ನೀವು ಹೆಮ್ಮೆಯ ಭಾರತೀಯನಾ ಅಥವಾ ಹಿಂದೂನಾ ಎಂದು ಕೇಳಿದ ಪ್ರಶ್ನೆಗೆ ಸೂರ್ಯ ಉತ್ತರ ನೀಡಿದ್ದು ಹೇಗೆ ಗೊತ್ತಾ??

ಬಿಜೆಪಿ ಪಕ್ಷದ ಈ ಬಾರಿ ಮುನ್ನೂರಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡು ಸ್ಪಷ್ಟ ಬಹುಮತ ಸಾಧಿಸಿದ ಅಧಿಕಾರಕ್ಕೇರಿದೆ. ಮುನ್ನೂರಕ್ಕೂ ಹೆಚ್ಚು ಸಂಸದರಲ್ಲಿ ಕರ್ನಾಟಕ ರಾಜ್ಯದ ಯುವ ಸಂಸದ ತೇಜಸ್ವಿ ಸೂರ್ಯ ರವರು ತಮ್ಮ ಸ್ಪಷ್ಟವಾದ ಹಾಗೂ ನಿಖರವಾದ ಮಾತುಗಳ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ನಾನು ಮೊದಲ ಬಾರಿಗೆ ಸಂಸತ್ತಿನ ಮೆಟ್ಟಿಲನ್ನು ಏರಿದ್ದೇನೆ ಎಂಬುದರ ಯಾವುದೇ ಅಂಜಿಕೆಯಿಲ್ಲದೆ ಸಂಸತ್ತಿನಲ್ಲಿ ಸಮಸ್ಯೆಗಳ ಕುರಿತು ಧ್ವನಿ ಎತ್ತಿರುವ ತೇಜಸ್ವಿ ಸೂರ್ಯ ರವರ ಕಾರ್ಯ ವೈಖರಿಗೆ ಎಲ್ಲರೂ ಮನಸೋತಿದ್ದಾರೆ. ಇನ್ನು ದೆಹಲಿಯಲ್ಲಿರುವ ಮಾಧ್ಯಮಗಳ ಕಥೆಯಂತು ಕೇಳಲೇ ಬೇಡಿ, ದಕ್ಷಿಣ ಭಾರತದಿಂದ ಹಲವಾರು ವರ್ಷಗಳಿಂದ ಸ್ಪಷ್ಟವಾಗಿ ಆಂಗ್ಲ ಭಾಷೆ ಮಾತನಾಡಬಲ್ಲ ಸಂಸದನಿಗಾಗಿ ದೆಹಲಿ ಮಾಧ್ಯಮಗಳು ಕಾದು ಕುಳಿತಿದ್ದವು.

ತೇಜಸ್ವಿ ಸೂರ್ಯ ರವರ ಕಾರ್ಯವೈಖರಿ ಹಾಗೂ ಆಂಗ್ಲ ಭಾಷೆಯ ಜ್ಞಾನ ನೋಡಿದ ಮಾಧ್ಯಮಗಳು ತೇಜಸ್ವಿ ಸೂರ್ಯ ಅವರ ಹಿಂದೆ ಬಿದ್ದಿದ್ದರು. ಇದೀಗ ಬಿ ಟಿ ವಿ ಐ ವಾಹಿನಿಯು ತೇಜಸ್ವಿ ಸೂರ್ಯ ರವರ ಜೊತೆ ನಡೆಸಲಾಗಿರುವ ಇಂಟರ್ವ್ಯೂ ಟ್ರೈಲರ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಟ್ರೈಲರ್ ನಲ್ಲಿ ತೇಜಸ್ವಿ ಸೂರ್ಯ ರವರನ್ನು ವರದಿಗಾರ್ತಿ ತಾವು ಹೆಮ್ಮೆಯ ಹಿಂದೂನಾ ಅಥವಾ ಹೆಮ್ಮೆಯ ಭಾರತೀಯನಾ ಎಂದು ಪ್ರಶ್ನಿಸಿದಾಗ ತೇಜಸ್ವಿ ಸೂರ್ಯ ರವರ ಉತ್ತರ ಹೇಗಿತ್ತು ಗೊತ್ತಾ?? ನನಗೆ ನಾನು ಭಾರತೀಯನಾ  ಅಥವಾ ಹಿಂದೂನಾ ಎಂಬುವುದರಲ್ಲಿ ಯಾವುದೇ ವ್ಯತ್ಯಾಸ ಕಾಣಸಿಗುತ್ತಿಲ್ಲ, ಎರಡು ಒಂದೇ ಎಂದು ಉತ್ತರ ನೀಡಿದ್ದಾರೆ.. ಇವರು ನೀಡಿದ ಒಂದು ಉತ್ತರದಿಂದ ಟ್ರೈಲರ್ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಟ್ರೈಲರ್ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಸಂಪೂರ್ಣ ವೀಡಿಯೋಗಾಗಿ ಕಾದುಕುಳಿತಿದ್ದಾರೆ.

Post Author: Ravi Yadav