ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗ:ಚೀನಾಕ್ಕೆ ಕಾಂಗ್ರೆಸ್ ಆಡಳಿತ ವರವಾಗಿದ್ದು ಹೇಗೆ ಗೊತ್ತಾ?? ಕಾಂಗ್ರೆಸ್ನ ಮತ್ತೊಂದು ಕರಾಳ ಮುಖ ಬಹಿರಂಗಪಡಿಸಿದ ಯುವನಾಯಕ

ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗ:ಚೀನಾಕ್ಕೆ ಕಾಂಗ್ರೆಸ್ ಆಡಳಿತ ವರವಾಗಿದ್ದು ಹೇಗೆ ಗೊತ್ತಾ?? ಕಾಂಗ್ರೆಸ್ನ ಮತ್ತೊಂದು ಕರಾಳ ಮುಖ ಬಹಿರಂಗಪಡಿಸಿದ ಯುವನಾಯಕ

ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಮಾಡಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಧ್ವನಿ ಎತ್ತಿ ಯಾವುದೇ ಕಾರಣಕ್ಕೂ ವಿಶೇಷ ಸ್ಥಾನಮಾನವನ್ನು ವಾಪಸ್ಸು ಪಡೆದುಕೊಳ್ಳಬಾರದು ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ ಅದೇ ಪ್ರದೇಶದ ಯುವ ಸಂಸದರಾಗಿರುವ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ರವರು ಕೇಂದ್ರ ಸರ್ಕಾರದ ನಡೆಯನ್ನು ಬೆಂಬಲಿಸಿ ಸಂಸತ್ತಿನಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ ಕಾಂಗ್ರೆಸ್ ಪಕ್ಷದ ಬೆವರಿಳಿಸಿ ನೈಜ ಸತ್ಯವನ್ನು ಹೊರಗೆ ಹಾಕಿ, ತಾನು ಅಲ್ಲಿನ ಸಂಸದ ಅಲ್ಲಿನ ಪರಿಸ್ಥಿತಿ ಹೇಗಿರುತ್ತದೆ ಎಂದು ನನಗೆ ತಿಳಿದಿದೆ ಎಂದು ಸ್ಪಷ್ಟವಾಗಿ ವಿವರಿಸಿ ಈ ನಡೆಯನ್ನು ಬೆಂಬಲಿಸಿದ್ದರು. ಈ ಭಾಷಣ ದೇಶದಲ್ಲೆಡೆ ಒಂದು ಹೊಸ ತಲ್ಲಣವನ್ನು ಸೃಷ್ಟಿಸಿತ್ತು.

