ಗ್ರೇಟ್ ನ್ಯೂಸ್: ನೀರಿನ ನಿರ್ವಹಣೆಗೆ ಮಹತ್ವದ ಹೆಜ್ಜೆ ಇಟ್ಟ ಪಿಯೂಷ್ ಗೊಯಲ್

ಪಿಯೂಷ್ ಗೊಯಲ್ ರವರು ಕೇಂದ್ರ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತೀಯ ರೈಲ್ವೆಯು ಅಭಿವೃದ್ಧಿಯನ್ನು ಕಾಣುತ್ತಿದ್ದು, ಸ್ವಚ್ಛತೆ, ಕೆಲಸಗಾರರ ನಿರ್ವಹಣೆ, ಗ್ರಾಹಕರಿಗೆ ರೆಸ್ಪಾನ್ಸ್ ನೀಡುವ ರೀತಿ ಎಲ್ಲವೂ ಬದಲಾಗಿದೆ. ಇದಕ್ಕೆಲ್ಲ ಮೂಲಕಾರಣ ಪಿಯೂಷ್ ಗೊಯಲ್ ರವರ ಕಾರ್ಯವೈಕರಿ ಎಂದರೆ ತಪ್ಪಾಗಲಾರದು. ಇದೀಗ ಇದೇ ರೀತಿಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿರುವ ಪಿಯೂಷ್ ಗೊಯಲ್ ಅವರು ನರೇಂದ್ರ ಮೋದಿ ಅವರ ಕನಸನ್ನು ಈಡೇರಿಸಲು ನೆರವಾಗಲಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ರೈಲ್ವೆಯು ಎಲ್ಲ ಯೋಜನೆಗಳಲ್ಲಿ ಯಶಸ್ವಿಯಾದಂತೆ ಈ ಯೋಜನೆಯಲ್ಲಿಯೂ ಯಶಸ್ವಿಯಾದರೆ,ಈ ಯೋಜನೆಯು ವಿಶ್ವಮಟ್ಟದಲ್ಲಿ ಭಾರಿ ಸದ್ದು ಮಾಡಲಿದೆ. ಹಾಗೂ ಹಲವಾರು ದೇಶಗಳಿಗೆ ಭಾರತೀಯ ರೈಲ್ವೆಯು ಮಾದರಿಯಾಗಲಿದೆ.

ಹೌದು,ಇತ್ತೀಚೆಗಷ್ಟೇ ನರೇಂದ್ರ ಮೋದಿರವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ನೀರನ್ನು ಉಳಿಸುವಂತೆ ಕರೆನೀಡಿದ್ದರು. ಅದೇರೀತಿ ಕೇವಲ ಕೆಲವು ಗಂಟೆಗಳ ಹಿಂದಷ್ಟೇ ಬಜೆಟ್ ಮಂಡನೆ ಮಾಡಿರುವ ನಿರ್ಮಲ ಸೀತಾರಾಮನ್ ರವರು ಭಾರತದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುವಂತಹ ಪರಿಸ್ಥಿತಿ ಎದುರಾಗಲಿದೆ. ಆದ ಕಾರಣದಿಂದಲೇ ನೀರನ್ನು ಸಂರಕ್ಷಣೆ ಮಾಡಬೇಕು, ಹಾಗಂತ ಯಾರಿಗೂ ನೀರಿನ ಕೊರತೆಯೂ ಸಹ ಎದುರಾಗಬಾರದು. ನೀರಿನ ಸಂರಕ್ಷಣೆಯ ಜೊತೆಗೆ 2022ರ ವೇಳೆಗೆ ಇಡೀ ಭಾರತದಲ್ಲಿ ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಉದ್ದೇಶ ನಮ್ಮದು ಎಂದು ಸಾರಿ ಹೇಳಿದ್ದರು. ಇದರ ಅಂಗವಾಗಿ ಜಲಶಕ್ತಿ ಎಂಬ ಯೋಜನೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ನೀರನ್ನು ರಕ್ಷಿಸಲು ಮುಂದಾಗಿತ್ತು.

