ಬಹ್ರೇನ್‌ನಲ್ಲಿ ಶುರು ಶ್ರೀ ಕೃಷ್ಣನ ಹವಾ, ರಾರಾಜಿಸಲಿದ್ದಾನೆ ಕೃಷ್ಣ, ಮೋದಿ ಭೇಟಿಗಾಗಿ ಕಾದು ಕುಳಿತಿತ್ತು ವಿಶೇಷ ದೇವಾ ಕಾರ್ಯ

ಬಹ್ರೇನ್‌ನಲ್ಲಿ ಶುರು ಶ್ರೀ ಕೃಷ್ಣನ ಹವಾ, ರಾರಾಜಿಸಲಿದ್ದಾನೆ ಕೃಷ್ಣ, ಮೋದಿ ಭೇಟಿಗಾಗಿ ಕಾದು ಕುಳಿತಿತ್ತು ವಿಶೇಷ ದೇವಾ ಕಾರ್ಯ

ನೀವು ಯಾವ ಪಕ್ಷದ ಅನುಯಾಯಿಗಳೇ ಹಾಗಿರಿ, ಮೋದಿ ರವರನ್ನು ಎಷ್ಟೇ ವಿರೋಧ ಮಾಡಿ, ಆದರೆ ನರೇಂದ್ರ ಮೋದಿ ರವರು ದೇಶವನ್ನು ಹಾಗೂ ಭಾರತ ದೇಶದ ಪುರಾತನ ಸಂಸ್ಕೃತಿಯನ್ನು ಅಂತರಾಷ್ತ್ರೀಯ ಮಟ್ಟದಲ್ಲಿ ಮೆರೆಯುವಂತೆ ಮಾಡುತ್ತಿದ್ದಾರೆ ಎಂದರೆ ನೀವು ವಿರೋಧ ಮಾಡದೆ ಒಪ್ಪಿಕೊಳ್ಳಲೇಬೇಕು, ಈ ಹಿಂದೆಯೂ ಹಲವಾರು ದೇಶಗಳಲ್ಲಿ ಭಾರತ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದ ನರೇಂದ್ರ ಮೋದಿ ರವರು ಹಲವಾರು ಮುಸ್ಲಿಂ ದೇಶಗಳಲ್ಲಿ ಸಹ ದೇವಾಲಯ ನಿರ್ಮಿಸುವಂತೆ ಮಾಡಿದ್ದರು. ಭಾರತದ ಸಂಸ್ಕೃತಿಯ ಮೇಲೆ ಹಾಗೂ ಹಿಂದೂ ಧರ್ಮದ ಪುರಾತನ ಸಾಂಪ್ರದಾಯದ ಮೇಲೆ ಅಪಾರ ಆಸಕ್ತಿಯನ್ನು ಹೊಂದಿರುವ ನರೇಂದ್ರ ಮೋದಿ ರವರು ಇದೀಗ ಮತ್ತೊಂದು ಮುಸ್ಲಿಂ ರಾಷ್ಟ್ರದಲ್ಲಿ ಶ್ರೀ ಕೃಷ್ಣ ರಾರಾಜಿಸುವಂತೆ ಮಾಡಿದ್ದಾರೆ.

ಹೌದು, ಬಹ್ರೈನ್ ಪ್ರವಾಸದಲ್ಲಿ ಇರುವ ನರೇಂದ್ರ ಮೋದಿ ರವರು ಮನಾಮದಲ್ಲಿ ಇರುವ ಶ್ರೀನಾಥ ನ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು, ಸುಮಾರು ೨೦೦ ವರ್ಷಗಳ ಹಳೆಯ ದೇವಸ್ಥಾನಕ್ಕೆ ಭೇಟಿ ನೀಡಿದ ಮೋದಿ ರವರು ೪.೨ ಮಿಲಿಯನ್ ಡಾಲರ್ ವೆಚ್ಚದಲ್ಲಿ ಮರು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ, ಹಾಗೂ ಇದರ ಸಂಪೂರ್ಣ ವೆಚ್ಚವನ್ನು ಅಲ್ಲಿನ ಸರ್ಕಾರ ಭಾರತದ ಜೊತೆ ಸ್ನೇಹ ಸಂಬಂಧವನ್ನು ಬಲಗೊಳಿಸುವ ಉದ್ದೇಶದಿಂದ ಭರಿಸಲಿದೆ. ೧೬,೫೦೦ ಚದರ ಅಡಿ ಜಾಗದಲ್ಲಿ ನಾಲ್ಕು ಮಹಡಿಯ ಕಟ್ಟಡ ೪೫ ಸಾವಿರ ಚಾದರಡಿ ೩೦ ಮೀಟರ್ ಎತ್ತರ ಹೊಂದಿರುವಂತೆ ಪ್ಲಾನ್ ಸಿದ್ದಪಡಿಸಲಾಗಿದೆ. ಅಷ್ಟೇ ಅಲ್ಲದೆ ಮರು ಅಭಿವೃದ್ಧಿ ಮಾಡುವಾಗ ಭಾರತದ ಪರಂಪರೆಯನ್ನು ಬಿಂಬಿಸುವಂತೆ ನಿರ್ಮಾಣ ಮಾಡಲಾಗುತ್ತದೆ.