ಆತಂಕ ಲಡಾಕ್ ಕ್ಷೇತ್ರದ ಜನರಲ್ಲಿ ಮನೆ ಮಾಡಿತ್ತು.ಆದರೆ ಇದೀಗ ಯಾರೊಬ್ಬರೂ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲವಂತೆ ನಡೆದುಕೊಂಡಿದ್ದಾರೆ ಈ ಯುವ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್.ಹೌದು, ಮೊದಲಿಂದಲೂ ಲಡಾಕ್ ಕ್ಷೇತ್ರ ಎಲ್ಲದರಲ್ಲೂ ಹಿಂದೆ ಉಳಿದಿದೆ, ಇಲ್ಲಿ ಏನು ಮಾಡಿದರೂ ಸರ್ಕಾರ ಕ್ಯಾರೇ ಎನ್ನುವುದಿಲ್ಲ ಕೇವಲ ಹಣ ಬಿಡುಗಡೆ ಮಾಡಿ ಸುಮ್ಮನಾಗುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಈ ಬಾರಿ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ರವರು ನೇರವಾಗಿ ಹಗಲು ರಾತ್ರಿ ಎನ್ನದೇ ಯಾವುದೇ ಗಂಜಿ ಕ್ಷೇತ್ರಗಳನ್ನೂ ಬಿಡದೇ, ಗಂಜಿ ಕೇಂದ್ರ ತಲುಪಲು ಕಿರಿದಾದ ಹಾಗೂ ಅಪಾಯಕಾರಿಯಾದ ದಾರಿಗಳಿದ್ದರೂ ಛಲ ಬಿಡದೇ ಪ್ರತಿ ದಿನವೂ ಎಲ್ಲಾ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ, ಜನರ ಅಹವಾಲುಗಳನ್ನು ಸ್ವೀಕರಿಸಿ, ದಿನಕ್ಕೊಂದು ಗಂಜಿ ಕೇಂದ್ರದಲ್ಲಿ ರಾತ್ರಿಯ ವೇಳೆ ಯಾವುದೇ ಹೆಚ್ಚಿನ ಸೌಕರ್ಯವಿಲ್ಲದೆ, ಸಾಮಾನ್ಯ ಜನರಿಗೆ ನೀಡಿದ ಸೌಕರ್ಯಗಳನ್ನು ಬಳಸಿಕೊಂಡು ಅಲ್ಲೇ ರಾತ್ರಿ ಕಳೆದು ಮತ್ತೆ ಬೆಳಗ್ಗೆ ಎದ್ದು ಎಲ್ಲಾ ಕೇಂದ್ರಗಳಿಗೂ ಭೇಟಿ ನೀಡಿ, ಮತ್ತೊಂದು ಕೇಂದ್ರದಲ್ಲಿ ಮತ್ತೊಂದು ರಾತ್ರಿ ಕಳೆಯುತ್ತಾ ಲಡಾಕ್ ಜನರ ಜೊತೆ ನಾನಿದ್ದೇನೆ ಎಂಬುದನ್ನೇ ಸಾಬೀತು ಮಾಡಿ, ಜನರಲ್ಲಿ ಹೊಸ ಆಶಾಭಾವನೆ ಮೂಡಿಸುತ್ತಿದ್ದಾರೆ.ಪ್ರತಿಯೊಂದು ಕೇಂದ್ರಗಳಲ್ಲೂ ತಾವೇ ವಾಸ್ತವ್ಯ ಮಾಡಿ ಗುಣಮಟ್ಟ ಪರೀಕ್ಷೆಯ ಜೊತೆಗೆ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಯಾವೊಂದು ಮಾಧ್ಯಮಗಳು ಇದರ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತಿಲ್ಲ. ಟಿ ರ್ ಪಿ ಗಾಗಿ ಇವರನ್ನು ಕೆಲವೇ ಕೆಲವು ದಿನಗಳ ಹಿಂದೆ ಬಳಸಿಕೊಂಡ ಮಾಧ್ಯಮಗಳು ಈಗ ಬೇರೆ ಟಿ ರ್ ಪಿ ವಿಷಯಕ್ಕಾಗಿ ಹುಡುಕಾಟ ನಡೆಸುತ್ತಿವೆ.