ಜಗಳ ತಾರಕಕ್ಕೆ ಏರಿದ ನಂತರ ಮತ್ತೊಮ್ಮೆ ಅಚ್ಚರಿಯ ಯು ಟರ್ನ್ ತೆಗೆದುಕೊಂಡ ದೇವೇಗೌಡರು

ಜಗಳ ತಾರಕಕ್ಕೆ ಏರಿದ ನಂತರ ಮತ್ತೊಮ್ಮೆ ಅಚ್ಚರಿಯ ಯು ಟರ್ನ್ ತೆಗೆದುಕೊಂಡ ದೇವೇಗೌಡರು

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ೧೪ ತಿಂಗಳು ಗಳ ಕಾಲ ಅಧಿಕಾರ ನಡೆಸಿ, ಬಹುಮತ ಕಳೆದುಕೊಂಡ ನಂತರ ಇದೀಗ ಕೆಲವು ದಿನಗಳಿಂದ ಕಚ್ಚಾಟಕ್ಕೆ ಇಳಿದಿವೆ. ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹಿರಿಯ ನಾಯಕರ ಕಾಳಗ ತಾರಕಕ್ಕೆ ಏರಿದೆ. ನೇರವಾಗಿ ಒಬ್ಬರ ಮೇಲೆ ಒಬ್ಬರು ತಪ್ಪು ಗಳನ್ನೂ ಹೊರೆಸಿ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದ ನಾಯಕರು ದೋಸ್ತಿ ಕಥಮ್ ಎಂಬ ಸಂದೇಶವನ್ನು ಸ್ಪಷ್ಟವಾಗಿ ಜನರ ಮುಂದೆ ಸಾರಿದ್ದರು. ಅದರಲ್ಲಿಯೂ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅಕ್ಷರಸಹ ಬದ್ದ ವೈರಿಗಳಂತೆ ಕಾಡದಿದ್ದರು, ಇದನೆಲ್ಲ ಕಂಡ ಜನ ಮೈತ್ರಿ ಸರ್ಕಾರ ಉರುಳಲು ಬಿಜೆಪಿ ಪಕ್ಷದ ಆಪರೇಷನ್ ಕಮಲ ಎಂಬ ಹಣದ ಆಮಿಷವೊಡ್ಡುವ ನೀತಿ ಕಾರಣ ಎಂದು ಬೊಬ್ಬೆ ಹೊಡೆಯುತ್ತಿದ್ದ ನಾಯಕರ ನೈಜ ಮುಖ ಕಂಡು ಬೆರಗಾಗಿದ್ದರು ಹಾಗೂ ಇದರಲ್ಲಿ ಬಿಜೆಪಿ ಪಕ್ಷದ ಯಾವುದೇ ಕೈವಾಡವಿಲ್ಲ ಎಂಬುದಕ್ಕೆ ಈ ನಾಯಕರೇ ಸಾಕ್ಷಿ ಕೊಡುತ್ತಿದ್ದಾರೆ ಎಂದು ಎಲ್ಲೆಡೆ ಅಭಿಪ್ರಾಯಗಳನ್ನು ಹೊರಹಾಕಿದ್ದರು.

ಇಷ್ಟೆಲ್ಲ ವಿದ್ಯಮಾನಗಳ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಮುರಿದುಬಿತ್ತು ಎಂದು ಜನ ನಂಬಿದ್ದರು ಹಾಗೂ ಇದನ್ನು ಎರಡು ಪಕ್ಷದ ಹಲವಾರು ನಾಯಕರು ಬಹಿರಂಗ ಪಡಿಸಿದ್ದರು. ಆದರೆ ಇದೀಗ ದೇವೇಗೌಡರು ಹೊಸ ದಾಳ ಉರುಳಿಸಿ ಯು ಟರ್ನ್ ಹೊಡೆದಿದ್ದಾರೆ. ಹೌದು, ಇದೀಗ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಲು ಸಿದ್ಧರಿರುವುದಾಗಿ ಘೋಷಣೆ ಮಾಡಿದ್ದಾರೆ, ನಾನು ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ನಾಯಕರು ಕರೆದರೂ ದೆಹಲಿಗೆ ಹೊಂದಿಲ್ಲ, ಒಂದು ವೇಳೆ ಸೋನಿಯಾ ಗಾಂಧಿ ರವರು ಎಲ್ಲಾ ಪ್ರಾದೇಶಿಕ ಪಕ್ಷಗಳ ಉಳಿವಿಗೆ ಭರವಸೆ ನೀಡಿದಂತೆ ನಡೆಯಲು, ರಾಷ್ಟ್ರದ ಎಲ್ಲಾ ಜಾತ್ಯಾತೀತ ಶಕ್ತಿಗಳು, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ ಪಟ್ಟರೆ ಜೆಡಿಎಸ್ ಪಕ್ಷ ಸಾಥ್ ನೀಡಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಇನ್ನು ಇದೆ ಸಮಯದಲ್ಲಿ ರಾಹುಲ್ ಗಾಂಧಿ ರವರು ನನ್ನನ್ನು ಕಾಶ್ಮೀರಕ್ಕೆ ಕರೆದರೂ ಆದರೆ ನಾನು ಪಕ್ಷ ಸಂಘಟನೆಯಲ್ಲಿ ನಿರತನಾಗಿದ್ದ ಕಾರಣ ತೆರಳಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.