ಇದೀಗ ಇದೇ ಯುವ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಕಾಂಗ್ರೆಸ್ ಪಕ್ಷದ ಮತ್ತೊಂದು ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿರುವ ಯುವ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್,  ಈ ಬಾರಿ ನಮ್ಮ ಶತ್ರು ರಾಷ್ಟ್ರವಾದ ಚೀನಾ ದೇಶಕ್ಕೆ ಕಾಂಗ್ರೆಸ್ ಪಕ್ಷದ ಆಡಳಿತ ಕಾರ್ಯವೈಖರಿ ಹೇಗೆ ಸಹಾಯ ಮಾಡಿತು ಹಾಗೂ ಯಾವ ವಿಷಯದಲ್ಲಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ ತನ್ನ ಪ್ರದೇಶದ ಸಮಸ್ಯೆಗಳು ಹೇಗೆ ಹುಟ್ಟಿಕೊಂಡವು ಅದಕ್ಕೆ ಕಾಂಗ್ರೆಸ್ ಪಕ್ಷ ಹೇಗೆ ನೇರವಾಗಿ ಕಾರಣ ಎಂಬುದನ್ನು ಸ್ಪಷ್ಟಪಡಿಸಿ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಲಡಾಕ್ ಪ್ರದೇಶದಲ್ಲಿ ಚೀನಾ ದೇಶ ಹಸ್ತಕ್ಷೇಪ ಮಾಡಲು ಕಾಂಗ್ರೆಸ್ ಪಕ್ಷವೇ ಕಾರಣ. ಮೊದಲಿನಿಂದಲೂ ಲಡಾಕ್ ಪ್ರದೇಶವನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸುತ್ತಾ ಬಂದಿತ್ತು, ಇದೇ ವಿಷಯವನ್ನು ಚೆನ್ನಾಗಿ ಅರಿತುಕೊಂಡ ಚೀನಾ ದೇಶ ತನ್ನ ವಲಯದ ವ್ಯಾಪ್ತಿಯನ್ನು ವಿಸ್ತರಿಸಿತ್ತು. ಈ ಸಮಯದಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷ ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ, ಈ ಮೃದುಧೋರಣೆ ಕಾರಣದಿಂದ ಕಾಶ್ಮೀರ ನಾಶವಾಗಿ ಹೋಯಿತು ಮತ್ತು ಲಡಾಕ್ ಹಾನಿಯನ್ನು ಕಂಡಿತು ಎಂದಿದ್ದಾರೆ. ಜವಾಹರ್ಲಾಲ್ ನೆಹರು ರಚಿಸಿದ ಫಾರ್ವರ್ಡ್ ಪಾಲಿಸಿ ಯೋಜನೆಯ ಅಡಿಯಲ್ಲಿ ಭಾರತ, ಚೀನಾ ದೇಶದ ಕಡೆಗೆ ಇಂಚಿಂಚಾಗಿ ಹಂತಹಂತವಾಗಿ ಬೆಳೆಯಬೇಕಿತ್ತು, ಆದರೆ ಕಾಂಗ್ರೆಸ್ ಪಕ್ಷ ಅದನ್ನು ಜಾರಿಗೆ ತರುವ ಹೊತ್ತಿಗೆ ಚೀನಾ ಸೇನಾಪಡೆ ಭಾರತದ ಪ್ರಾಂತ್ಯದೊಳಗೆ ನುಗ್ಗಿ ನಮ್ಮನ್ನು ಹಿಮ್ಮೆಟ್ಟಿಸಿತು.

ಇದೇ ಕಾರಣದಿಂದ ಇಂದು ಚೀನಾ ದೇಶ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದೆ, ಪೀಪಲ್ಸ್ ಲಿಬರೇಶನ್ ಸೇನಾ ಯೋಧರು ಲಡಾಕ್ ಪ್ರದೇಶಗಳಿಗೆ ನುಗ್ಗಿದ್ದಾರೆ. ಯಾಕೆಂದರೆ ಲಡಾಕ್ ಗೆ ಕಳೆದ 55 ವರ್ಷಗಳ ರಕ್ಷಣಾ ನೀತಿಯಲ್ಲಿ ಪ್ರಾಮುಖ್ಯತೆ ಸಿಗಲಿಲ್ಲ, ಅಷ್ಟೇ ಅಲ್ಲದೇ ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ವಿಶ್ವಸಂಸ್ಥೆಯನ್ನು ಸಂಪರ್ಕ ಮಾಡಿದ್ದು ದೊಡ್ಡ ತಪ್ಪು, ಕಾಶ್ಮೀರ ವಿಚಾರದಲ್ಲಿ ಏನೇ ತೊಂದರೆಯಾದರೂ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ವಿಶೇಷ ಪ್ಯಾಕೇಜ್ ಪ್ರಕಟಣೆ ಮಾಡಿ ಸುಮ್ಮನಾಗುತ್ತಿತ್ತು. ಇದರಿಂದ ಪ್ರತ್ಯೇಕವಾದಿಗಳು ತಮ್ಮ ಇಷ್ಟದ ಪ್ರಕಾರ ನಡೆದುಕೊಳ್ಳಲು ಹಾಗೂ ಕಲ್ಲುತೂರಾಟ ಗಾರರು ಎಗ್ಗಿಲ್ಲದೆ ನಡೆದುಕೊಳ್ಳುತ್ತಿದ್ದರು. 55 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಮ್ಮು ಕಾಶ್ಮೀರ ಮತ್ತು ಲಡಾಕ್ ಪ್ರದೇಶದ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಬಿಡುಗಡೆಯಾದ ಹಣವೂ ಸಹ ಬೇರೆಯ ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿ ಕರಾಳ ಮುಖವನ್ನು ಹೊರಹಾಕಿದ್ದಾರೆ.