ಹಿಂದೂ ದೇಗುಲಗಳ ಮೇಲೆ ಕಣ್ಣು ಹಾಕಿದ ಜಗನ್ ಮಾಡಿದ್ದೇನು ಗೊತ್ತಾ?? ಸಿಡಿದೆದ್ದ ಮೋಹನದಾಸ್ ಪೈ

ಹಿಂದೂ ದೇಗುಲಗಳ ಮೇಲೆ ಕಣ್ಣು ಹಾಕಿದ ಜಗನ್ ಮಾಡಿದ್ದೇನು ಗೊತ್ತಾ?? ಸಿಡಿದೆದ್ದ ಮೋಹನದಾಸ್ ಪೈ

ಮೊದಲಿನಿಂದಲೂ ಜಗಮೋಹನ್ ರೆಡ್ಡಿ ರವರ ಪಕ್ಷದ ಮೇಲೆ ಭಾರಿ ದೊಡ್ಡ ಆರೋಪ ಕೇಳಿಬರುತ್ತಿದೆ ಅದುವೇ ಮತಾಂತರ. ಆಂಧ್ರಪ್ರದೇಶ ರಾಜ್ಯದಲ್ಲಿ ಧರ್ಮದ ಆಧಾರದ ಮೇಲೆ ಮತಾಂತರಗಳು ಹೆಚ್ಚಾಗಿದ್ದು ಜಗಮೋಹನ್ ರೆಡ್ಡಿ ರವರ ತಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂಬ ಮಾತುಗಳು ಹಲವಾರು ಬಾರಿ ಕೇಳಿಬಂದಿವೆ. ಅಷ್ಟೇ ಅಲ್ಲದೆ ಜಗಮೋಹನ್ ರೆಡ್ಡಿ ರವರ ಕುಟುಂಬ ಈ ಮತಾಂತರ ಗಳನ್ನು ನಡೆಸಲು ಕ್ರಿಶ್ಚಿಯನ್ ಮಶಿನರಿ ಕಡೆಯಿಂದ ಕೋಟ್ಯಾಂತರ ರೂ ಪಡೆದುಕೊಂಡು ಆಂಧ್ರಪ್ರದೇಶದಲ್ಲಿ ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದೆ ಎಂಬ ಆರೋಪಗಳು ಸಹ ಕೇಳಿಬಂದಿವೆ. ಇದೇ ವಿಚಾರವಾಗಿ ಇದೀಗ ಮತ್ತೊಮ್ಮೆ ಜಗಮೋಹನ್ ರೆಡ್ಡಿ ರವರು ತಾರತಮ್ಯ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಜಗಮೋಹನ್ ರೆಡ್ಡಿ ರವರು ಕೇವಲ ಹಿಂದೂ ದೇಗುಲಗಳಿಗೆ ಆದೇಶವೊಂದನ್ನು ಹೊರಡಿಸಿದ್ದಾರೆ.

