ಬಿಜೆಪಿ ಸಂಸದರಿಗೆ ಖಡಕ್ ಆದೇಶ ಹೊರಡಿಸಿದ ಅಮಿತ್ ಶಾ ! ತಪ್ಪಿದರೆ ಎಚ್ಚರ

ಬಿಜೆಪಿ ಸಂಸದರಿಗೆ ಖಡಕ್ ಆದೇಶ ಹೊರಡಿಸಿದ ಅಮಿತ್ ಶಾ ! ತಪ್ಪಿದರೆ ಎಚ್ಚರ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಸಂಸತ್ತಿನ ಎರಡೂ ಸದನಗಳಲ್ಲಿ ಮಹತ್ವದ ಮಸೂದೆಗಳ ಅಂಗೀಕಾರ ನಡೆಯುತ್ತಿದೆ. ಮಹತ್ವದ ಮಸೂದೆಗಳನ್ನು ಜಾರಿ ಗೊಳಿಸಲು ಬಾರಿ ಉತ್ಸುಕತೆಯಿಂದ ಮುನ್ನುಗ್ಗುತ್ತಿರುವ ಅಮಿತ್ ಶಾ ರವರು ಈಗಾಗಲೇ ಹಲವಾರು ಕಠಿಣ ಮಸೂದೆಗಳನ್ನು ಮಂಡಿಸಿದ್ದಾರೆ. ಇನ್ನು ಮಹತ್ವದ ಮಸೂದೆಗಳ ಅಂಗೀಕಾರ ಬಾಕಿ ಉಳಿದಿರುವ ಕಾರಣ ಮೋದಿ ನೇತೃತ್ವದ ಸರ್ಕಾರವು ಈಗಾಗಲೇ ಸಂಸತ್ತಿನ ಅಧಿವೇಶನದ ಅವಧಿಯನ್ನು ಹೆಚ್ಚಳಮಾಡಿ ವಿಪಕ್ಷಗಳಿಗೆ ಶಾಕ್ ನೀಡಿದೆ. ಮೋದಿ ನೇತೃತ್ವದ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ತರಾತುರಿಯಲ್ಲಿ ಮಸೂದೆಗಳ ಅಂಗೀಕಾರ ವಾಗುತ್ತಿದೆ, ಬಿಜೆಪಿ ಪಕ್ಷವು ತನ್ನ ಸ್ಪೀಡಿಗೆ ಬ್ರೇಕ್ ಹಾಕಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೊಡದ ಬಿಜೆಪಿ ಪಕ್ಷವು ಮಸೂದೆಗಳ ಅಂಗೀಕಾರ ದಲ್ಲಿ ನಿರತವಾಗಿದೆ.

ಇದೀಗ ಅಮಿತ್ ಶಾ ರವರು ಇದೇ ವಿಚಾರವಾಗಿ ಬಿಜೆಪಿ ಪಕ್ಷದ ಸಂಸದರಿಗೆ ಮತ್ತೊಂದು ಖಡಕ್ ಎಚ್ಚರಿಕೆ ನೀಡಿದ್ದು, ನಿನ್ನೆ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ನಮ್ಮ ಪಕ್ಷದ ಸಂಸದರ ಸಂಖ್ಯೆ ಮುನ್ನೂರಕ್ಕೂ ಹೆಚ್ಚಿದೆ. ಇದುವರೆಗೂ ಮಂಡಿಸಿದ ಮಸೂದೆಗಳು ಅಂಗೀಕಾರವಾಗುತ್ತಿವೆ, ಆದರೆ ಸಂಸತ್ತಿನಲ್ಲಿ 303 ಬಿಜೆಪಿ ಸದಸ್ಯರಿದ್ದರೂ ಅನುಮೋದಿಸಲ್ಪಟ್ಟ ಮತಗಳ ಸಂಖ್ಯೆ ಕಡಿಮೆ ಇದೆ, ಸಂಸತ್ತಿನ ಉಭಯ ಸದನಗಳಲ್ಲಿ ಮಹತ್ವದ ಮತ್ತು ಪ್ರಮುಖ ಮಸೂದೆಗಳು ಮತ್ತು ಕರಡು ಶಾಸನಗಳ ಅನುಮೋದನೆ ವೇಳೆ ಬೆಂಬಲ ನೀಡಲು ಬಿಜೆಪಿ ಸಂಸದರು ಗರಿಷ್ಠ ಸಂಖ್ಯೆಯಲ್ಲಿ ಹಾಜರಾಗಬೇಕೆಂದು ಎಂದು ಆದೇಶ ಹೊರಡಿಸಿದ್ದಾರೆ. ಇದೇ ವೇಳೆಯಲ್ಲಿ ಇನ್ನೂ ಹಲವಾರು ಮಹತ್ವದ ಮಸೂದೆಗಳು ಬಾಕಿ ಉಳಿದಿದೆ ಎಂಬ ಅಂಶ ಸಹ ಹೊರಬಿದ್ದಿದೆ. ಒಟ್ಟಿನಲ್ಲಿ ಬಿಜೆಪಿ ಪಕ್ಷವು ಮತ್ತಷ್ಟು ಮಸೂದೆಗಳನ್ನು ಮಂಡಿಸುವ ಮೂಲಕ ದೇಶದ ಅಭಿವೃದ್ಧಿಯ ಗೇರ್ ಚೇಂಜ್ ಮಾಡಲು ನಿರ್ಧಾರ ಮಾಡಿದಂತೆ ಕಾಣುತ್ತದೆ.