ವಿಶ್ವ ಮಟ್ಟದಲ್ಲಿ ಟ್ರಂಪ್ ರವರಿಗೆ ಬಾರಿ ಮುಖಭಂಗ ! ಮೋದಿ ವಿರುದ್ಧ ವಿವಾದ ಸೃಷ್ಟಿಸಿದ್ದ ಹೇಳಿಕೆಯ ಅಸಲಿ ಕಥೆ ಹೊರಹಾಕಿದ ಅಮೆರಿಕದ ಅಧಿಕಾರಿಗಳು !

ವಿಶ್ವ ಮಟ್ಟದಲ್ಲಿ ಟ್ರಂಪ್ ರವರಿಗೆ ಬಾರಿ ಮುಖಭಂಗ ! ಮೋದಿ ವಿರುದ್ಧ ವಿವಾದ ಸೃಷ್ಟಿಸಿದ್ದ ಹೇಳಿಕೆಯ ಅಸಲಿ ಕಥೆ ಹೊರಹಾಕಿದ ಅಮೆರಿಕದ ಅಧಿಕಾರಿಗಳು !

ಅಮೆರಿಕ ದೇಶದ ಅಧ್ಯಕ್ಷರಾಗಿರುವ ಟ್ರಂಪ್ ರವರು ತಮ್ಮ ಘನತೆಗೆ ತಕ್ಕಂತೆ ವರ್ತಿಸುತ್ತಿಲ್ಲ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದುಕೊಂಡಿರುವ ಅಮೆರಿಕ ದೇಶದ ಅಧ್ಯಕ್ಷ ಎಂದರೆ ಇತರ ದೇಶಗಳು ಒಂದು ಗೌರವದಿಂದ ಕಾಣುತ್ತವೆ. ಆದರೆ ಟ್ರಂಪ್ ರವರು ತಮ್ಮ ಅಧ್ಯಕ್ಷಗಿರಿಯ ಘನತೆ ಗೌರವವನ್ನು ಎತ್ತಿ ಹಿಡಿಯುವುದರಲ್ಲಿ ವಿಫಲವಾಗಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಇತ್ತೀಚೆಗೆ ಮನಬಂದಂತೆ ಹೇಳಿಕೆಗಳನ್ನು ನೀಡುವ ಟ್ರಂಪ್ ರವರು ಇದೀಗ ವಿಶ್ವಮಟ್ಟದಲ್ಲಿ ಮತ್ತೊಮ್ಮೆ ಭಾರಿ ಮುಖಭಂಗ ಅನುಭವಿಸಿದ್ದಾರೆ. ನರೇಂದ್ರ ಮೋದಿರವರ ವಿರುದ್ಧ ಪ್ರತಿಪಕ್ಷಗಳಿಗೆ ಟೀಕೆಗಳ ಬಾಣಗಳನ್ನು ಸುರಿಸಲು ಅವಕಾಶ ನೀಡಿದ ಟ್ರಂಪ್ ರವರ ಹೇಳಿಕೆಯ ಅಸಲಿ ಸತ್ಯ ಇದೀಗ ಅಮೆರಿಕ ದೇಶದ ಅಧಿಕಾರಿಗಳು ಹೊರಹಾಕಿದ್ದಾರೆ. ಇದೇ ವಿಷಯವನ್ನು ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿ ನರೇಂದ್ರ ಮೋದಿ ರವರ ಮೇಲೆ ಟೀಕೆಗಳ ಬಾಣಗಳನ್ನು ಸುರಿಸಿತ್ತು.

ಅದುವೇ ಕಾಶ್ಮೀರದ ವಿಚಾರ, ಹೌದು ಇತ್ತೀಚಿಗೆ ಟ್ರಂಪ್ ರವರು ನಾನು ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಹಾಗೂ ಭಾರತದ ನಡುವೆ ಮಧ್ಯಸ್ಥಿಕೆ ನಡೆಸಲು ಸಿದ್ಧವಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಅಷ್ಟು ಸಾಲದು ಎಂಬಂತೆ ನರೇಂದ್ರ ಮೋದಿ ಕುರಿತು ನನ್ನಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ನರೇಂದ್ರ ಮೋದಿ ರವರು ಟ್ರಂಪ್ ರವರಿಗೆ ತಕ್ಕ ಉತ್ತರವನ್ನು ಸಹ ನೀಡಿ, ಮಧ್ಯಸ್ಥಿಕೆಯ ಮಾತೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಅಷ್ಟೇ ಅಲ್ಲದೇ ವಿಶ್ವದ ಹಲವಾರು ನಾಯಕರು ಸಹ ನರೇಂದ್ರ ಮೋದಿ ರವರು ಈ ರೀತಿ ಮೂರನೇ ರಾಷ್ಟ್ರವನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಳ್ಳಲು ಸಾಧ್ಯವೇ ಇಲ್ಲ ಎಂದು ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತಿದ್ದರು. ಇದೀಗ ಇದೇ ಸತ್ಯವನ್ನು ಅಮೆರಿಕ ದೇಶದ ಸಂಸತ್ತಿನ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಬಹಿರಂಗ ಪಡಿಸಿದ್ದು ನರೇಂದ್ರ ಮೋದಿ ರವರು ಯಾವುದೇ ಮನವಿ ಮಾಡಿಲ್ಲ ಇದು ಕೇವಲ ಟ್ರಂಪ್ ರವರ ಅನಿಸಿಕೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಆದ ಕಾರಣ ಈ ಸುದ್ದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಸದ್ದು ಮಾಡಿದೆ ಹಾಗೂ ಟ್ರಂಪ್ ರವರಿಗೆ ಭಾರಿ ಮುಜುಗರ ಉಂಟಾಗಿದೆ.