ಹೌದು, ಆಂಧ್ರಪ್ರದೇಶದಲ್ಲಿ ಹೊಸ ಆದೇಶವನ್ನು ಹೊರಡಿಸಿರುವ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ರವರು ವಿರೋಧ ಪಕ್ಷದ ಸ್ಥಾನದಲ್ಲಿ ಯಾವುದೇ ಪಕ್ಷ ಕೂರಲು ಅರ್ಹ ವಿಲ್ಲ ಎಂಬುದು ತಿಳಿದ ತಕ್ಷಣ ಏಕಾಏಕಿ ಹಲವಾರು ಆದೇಶಗಳನ್ನು ಹೊರಡಿಸಿದ್ದಾರೆ. ಇದೀಗ ಹೊರಡಿಸಿರುವ ಆದೇಶದಲ್ಲಿ ಹಿಂದೂ ದೇಗುಲಗಳಿಗೆ ಸಂಬಂಧಪಟ್ಟ ಎಲ್ಲಾ ಭೂಮಿಯನ್ನು ಹಾಗೂ ದಾನವಾಗಿ ಬಂದಿರುವ ಜಮೀನುಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತದೆ ಎಂಬ ಆದೇಶ ಹೊರಡಿಸಿದ್ದಾರೆ. ಆದರೆ ಈ ಕಾನೂನು ಯಾವುದೇ ಮಸೀದಿ ಅಥವಾ ಚರ್ಚುಗಳಿಗೆ ಅನ್ವಯವಾಗುವುದಿಲ್ಲ ಬದಲಾಗಿ ಕೇವಲ ಹಿಂದೂ ದೇಗುಲಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದರ ವಿರುದ್ಧ ಇನ್ಫೋಸಿಸ್ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಮಣಿಪಾಲ್ ವಿದ್ಯಾಸಂಸ್ಥೆಯ ಚೇರ್ಮನ್ ಮೋಹನ್ ದಾಸ್ ಪೈ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ರವರ ವಿರುದ್ಧ ತಿರುಗಿಬಿದ್ದಿದ್ದಾರೆ. ಇದರ ಕುರಿತು ತಮ್ಮ ಅಭಿಪ್ರಾಯವನ್ನು ಹೊರಹಾಕಿರುವ ಮೋಹನದಾಸ್ ಪೈ ಅವರು, ಜಗಮೋಹನ್ ರೆಡ್ಡಿ ರವರು ತಾರತಮ್ಯ ಮಾಡುತ್ತಿದ್ದಾರೆ ಹಿಂದೂ ದೇಗುಲಗಳ ಭೂಮಿಯನ್ನು ವಶಪಡಿಸಿಕೊಳ್ಳಿ ಎಂಬ ಆದೇಶವನ್ನು ಹೊರಡಿಸಿರುವ ಜಗಮೋಹನ್ ರೆಡ್ಡಿ ರವರಿಗೆ, ಮಸೀದಿ ಹಾಗೂ ಚರ್ಚುಗಳು ಕಾಣ ಸಿಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡು ಈ ಆದೇಶವನ್ನು ಯಾಕೆ ಮಸೀದಿ ಅಥವಾ ಚರ್ಚುಗಳಿಗೆ ವಿಸ್ತರಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ಅಮೆರಿಕ ಮೂಲದ ಪಿಗುರುಸ್ ಎಂಬ ಸಂಸ್ಥೆಗೆ ವರದಿಯನ್ನು ಟ್ವೀಟ್ ಮಾಡಿರುವ ಮೋಹನದಾಸ್ ಪೈ ರವರು, ಜಗನ್ಮೋಹನ್ ರೆಡ್ಡಿ ರವರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಪೋಲಾವರಂ ಯೋಜನೆಯ ರಿವರ್ಸ್ ಟೆಂಡರ್, ಅನೇಕ ಸರ್ಕಾರಿ ಯೋಜನೆಗಳ ಸ್ಥಗಿತದ ಬಗ್ಗೆ ಕಿಡಿಕಾರಿದ ಅವರು ಇದೀಗ ಜಗನ್ಮೋಹನ್ ರೆಡ್ಡಿ ರವರ ಮತ್ತೊಂದು ಯೋಜನೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ ನೀವು ಯಾರ ಪರವಾಗಿ ಬೇಕಾದರೂ ಇರಿ, ಸರ್ವ ಧರ್ಮಿಯರು ಸಮಾನರು ಎನ್ನುವ ಭಾರತದಲ್ಲಿ ಈ ರೀತಿಯ ನಿರ್ಧಾರಗಳು ಕೇವಲ ಹಿಂದುಗಳಿಗೆ ಮಾತ್ರ ಯಾವ ಕಾರಣಕ್ಕೆ ಅನ್ವಯವಾಗುತ್ತದೆ ಎಂಬುದು ಇಲ್ಲಿಯ ವರೆಗೂ ಯಾರಿಗೂ ಅರ್ಥವಾಗಿಲ್ಲ. ನಮಗೂ ಸಹ ಈ ಅನುಮಾನ ಹಲವಾರು ವರ್ಷಗಳಿಂದ ಕಾಡುತ್ತಿದೆ. ಬಹುಶಹ ತಮ್ಮ ಮತ ಬ್ಯಾಂಕುಗಳಿಗೆ ಹೊಡೆತ ನೀಡುತ್ತದೆ ಎಂದು ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಹುದು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಅಭಿಪ್ರಾಯ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವೇನು?? ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.