ಇದೀಗ ಇದೇ ರೀತಿ ರೈಲ್ವೆ ಇಲಾಖೆಯಲ್ಲಿ ನೀರಿನ ಸಂರಕ್ಷಣೆಗೆ ಒತ್ತು ನೀಡಲು ನಿರ್ಧಾರ ಮಾಡಿರುವ ಪಿಯೂಷ್ ಘೋಯಲ್ ರವರು, ಮಿಷನ್ ಪಾನಿ ಎಂಬ ಯೋಜನೆಯ ಅಡಿಯಲ್ಲಿ ನೀರನ್ನು ಸಂರಕ್ಷಣೆ ಮಾಡುವ ಹಲವಾರು ವಿಧಾನಗಳನ್ನು ತಿಳಿಸಿದ್ದಾರೆ, ಇನ್ನು ಮುಂದೆ ಭಾರತದ ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹಕ್ಕೆ ಒತ್ತು ನೀಡಲಿದ್ದು, ‌ ಮುಂದಿನ ದಿನಗಳಲ್ಲಿ ರೈಲುಗಳು ಹಾಗೂ ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಮಳೆ ನೀರನ್ನು ಬಳಸಲು ಸಂಗ್ರಹ ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ 4 ಗಂಟೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇಷ್ಟು ದಿವಸ ದೊಡ್ಡ ಕುಡಿಯುವ ವಾಟರ್ ಬಾಟಲ್ ಗಳನ್ನು ನೀಡಲಾಗುತ್ತಿತ್ತು, ‌ ಇನ್ನು ಮುಂದೆ ನೀರಿನ ಬಾಟಲ್ ಗಾತ್ರವನ್ನು ಕಡಿಮೆ ಮಾಡಿ ಅಗತ್ಯವಿದ್ದಲ್ಲಿ ಮಾತ್ರ ಮತ್ತಷ್ಟು ನೀರು ಗ್ರಾಹಕರಿಗೆ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಬಹಳ ನೀರು ಕೇವಲ ಭೋಗಿಗಳನ್ನು ಸ್ವಚ್ಛ ಮಾಡುವುದಕ್ಕೆ ಖರ್ಚಾಗುತ್ತಿದೆ. ಆದ ಕಾರಣದಿಂದ ಇನ್ನು ಮುಂದೆ ಭಾರತೀಯ ರೈಲ್ವೆಯು ಸ್ಪೀಡ್ ಜೆಟ್ ಸ್ಪ್ರೇ ಗಳನ್ನು ಬಳಸಲಾಗುತ್ತದೆ. ರೈಲ್ವೆ ಇಲಾಖೆಯು ಸ್ವಚ್ಛತೆಗಾಗಿ ಬಳಸಿದ ನೀರನ್ನು ಮತ್ತೊಮ್ಮೆ ಫಿಲ್ಟರ್ ಮಾಡಿ ಶುದ್ಧ ನೀರಾಗಿ ಬದಲಾಯಿಸಿದ ನಂತರ ಮತ್ತೊಮ್ಮೆ ಅದೇ ನೀರನ್ನು ಸ್ವಚ್ಛತೆಗಾಗಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ನೀರಿನ ಸಂರಕ್ಷಣೆಯ ಮೂಲಕ ಪ್ರತಿಯೊಬ್ಬ ಭಾರತೀಯನು ನೀರಿನ ಯೋಧನಾಗಬೇಕು ಎಂಬುದು ಮಿಷನ್ ಪಾನೀಯ ಉದ್ದೇಶವಾಗಿದೆ. ನೀರಿನ ಸಂಪನ್ಮೂಲಗಳ ಸವಳಿಕೆಯ ವಿರುದ್ಧ ಹೋರಾಟ ಹಾಗೂ ಕುಡಿಯುವ ಮತ್ತು ಇತರ ಅಗತ್ಯ ಉದ್ದೇಶಗಳಾಗಿವೆ.ಒಟ್ಟಿನಲ್ಲಿ ಈ ಮಹತ್ವದ ಯೋಜನೆಯನ್ನು ಇಡೀ ರೈಲ್ವೆ ಇಲಾಖೆಯಲ್ಲಿ ಇದೀಗ ಜಾರಿಗೆ ತರಲು ನಿರ್ಧಾರ ಮಾಡಿದ್ದು, ಎಲ್ಲ ಯೋಜನೆಗಳಂತೆ ಈ ಯೋಜನೆಯು ಯಶಸ್ವಿಗೊಂಡಲ್ಲಿ ಕೋಟ್ಯಂತರ ಲೀಟರ್ ಗಳಷ್ಟು ನೀರು ದಿನಕ್ಕೆ ಉಳಿತಾಯವಾಗಲಿದೆ ಹಾಗೂ ಈ ಯೋಜನೆ ಇಡೀ ವಿಶ್ವಕ್ಕೆ ಮಾದರಿಯಾಗಲಿದೆ

Post Author: Ravi Yadav