ಬಿಜೆಪಿ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ ಯಡಿಯೂರಪ್ಪ ! ಹೇಳಿದ್ದು ಏನು ಗೊತ್ತಾ??

ಇದೀಗ ರಾಜ್ಯದಲ್ಲಿ ಹೊಸ ಸರಕಾರ ರಚನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕುಮಾರಸ್ವಾಮಿ ರವರು ಅಮೆರಿಕ ದೇಶದಿಂದ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬಂದ ನಂತರ ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ. ಆದರೆ ಈಗಾಗಲೇ ಎಲ್ಲ ಬಂಡಾಯ ಶಾಸಕರು ಮುಂಬೈನ ಪ್ರತಿಷ್ಠಿತ ಹೋಟೆಲ್ ನಲ್ಲಿ ತಂಗಿದ್ದಾರೆ, ಆದಕಾರಣ ಯಾವ ಶಾಸಕರು ಕುಮಾರಸ್ವಾಮಿರವರ ಸಂಪರ್ಕಕ್ಕೆ ಸಿಗುವುದು ಬಹುತೇಕ ಅನುಮಾನವಾಗಿದೆ. ಈ ಎಲ್ಲಾ ವಿದ್ಯಮಾನಗಳಿಂದ ಬಿಜೆಪಿ ಪಕ್ಷವು ಇನ್ನೂ ಎರಡು ಶಾಸಕರು ರಾಜೀನಾಮೆ ನೀಡಿದ ತಕ್ಷಣ ಸರ್ಕಾರ ರಚಿಸುವ ಪ್ರಯತ್ನಕ್ಕೆ ಕೈ ಹಾಕಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಕೇವಲ ಎರಡು ದಿನಗಳ ಹಿಂದಷ್ಟೇ ಒಂದು ವೇಳೆ ದೋಸ್ತಿ ಸರ್ಕಾರವು ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ಕಳೆದುಕೊಂಡಲ್ಲಿ ಸರ್ಕಾರ ರಚಿಸಿದೆ ಇರಲು ನಾವು ಸನ್ಯಾಸಿಗಳಲ್ಲ ಎಂಬ ಮಾತನ್ನು ಖುದ್ದು ಯಡಿಯೂರಪ್ಪನವರು ಹೇಳಿದ್ದರು.

ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದ ಬಿಜೆಪಿ ಪಕ್ಷದ ಅಭಿಮಾನಿಗಳು, ಬಿಜೆಪಿ ಪಕ್ಷವು ಇನ್ನು 2, ಶಾಸಕರು ರಾಜೀನಾಮೆ ನೀಡಿದ ತಕ್ಷಣ ಸರ್ಕಾರ ರಚಿಸುವ ಕೆಲಸಕ್ಕೆ ಕೈ ಹಾಕಲಿದೆ ಹಾಗೂ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನಂಬಿದ್ದರು. ಆದರೆ ತಮ್ಮ ಮುಂದಿನ ನಡೆಯನ್ನು ಸ್ಪಷ್ಟವಾಗಿ ಹೊರಹಾಕಿರುವ ಬಿಎಸ್ ಯಡಿಯೂರಪ್ಪನವರು, ಶಾಸಕರ ರಾಜೀನಾಮೆಗೂ ನನಗೂ ಯಾವುದೇ ಸಂಬಂಧವಿಲ್ಲ. ಸದ್ಯಕ್ಕೆ ನಾವು ಯಾವ ಸರ್ಕಾರ ರಚನೆಗೂ ಕೈಹಾಕುವುದಿಲ್ಲ, ಮೈತ್ರಿ ಪಕ್ಷದ ಶಾಸಕರು ರಾಜೀನಾಮೆ ನೀಡಲಿ, ಆದರೆ ನಾವು ಮಾತ್ರ ಸದ್ಯಕ್ಕೆ ಸರ್ಕಾರ ರಚನೆ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಸಂಪೂರ್ಣವಾಗಿ ದೋಸ್ತಿಗಳ ನಡುವಿನ ಭಿನ್ನಮತ ಹೊರಬೀಳಬೇಕು, ಅದೆಷ್ಟು ಜನ ರಾಜೀನಾಮೆ ನೀಡುತ್ತಾರೆ ನೀಡಲಿ ತದನಂತರ ನಮ್ಮ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.

Post Author: Ravi Yadav