ವಿಶ್ವಕಪ್ ಕ್ರಿಕೆಟ್ ನ ಬಗ್ಗೆ ಭವಿಷ್ಯ ನುಡಿದ ಸಿದ್ದು- ಹೇಳಿದ್ದೇನು ಗೊತ್ತಾ??

ಇದೀಗ ಇಡೀ ವಿಶ್ವದಲ್ಲಿ ವಿಶ್ವಕಪ್ ಜ್ವರ ಏರಿದೆ, ಅದರಲ್ಲಿಯೂ ವಿಶ್ವದ ಬಲಾಡ್ಯ ನಾಲ್ಕು ತಂಡಗಳು ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡು, ವಿಶ್ವಕಪ್ ಟೂರ್ನಿಯನ್ನು ಮತ್ತಷ್ಟು ರಂಗೇರಿಸಲು ಕಾಯುತ್ತಿವೆ. ಇತ್ತ ಬಲಾಡ್ಯ ಭಾರತ ದೇಶವು ಸಹ ಸೆಮಿಫೈನಲ್ ತಲುಪಿದ್ದು, ಇಂದು ಶ್ರೀಲಂಕಾ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಭಾರತ ತಂಡವು ಈ ಪಂದ್ಯವನ್ನು ಗೆದ್ದು, ನಂತರ ನಡೆಯುವ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡಗಳ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಗೆದ್ದಲ್ಲಿ ಭಾರತ ಅಗ್ರಸ್ಥಾನಕ್ಕೇರಲಿದೆ. ಈ ಎಲ್ಲಾ ಲೆಕ್ಕಾಚಾರಗಳ ನಡುವೆಯೇ ಇದೀಗ ವಿಶ್ವಕಪ್ ಕ್ರಿಕೆಟಿನ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯರವರು ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ಮಾತನಾಡಿರುವ ಸಿದ್ದರಾಮಯ್ಯರವರು ರಾಜಕೀಯ ವಿಚಾರಗಳನ್ನು ಪಕ್ಕಕ್ಕಿಟ್ಟು ಇದ್ದಕ್ಕಿದ್ದಹಾಗೆ ವಿಶ್ವಕಪ್ ಬಗ್ಗೆ ಭವಿಷ್ಯ ನುಡಿದಿರುವುದು ಎಲ್ಲೆಡೆ ವೈರಲ್ ಆಗಿದೆ.

ಹೌದು ಇದೀಗ ವಿಶ್ವಕಪ್ ಕ್ರಿಕೆಟಿನ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯರವರು, ಆಸ್ಟ್ರೇಲಿಯ ತಂಡಕ್ಕಿಂತ ಭಾರತ ತಂಡವು ಬಲಿಷ್ಠವಾಗಿದೆ. ನಾನು ಹಾಕಿರುವ ಲೆಕ್ಕಚಾರದ ಪ್ರಕಾರ ಭಾರತ ತಂಡವು ವಿಶ್ವಕಪ್ ಗೆಲ್ಲಲಿದೆ, ಚಿಕ್ಕಂದಿನಲ್ಲಿ ನಾನು ಕ್ರಿಕೆಟ್ ಆಡುತ್ತಿದ್ದೆ, ಐದನೇ ತರಗತಿಯಿಂದಲೇ ನನಗೆ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಇತ್ತು, ಅದರಲ್ಲಿಯೂ ಕಬಡ್ಡಿ ಎಂದರೆ ನನಗೆ ಬಹಳ ಇಷ್ಟ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಮಾಧ್ಯಮದವರಿಗೆ ಈ ರೀತಿಯ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯರವರನ್ನು ಗಮನಿಸಿದರೆ ಬಹಳ ಕೂಲ್ ಹಾಗೂ ರಿಲಾಕ್ಸ್ ಮೂಡಲ್ಲಿ ಇರುವಂತೆ ಕಂಡುಬರುತ್ತಿದೆ. ಈ ವಿಷಯವನ್ನು ಹೊರಗಿಟ್ಟು ನೋಡಿದರೆ ಇಂದು ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ನಡೆಯಲಿದ್ದು, ಒಂದೆಡೆ ಭಾರತ ತಂಡ ಅಗ್ರಸ್ಥಾನಕ್ಕೆ ಏರಲು ಪಂದ್ಯ ಗೆಲ್ಲಲು ಉತ್ಸುಕವಾಗಿದೆ, ಮತ್ತೊಂದೆಡೆ ಈಗಾಗಲೇ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿರುವ ಶ್ರೀಲಂಕಾ ತಂಡವು ಈ ಪಂದ್ಯವನ್ನು ಗೆದ್ದು ವಿಶ್ವಕಪ್ ಅಭಿಯಾನವನ್ನು ಗೆಲುವಿನ ಮೂಲಕ ಅಂತ್ಯಗೊಳಿಸಲು ಉತ್ಸುಕವಾಗಿದೆ.

ಯಾವುದೇ ರೀತಿಯ ವೆಬ್ಸೈಟ್ ಡಿಸೈನ್ ಅಥವಾ ಜಾಹೀರಾತಿಗಾಗಿ 9148497148 ನಂಬರ್ಗೆ ವಾಟ್ಸಾಪ್ ಮಾಡಿ.

Post Author: Ravi Yadav