ಬಿಗ್ ನ್ಯೂಸ್: ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಕೇಂದ್ರ ಸರ್ಕಾರದ ಸ್ಕೆಚ್?? ರಾಜನಾಥ್ ಸಿಂಗ್ ಹೇಳಿದ್ದೇನು ಗೊತ್ತಾ??

ಬಿಗ್ ನ್ಯೂಸ್: ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಕೇಂದ್ರ ಸರ್ಕಾರದ ಸ್ಕೆಚ್?? ರಾಜನಾಥ್ ಸಿಂಗ್ ಹೇಳಿದ್ದೇನು ಗೊತ್ತಾ??

ಭಾರತವು ಸ್ವತಂತ್ರಗೊಂಡ ನಂತರ ವಿಭಜನೆಯಾಗಿ ಪಾಕಿಸ್ತಾನ ಹಾಗೂ ಭಾರತ ದೇಶಗಳು ಭೂಮಿಗಳನ್ನು ಹಂಚಿಕೊಂಡರು. ಎಲ್ಲಾ ಒಪ್ಪಂದಗಳಂತೆ ಭಾರತದ ಕಿರೀಟ ಎಂದೇ ಖ್ಯಾತಿ ಪಡೆದು ಕೊಂಡಿರುವ ಜಮ್ಮು ಕಾಶ್ಮೀರವು ಭಾರತದ ಪಾಲಾಗಿತ್ತು. ಆದರೆ ನೆರೆಯ ಕುತಂತ್ರಿ ರಾಷ್ಟ್ರವಾದ ಪಾಕಿಸ್ತಾನದ ಕುತಂತ್ರ ನೀತಿ ನಿಮಗೆಲ್ಲರಿಗೂ ತಿಳಿದೇ ಇದೆ, ಮೊದಲಿನಿಂದಲೂ ಕಾಶ್ಮೀರವನ್ನು ನಮಗೆ ಬಿಟ್ಟುಕೊಡಬೇಕು ಎಂದು ಪ್ರತಿಪಾದಿಸುತ್ತಾ ಬಂದಿರುವ ಪಾಕಿಸ್ತಾನವು ಕಾಶ್ಮೀರದ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಈ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ಸು ತೆಗೆದುಕೊಳ್ಳುವುದು ಭಾರತಕ್ಕೆ ಕ್ಲಿಷ್ಟಕರವಾದ ಸಂಗತಿಯಾಗಿರಲಿಲ್ಲ ಆದರೆ, ಅದ್ಯಾಕೋ ಕಾಂಗ್ರೆಸ್ ಪಕ್ಷವು 60 ವರ್ಷಗಳ ಆಡಳಿತ ನಡೆಸಿದರೂ ಸಹ ಪಾಕ್ ಆಕ್ರಮಿತ ಕಾಶ್ಮೀರದ ವಿರುದ್ಧ ಕಿಂಚಿತ್ತು ಕ್ರಮಗಳನ್ನು ಕೈಗೊಳ್ಳಲಿಲ್ಲ.

ಮತ್ತೊಂದೆಡೆ ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿ ಕುರಿತಿರುವ ನರೇಂದ್ರ ಮೋದಿರವರು ಮಾತ್ರ ಪಾಕಿಸ್ತಾನದ ವಿರುದ್ಧ ಈಗಾಗಲೇ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡು ಪಾಕಿಸ್ತಾನಕ್ಕೆ ಹಲವು ಬಾರಿ ಬಿಸಿ ಮುಟ್ಟಿಸಿದ್ದಾರೆ. ಸ್ವಲ್ಪ ಕೆಮ್ಮಿದರೂ ಸಾಕು ನಿಮ್ಮ ದೇಶದೊಳಗೆ ಬಂದು ಹೊಡೆಯುತ್ತೇವೆ ಎಂಬುದನ್ನು ಸಾಬೀತು ಮಾಡಿ ಭಾರತೀಯ ಸೇನೆಯ ತಾಕತ್ತನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಇಷ್ಟೆಲ್ಲಾ ರೀತಿಯಲ್ಲಿ ಕುತಂತ್ರಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿದ ನರೇಂದ್ರ ಮೋದಿ ರವರು ಅದ್ಯಾಕೆ ಪಾಕ್ ಆಕ್ರಮಿತ ಕಾಶ್ಮೀರದ ವಿರುದ್ಧ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂಬ ಪ್ರಶ್ನೆ ಪ್ರತಿಯೊಬ್ಬನ ಭಾರತೀಯನ ಮನದಲ್ಲಿ ಕಾಡುತ್ತಿತ್ತು. ಆದರೆ ಇದಕ್ಕಾಗಿ ಕೇಂದ್ರ ಸರ್ಕಾರ ಬಿಗ್ ಸ್ಕೆಚ್ ರೂಪಿಸಿದಂತೆ ಕಾಣುತ್ತಿದೆ, ಈ ವಿಷಯದ ಬಗ್ಗೆ ಇದೀಗ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವರು ಮಾತನಾಡಿದ್ದಾರೆ. ಹೌದು ಈ ವಿಷಯ ತಿಳಿಯುವ ಮುನ್ನ ಇದರ ಮೂಲವೇನು ನೀವು ತಿಳಿದುಕೊಳ್ಳಲೇಬೇಕು.

