ಪ್ರಮಾಣವಚನ ಸ್ವೀಕಾರದ ನಂತರ ಮಾಧುಸ್ವಾಮಿ ನೆನಪು ಮಾಡಿಕೊಂಡಿದ್ದು ಯಾರನ್ನು ಗೊತ್ತಾ?? ಹಾಗೂ ಇವರ ಮುಂದಿನ ಗುರಿ ಏನು ಗೊತ್ತಾ??

ಪ್ರಮಾಣವಚನ ಸ್ವೀಕಾರದ ನಂತರ ಮಾಧುಸ್ವಾಮಿ ನೆನಪು ಮಾಡಿಕೊಂಡಿದ್ದು ಯಾರನ್ನು ಗೊತ್ತಾ?? ಹಾಗೂ ಇವರ ಮುಂದಿನ ಗುರಿ ಏನು ಗೊತ್ತಾ??

ಅತ್ಯುತ್ತಮ ಸಂಸದೀಯ ಪಟು ಜೆ ಸಿ ಮಾಧುಸ್ವಾಮಿ ರವರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಪ್ರಮಾಣವಚನ ಸ್ವೀಕಾರದ ವೇಳೆಯಲ್ಲಿ ಬಾಯಿತಪ್ಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಹೇಳಿ ನಸು ನಕ್ಕಿದ್ದರು. ತದನಂತರ ಇವರು ಮಾಡಿದ ಒಂದು ಚಿಕ್ಕ ತಪ್ಪನ್ನು ಎಲ್ಲ ಮಾಧ್ಯಮದವರು ತೋರಿಸಿದ್ದಾರೆ, ಆದರೆ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿ ಜೆಸಿ ಮಾಧುಸ್ವಾಮಿ ರವರು ನೆನಪು ಮಾಡಿಕೊಂಡಿದ್ದು ಯಾರನ್ನು ಗೊತ್ತಾ? ಅಷ್ಟೇ ಅಲ್ಲದೆ ಇವರ ಮುಂದಿನ ಗುರಿಯನ್ನು ಸಹ ಬಹಿರಂಗಪಡಿಸಿದ್ದಾರೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ಮಾಧುಸ್ವಾಮಿ ರವರು ನಾನು ಶಿವಕುಮಾರ ಸ್ವಾಮೀಜಿ ರವರ ಆಶೀರ್ವಾದದಿಂದ ಬೆಳೆದವನು, ಇಂದು ಶ್ರೀಗಳು ಇಲ್ಲದಿರುವುದು ಬಹಳ ಕಾಡುತ್ತಿದೆ‌ ಎಂದು ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದುಕೊಂಡಿದ್ದ ಸಿದ್ಧಗಂಗಾ ಶ್ರೀಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತುಮಕೂರು ಜಿಲ್ಲೆಯ ಜನರ ಕೂಗಾದ ಹೇಮಾವತಿ ನೀರನ್ನು ಸಮರ್ಪಕವಾಗಿ ಇಡೀ ತುಮಕೂರು ಜಿಲ್ಲೆಗೆ ಹರಿಸುವ ಕನಸು ಹೊಂದಿರುವ ಮಾಧುಸ್ವಾಮಿ ರವರು ಎತ್ತಿನಹೊಳೆ ಯೋಜನೆಯನ್ನು ಸಹ ತುಮಕೂರಿಗೆ ಸಮರ್ಪಕವಾಗಿ ಬಳಕೆಯಾಗುವಂತೆ ಉಪಯೋಗಿಸಿಕೊಳ್ಳುತ್ತೇವೆ ಎಂದರು. ಲೋಕಸಭಾ ಚುನಾವಣೆಯ ವೇಳೆಯಲ್ಲಿ ನೀರಾವರಿ ಬಗ್ಗೆ ಆಶ್ವಾಸನೆ ನೀಡಿದ್ದೇವೆ ಭರವಸೆ ಈಡೇರಿಸಲು ಹೆಚ್ಚಿನ ಆಸಕ್ತಿ ವಹಿಸುವುದಾಗಿ ಹೇಳಿಕೊಂಡಿದ್ದಾರೆ.