ಇದು ಅಮಿತ್ ಆಟದ ಸಮಯ : ಬಿಎಸ್ವೈಗೆ ಮತ್ತೊಂದು ಖಡಕ್ ಆದೇಶ ಹೊರಡಿಸಿದ ಅಮಿತ್ ಶಾ,ಬೆಚ್ಚಿಬಿದ್ದ ದೊಡ್ಡ ದೊಡ್ಡ ನಾಯಕರು

ಈಗಾಗಲೇ ಕಳೆದ ಬಾರಿಯ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹಲವಾರು ಪ್ರಕರಣಗಳ ತನಿಖೆ ಚುರುಕುಗೊಂಡಿದೆ. ಅದರಲ್ಲಿಯೂ ಫೋನ್ ಕದ್ದಾಲಿಕೆ ಪ್ರಕರಣ ಭಾರಿ ಸದ್ದು ಮಾಡಿ ಇದೀಗ ಪ್ರಕರಣವನ್ನು ಬಿಎಸ್ ಯಡಿಯೂರಪ್ಪನವರು ಸಿಬಿಐ ಸಂಸ್ಥೆಗೆ ವಹಿಸಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ನಡುವೆಯೇ ಅಮಿತ್ ಶಾ ರವರು ಬಿಎಸ್ ಯಡಿಯೂರಪ್ಪನವರಿಗೆ ಮತ್ತೊಂದು ಖಡಕ್ ಆದೇಶ ಹೊರಡಿಸಿದ್ದಾರೆ. ಕೋಟ್ಯಂತರ ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅಮಿತ್ ಶಾ ರವರು ಈ ಹೆಜ್ಜೆ ಇಟ್ಟಿರುವುದು ರಾಜ್ಯದ ಕೆಲವು ದೊಡ್ಡ ದೊಡ್ಡ ನಾಯಕರಿಗೆ ಶಾಕ್ ನೀಡಿದೆ. ಕಾನೂನಿನಿಂದ ತಪ್ಪಿಸಿಕೊಳ್ಳಬಹುದು ಎಂದುಕೊಂಡಿದ್ದ ನಾಯಕರಿಗೆ ಅಮಿತ್ ಶಾ ಶಾಕ್ ನೀಡುವ ಮೂಲಕ ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ.

ಹೌದು ಸಾವಿರಾರು ಬಡ ಜನರು ತಮ್ಮ ಕಷ್ಟಪಟ್ಟು ದುಡಿದ ದುಡ್ಡನ್ನು ವಂಚಕ ಮಾನ್ಸೂನ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ರಾಜಕಾರಣಿಗಳಿಗೆ ಕೋಟ್ಯಾಂತರ ರೂಪಾಯಿ ನೀಡಿದ್ದೇನೆ, ಇದರಿಂದ ನನಗೆ ಬಹಳ ನಷ್ಟವಾಗಿದೆ, ಇದರಿಂದ ಸಾಮಾನ್ಯ ಜನರಿಗೆ ಮೋಸವಾಗಿದೆ ಎಂದು ಮಾನ್ಸೂನ್ ಹೇಳುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್ ಶಾ ರವರು ಈ ಪ್ರಕರಣದಲ್ಲಿ ಹಲವಾರು ರಾಜಕಾರಣಿಗಳು, ಉದ್ಯಮಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವಾರು ಹಿರಿಯ ನಾಯಕರು ಬಂಧಿಯಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕೂಡಲೇ ಕಾನೂನು ತಜ್ಞರ ಸಲಹೆ ಪಡೆದುಕೊಂಡು ಸಿಬಿಐ ಸಂಸ್ಥೆಗೆ ಈ ಪ್ರಕರಣವನ್ನು ಒಪ್ಪಿಸಿ ಎಂದು ಅಮಿತ್ ಶಾ ರವರು ಯಡಿಯೂರಪ್ಪನವರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಕೋಟ್ಯಂತರ ಜನರಿಗೆ ನ್ಯಾಯ ಸಿಗಲಿದೆ.

Post Author: Ravi Yadav