ಕಳೆದ ಹಲವಾರು ವರ್ಷಗಳಿಂದಲೂ ಭಾರತ ದೇಶವು ಪಾಕಿಸ್ತಾನದ ಜೊತೆ ಯಾವುದೇ ರಾಜಿಯನ್ನು ಮಾಡಿಕೊಂಡಿಲ್ಲ, ಇದೇ ವಿಚಾರವಾಗಿ ಪ್ರತಿಬಾರಿಯೂ ಪಾಕಿಸ್ತಾನ ದೇಶವು ಅದರಲ್ಲಿಯೂ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎರಡು ದೇಶಗಳು ದಯವಿಟ್ಟು ಕುಳಿತುಕೊಂಡು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಬೇಡಿಕೊಳ್ಳುತ್ತಿವೆ. ಪರಿಸ್ಥಿತಿ ಹೀಗಿರುವಾಗ ಬಲಾಢ್ಯ ಅಮೆರಿಕ ದೇಶದ ಅಧ್ಯಕ್ಷ ಟ್ರಂಪ್ ರವರು ಸುಖಾಸುಮ್ಮನೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಮಾತುಕತೆಗೆ ಆತಿತ್ಯ ವಹಿಸಿ, ಎರಡು ದೇಶಗಳ ನಡುವಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಈಗಾಗಲೇ ಮೋದಿ ರವರ ಜೊತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಇಡೀ ವಿಶ್ವವೇ ಈ ವಿಷಯದ ಕುರಿತು ಚರ್ಚೆ ಮಾಡುವಂತೆ ಮಾಡಿದ್ದರು.

ಆದರೆ, ಇದಕ್ಕೆ ಪ್ರತಿಕ್ರಯಿಸಿರುವ ಭಾರತ ದೇಶವು ನಾವು ಪಾಕಿಸ್ತಾನ ದೇಶದ ಜೊತೆ ಉಗ್ರರನ್ನು ಮಟ್ಟ ಹಾಕುವ ವರೆಗೂ ಯಾವುದೇ ಮಾತುಕತೆ ನಡೆಸಲು ತಯಾರಿಲ್ಲ. ಈ ಕುರಿತು ನಾವು ಎಂದಿಗೂ ನಿಮ್ಮ ಬಳಿ ಮಾತುಕತೆ ನಡೆಸಿ ಎಂದು ಕೇಳಿಕೊಂಡು ಬಂದಿಲ್ಲ ಎಂದು ಅವರಿಗೆ ಉತ್ತರ ನೀಡಿದರು. ಒಂದು ವಿಶ್ವದ ಬಲಾಢ್ಯ ದೇಶದ ಅಧ್ಯಕ್ಷನಾಗಿ ಟ್ರಂಪ್ ರವರು ಈ ರೀತಿ ಹೇಳಿಕೆ ನೀಡಿರುವುದು ವಿಪರ್ಯಾಸವೇ ಸರಿ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ವಿಪಕ್ಷಗಳು ಇಂದು ನರೇಂದ್ರ ಮೋದಿ ರವರ ವಿರುದ್ಧ ಸಂಸತ್ತಿನಲ್ಲಿ ಘೋಷಣೆಗಳನ್ನು ಕೂಗಿ ಸ್ಪಷ್ಟನೆ ನೀಡುವಂತೆ ಒತ್ತಾಯ ಮಾಡಿದರು. ವಿರೋಧ ಪಕ್ಷಗಳ ತೀವ್ರ ಒತ್ತಾಯಕ್ಕೆ ಮಣಿದ ಆಡಳಿತ ಪಕ್ಷ ಕೊನೆಗೂ ಉತ್ತರ ನೀಡಲು ಸಿದ್ಧವಾಗಿದೆ ಬಯಲಾಗಿತ್ತು ಶಾಕಿಂಗ್ ವಿಷಯ.

ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ರವರ ನಡುವಿನ ಮಾತುಕತೆಯ ಸಂಪೂರ್ಣ ವಿವರಣೆಗಳನ್ನು ನೀಡಲು ಒತ್ತಾಯ ಮಾಡಿದ ವಿರೋಧಪಕ್ಷಗಳಿಗೆ ರಾಜನಾಥ್ ಸಿಂಗ್ ಅವರು ಉತ್ತರ ನೀಡಿದರು. ಇವರು ಕೇವಲ ಉತ್ತರ ನೀಡಿದರೆ ಅದು ಅಷ್ಟಾಗಿ ಸದ್ದು ಆಗುತ್ತಿರಲಿಲ್ಲ. ಆದರೆ ಉತ್ತರ ನೀಡುವ ವೇಳೆಯಲ್ಲಿ ಪಾಕಿಸ್ತಾನಕ್ಕೆ ಕಡಕ್ ಸಂದೇಶವೊಂದು ರವಾನೆಯಾಗಿತ್ತು. ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಮುಂದಿನ ಬಿಗ್ ಸ್ಕೆಚ್ ಯಾವುದು ಎಂದು ಹೊರಬಿದ್ದಿತ್ತು. ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ರವರು ಜಪಾನ್ ದೇಶದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಹಾಗೂ ಟ್ರಂಪ್ ರವರ ನಡುವೆ ನಡೆದ ಮಾತುಕತೆಯಲ್ಲಿ ಜಮ್ಮು ಹಾಗೂ ಕಾಶ್ಮೀರ ಯಾವುದೇ ವಿಚಾರ ಪ್ರಸ್ತಾಪವಾಗಿಲ್ಲ ಎಂದು ವಿರೋಧಪಕ್ಷಗಳಿಗೆ ಸ್ಪಷ್ಟಪಡಿಸಿದರು ಅಷ್ಟೇ ಅಲ್ಲದೆ ತಮ್ಮ ಮಾತು ಮುಂದುವರಿಸಿದ ರಾಜನಾಥ್ ಸಿಂಗ್ ರವರು,

ಕಾಶ್ಮೀರದ ವಿಷಯದಲ್ಲಿ ಮತ್ತೊಂದು ದೇಶದ ಅಧ್ಯಕ್ಷರು ಮಧ್ಯಸ್ಥಿಕೆ ವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ತ್ರಿಪಕ್ಷೀಯ ಮಾತುಕತೆ ಅಸಾಧ್ಯ. ಯಾಕೆಂದರೆ ಕಾಶ್ಮೀರ ವಿಷಯ ಬಂದಾಗ ನಾವು ಕೇವಲ ಇಂದಿನ ಕಾಶ್ಮೀರದ ವಿಚಾರವನ್ನು ಪ್ರಸ್ತಾವ ಮಾಡುವುದಿಲ್ಲ ಬದಲಾಗಿ, ಹಲವಾರು ವರ್ಷಗಳಿಂದ ಕುತಂತ್ರ ನೀತಿಯನ್ನು ಅನುಸರಿಸಿ ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರದ ವಿಷಯವನ್ನು ಸೇರಿಸಿಕೊಂಡು ಮಾತುಕತೆಯ ನಡೆಸಲಾಗುತ್ತದೆ ಎಂದು ಹೇಳಿಕೆ ನೀಡಿದರು. ಈ ಹೇಳಿಕೆ ಇದೀಗ ಭಾರಿ ಸದ್ದು ಮಾಡುತ್ತಿದ್ದು, ಮೋದಿ ನೇತೃತ್ವದ ಕೇಂದ್ರಸರ್ಕಾರದ ಗುರಿ ಕೇವಲ ಜಮ್ಮು-ಕಾಶ್ಮೀರ ವಲ್ಲ, ಪಾಕ್ ಆಕ್ರಮಿತ ಕಾಶ್ಮೀರವನ್ನು ಸಹ ಭಾರತದ ತೆಕ್ಕೆಗೆ ತೆಗೆದುಕೊಳ್ಳವುದು ಕೇಂದ್ರ ಸರ್ಕಾರದ ಪ್ರಮುಖ ಗುರಿ ಎಂದು ತಿಳಿದ ತಕ್ಷಣ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ..